ಕಲಬುರಗಿ ರೈತರ ಖಾತೆಗೆ ರು.243.52 ಕೋಟಿ ವಿಮೆ ಪರಿಹಾರ ವಿತರಣೆಗೆ ಚಾಲನೆ

ಕಲಬುರಗಿಯಲ್ಲಿ ಬೆಳೆ ವಿಮೆ ವಿತರಣೆಗೆ ಚಾಲನೆ
ಕಲಬುರಗಿಯಲ್ಲಿ ಬೆಳೆ ವಿಮೆ ವಿತರಣೆಗೆ ಚಾಲನೆ
Published on
ಕಲಬುರಗಿ: ಜಿಲ್ಲೆಯಲ್ಲಿ ಅಗ್ರಿಟೆಕ್​ ಅಸಿಲೇಟರ್​ ಸ್ಥಾಪಿಸುತ್ತಿದ್ದು, ಜಿಲ್ಲೆಯನ್ನು ಕೃಷಿ ಹಬ್​ ಮಾಡಲು ಎಲ್ಲ ಪ್ರಯತ್ನ ನಡೆದಿದ್ದು, ಪ್ರಸಕ್ತ ಬಜೆಟ್​ನಲ್ಲಿ ಮಿಲೆಟ್​ ಹಬ್​ ಸ್ಥಾಪನೆ ಘೋಷಿಸಿದ್ದು, ಕಲಬುರಗಿ ಜಿಲ್ಲೆಗೆ ತರಲು ಸಕಲ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಆಶ್ರಯದಲ್ಲಿ ನಗರದ ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿ ಧಾನ್ಯ ಮೇಳ-&2026 ಹಾಗೂ ಜಿಲ್ಲೆಯ 2.90 ಲಕ್ಷ ರೈತರಿಗೆ ಬೆಳೆ ವಿಮೆ ಯೋಜನೆಯಡಿ ಮಧ್ಯಂತರ ಪರಿಹಾರ ಹಣ ಡಿಬಿಟಿ ಮೂಲಕ ಬಿಡುಗಡೆಗೆ ಚಾಲನೆ ನೀಡಿ ಮಾತನಾಡಿದರು.
ರೈತರ ಆದಾಯ ದ್ವಿಗುಣಕ್ಕೆ ಜಿಲ್ಲೆಯಲ್ಲಿ 4.45 ಕೋಟಿ ರೂ. ವೆಚ್ಚದ 9 ಕೃಷಿ ಯಂತ್ರೋಪಕರಣ ಕಡಿಮೆ ಬೆಲೆಯಲ್ಲಿ ಬಾಡಿಗೆ ಪಡೆಯಲು ಕಸ್ಟಮರ್​ ಹೈಯರ್​ ಸರ್ವಿಸ್​ ಕೇಂದ್ರ ತೆರೆಯಲಾಗಿದೆ. ನಾಲ್ಕು ಡ್ರೋನ್​ ಸಿಂಪಡಣೆ ಕೇಂದ್ರ ತೆರೆಯಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಪುರದಲ್ಲಿ ಶೀಥಲಿಕರಣ ಟಕ ಸ್ಥಾಪಿಸುತ್ತಿದ್ದು, ನಗರದಲ್ಲೂ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಬಿ.ಆರ್​. ಪಾಟೀಲ ಮಾತನಾಡಿ, ರೈತರು ಪ್ರತಿ ಹಂತದಲ್ಲೂ ವ್ನಿ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನರೇಗಾ ತೆಗೆದು, ರಾಮ್​ ಯೋಜನೆ ತಂದಿದ್ದು, ಆತ ಯಾರ ರಾಮನೋ ತಿಳಿಯುತ್ತಿಲ್ಲ. ನೂತನ ಕಾಯ್ದೆಯೂ ಮರಣ ಶಾಸನವಾಗಿದೆ. ಇಲ್ಲಿನ ಕೆಲಸ ದೆಹಲಿಯಲ್ಲಿ ನಿರ್ಧಾರವಾಗುತ್ತದೆ. ರೈತರನ್ನು ರಾಮ್​ ಜೀ ಯೋಜನೆಯಲ್ಲಿ ಪಾಲುದಾರ ಮಾಡಬೇಕು. ಆಗ ರೈತ ಮ್ಯಾನೇಜರ್​ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಈ ಬಗ್ಗೆ ಸಮಾನ ಮನಸ್ಕ ಮುಖ್ಯಮಂತ್ರಿಗಳನ್ನು ಕರೆದು, ಚರ್ಚಿಸಿ ಕೇಂದ್ರಕ್ಕೆ ಸಲಹೆ ನೀಡಬೇಕು ಎಂದರು.
ಶಾಸಕ ಎಂ.ವೈ. ಪಾಟೀಲ್​ ಮಾತನಾಡಿ, ಬಹುಸಂಖ್ಯಾತರಿಗೆ ಉದ್ಯೋಗ ನೀಡುವುದು ಕೃಷಿ ಕ್ಷೇತ್ರ. ಅನ್ನದಾತ ಬೆಳೆ ಬೆಳೆದರೆ ಮಾತ್ರ ಎಲ್ಲರಿಗೂ ಉದ್ಯೋಗ ಸಿಗಲಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ, ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಜೇವರ್ಗಿ ತಾಲೂಕಿಗೆ ಮಾತ್ರ ಬೆಳೆ ವಿಮೆ ಪರಿಹಾರ ಹೆಚ್ಚು ಸಿಕ್ಕಿತ್ತು. ಸಚಿವ ಪ್ರಿಯಾಂಕ್​ ರ್ಖಗೆ ಮುತುವರ್ಜಿಯಿಂದ ಇಡೀ ಜಿಲ್ಲೆಯ ರೈತರಿಗೆ ಪರಿಹಾರ ಸಿಕ್ಕಿದೆ. ನೀರಾವರಿ ಪ್ರದೇಶ ಹೆಚ್ಚಬೇಕು. ಕೆರೆ ತುಂಬಿಸುವ ಯೋಜನೆ ಜಾರಿ ಬರಲಿ ಎಂದರು.
ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್​, ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್​, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯ್ಯದ್​ ಮಹೆಬೂಬ್​ ಚಿಸ್ತಿ ಸಾಹೇಬ್​, ಗ್ಯಾರಂಟಿ ಅನುಷ್ಠಾನದ ಜಿಲ್ಲಾಧ್ಯೆ ಚಂದ್ರಿಕಾ ಪರಮೇಶ್ವರಿ, ಉಪಾಧ್ಯಕ್ಷೆ ನಿರ್ಮಲಾ, ಕೂಡಾ ಅಧ್ಯೆ ಮಜಹರ್​ ಆಲಂ ಖಾನ್​, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್​ ಧಂಗಾಪುರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​, ನಗರ ಪೊಲೀಸ್​ ಆಯುಕ್ತ ಡಾ.ಎಸ್​.ಡಿ.ಶರಣಪ್ಪ, ಎಸ್​.ಪಿ. ಅಡ್ಡೂರು ಶ್ರೀನಿವಾಸುಲು, ಜಿಪಂ ಸಿಓಒ ಭಂವರ್​ ಸಿಂಗ್​ ಮೀನಾ, ಅಧಿಕಾರಿಗಳಾದ ಅವಿನಾಶ ಶಿಂಧೆ, ಸಾಹಿತ್ಯ ಅಲದಕಟ್ಟಿ, ರಾಯಪ್ಪ ಹುಣಸಗಿ, ಅನುಸುಯಾ ಹೂಗಾರ ಇತರರಿದ್ದರು. ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​ ಸ್ವಾಗತಿಸಿ, ವಂದಿಸಿದರು.
ರೈತರಿಗೆ ರು.2,590 ಕೋಟಿ ಪರಿಹಾರ: 2025&26ನೇ ಸಾಲಿನಲ್ಲಿ ಜಿಲ್ಲೆಯ 3.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದು, ಅತಿವೃಷ್ಟಿಯಿಂದ 3.24 ಲಕ್ಷ ಹೆಕ್ಟೇರ್​ ಪ್ರದೇಶ ಹಾನಿಯಾಗಿತ್ತು. ವಿಮೆ ಮಾಡಿಸಿದ 2.90 ಲಕ್ಷ ರೈತರಿಗೆ 243.52 ಕೋಟಿ ರೂ. ಮಧ್ಯಂತರ ಪರಿಹಾರ ನೀರ ನೀಡುತ್ತಿದ್ದು, ಮೂರು ವರ್ಷದಲ್ಲಿ ಕಾಂಗ್ರೆಸ್​ ಸರ್ಕಾರ ಬಂದ ನಂತರ ತೊಗರಿ ನೆಟೆ ರೋಗ ಪರಿಹಾರ, ಬೆಳೆ ಪರಿಹಾರ, ಇನ್ಪುಡ್​ ಸಬ್ಸಿಡಿ, ಬರಗಾಲ ಪರಿಹಾರ, ಕಬ್ಬಿಗೆ ಪರಿಹಾರ ಧನ ಹೀಗೆ ಸೇರಿ ಜಿಲ್ಲೆಯ ರೈತರಿಗೆ 2,590 ಕೋಟಿ ರೂ. ಪರಿಹಾರ ನೀಡಿದೆ ಎಂದು ಸಚಿವ ಪ್ರಿಯಾಂಕ್​ ರ್ಖಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net