ಕಲಬುರಗಿಯಲ್ಲಿ ತಡರಾತ್ರಿ ತಳವಾರ ಹೋರಾಟಗಾರರು ವಶಕ್ಕೆ: ಟೆಂಟ್ ತೆರವು

Talwar protest
Talwar protest
Published on
ಕಲಬುರಗಿ: ತಳವಾರ ಸಮಾಜಕ್ಕೆ ಎಸ್ ಟಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿ, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಟೆಂಟ್ ಹಾಕಿ, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ತಳವಾರ ಸಮಾಜದ ಹೋರಾಟಗಾರರನ್ನು ಸೋಮವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದರು.
ತಡರಾತ್ರಿ ಸುಮಾರು 11ಗಂಟೆ ವೇಳೆಗೆ ನೂರಾರು ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಹೋರಾಟಗಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಗಳ ಮೂಲಕ ಕರೆದೊಯ್ದರು.
ರಸ್ತೆ ಮಧ್ಯೆ ಅಳವಡಿಸಿದ್ದ ಟೆಂಟ್, ಮ್ಯಾಟ್ ನ್ನು ಪೊಲೀಸರು ತೆರವುಗೊಳಿಸಿದರು. ಪೊಲೀಸರ ಕ್ರಮಕ್ಕೆ ಹೋರಾಟಗಾರರು ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net