ಐಇಇಇ ಪ್ರತಿಷ್ಠಿತ ಅತ್ಯುತ್ತಮ ವಿದ್ಯಾರ್ಥಿ ಶಾಖೆ

ಕಲಬುರಗಿ ಶರಣಬಸವ ವಿಶ್ವವಿದ್ಯಾಲಯಕ್ಕೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆಸ ಸಮಾರಂಭದಲ್ಲಿ ಐಇಇಇ ಪ್ರತಿಷ್ಠಿತ ಅತ್ಯುತ್ತಮ ವಿದ್ಯಾರ್ಥಿ ಶಾಖೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಆಶಾರಾಣಿ ಪಾಟೀಲ್​, ಬೆಂಗಳೂರು ವಿಭಾಗದ ಐಇಇಇ ಅಧ್ಯಕ್ಷ ಡಾ. ಚಂದ್ರಕಾಂತ ಕುಮಾರ, ಪ್ರಾಧ್ಯಾಪಕ ಡಾ.ಶ್ರೀನಿವಾಸನ್​, ಡಾ.ಚೆಂಗಪ್ಪ ಮುಜುಮದಾರ್​, ಪ್ರೊ.ಅಭಿಷೇಕ ದೇಶಮುಖ, ಡಾ.ಪ್ರಮೇಶ್ವರ ಚಾರಿ, ಡಾ.ದೇವನಾಥ್​ ಇತರರಿದ್ದರು.
ಕಲಬುರಗಿ ಶರಣಬಸವ ವಿಶ್ವವಿದ್ಯಾಲಯಕ್ಕೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆಸ ಸಮಾರಂಭದಲ್ಲಿ ಐಇಇಇ ಪ್ರತಿಷ್ಠಿತ ಅತ್ಯುತ್ತಮ ವಿದ್ಯಾರ್ಥಿ ಶಾಖೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಆಶಾರಾಣಿ ಪಾಟೀಲ್​, ಬೆಂಗಳೂರು ವಿಭಾಗದ ಐಇಇಇ ಅಧ್ಯಕ್ಷ ಡಾ. ಚಂದ್ರಕಾಂತ ಕುಮಾರ, ಪ್ರಾಧ್ಯಾಪಕ ಡಾ.ಶ್ರೀನಿವಾಸನ್​, ಡಾ.ಚೆಂಗಪ್ಪ ಮುಜುಮದಾರ್​, ಪ್ರೊ.ಅಭಿಷೇಕ ದೇಶಮುಖ, ಡಾ.ಪ್ರಮೇಶ್ವರ ಚಾರಿ, ಡಾ.ದೇವನಾಥ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣಬಸವ ವಿಶ್ವವಿದ್ಯಾಲಯಕ್ಕೆ ಮತ್ತೊಂದು ಗರಿ
  • ಅನುಕರಣೀಯ ನಾಯಕತ್ವ, ನಿರಂತರ ಶ್ರೇಷ್ಠತೆ
ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯವು ಇಂಜಿನಿಯರಿಂಗ್​ ಶಿಕ್ಷಣದ ಅಭಿವೃದ್ಧಿ ಹಾಗೂ ನವೀಕರಣದಲ್ಲಿ ತೊಡಗಿಸಿಕೊಂಡಿರುವ, ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ ಮತ್ತು ವಿಸ್ತರಣಾ ಚಟುವಟಿಕೆ ಒದಗಿಸುವ ಪ್ರತಿಷ್ಠಿತ ಸಂಸ್ಥೆಯಾದ ಇನ್​ಸ್ಟಿಟ್ಯೂಟ್​ ಆಫ್​ ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್​ ಇಂಜಿನಿಯರ್ಸ್​ (ಐಇಇಇ)ನ ಬೆಂಗಳೂರು ವಿಭಾಗದಿಂದ ಪ್ರತಿಷ್ಠಿತ ಅತ್ಯುತ್ತಮ ವಿದ್ಯಾರ್ಥಿ ಶಾಖೆ&2025 ಪ್ರಶಸ್ತಿ ಪಡೆಯುವ ಮೂಲಕ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ.
ಶರಣಬಸವ ವಿಶ್ವವಿದ್ಯಾಲಯದ ಡೀನ್​, ವಿಶ್ವವಿದ್ಯಾಲಯದ ಐಇಇಇ ಶಾಖೆ ಸಲಹೆಗಾರ್ತಿ ಡಾ.ಲಕ್ಷಿ$್ಮ ಪಾಟೀಲ್​ ಮಾಕಾ ಅವರು, ಈ ಕುರಿತು ಸೋಮವಾರ ಮಾಹಿತಿ ನೀಡಿ, ಫಲಕ ಮತ್ತು ಪ್ರಶಂಸಾ ಪತ್ರ ಒಳಗೊಂಡಿರುವ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಶರಣಬಸವ ವಿಶ್ವವಿದ್ಯಾಲಯದ ಐಇಇಇ ಫ್ಯಾಕಲ್ಟಿ ಸಲಹೆಗಾರ್ತಿ ಡಾ.ಆಶಾರಾಣಿ ಪಾಟೀಲರಿಗೆ ಬೆಂಗಳೂರು ವಿಭಾಗದ ಐಇಇಇ ಅಧ್ಯಕ್ಷ ಡಾ. ಚಂದ್ರಕಾಂತ ಕುಮಾರ ಮತ್ತು ಪ್ರಾಧ್ಯಾಪಕ ಡಾ.ಶ್ರೀನಿವಾಸನ್​ ಅವರು ಭಾನುವಾರ ಪ್ರದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅನುಕರಣೀಯ ನಾಯಕತ್ವ, ನಿರಂತರ ಶ್ರೇಷ್ಠತೆ ಮತ್ತು ಪ್ರಭಾವಶಾಲಿ ತಾಂತ್ರಿಕ ಚಟುವಟಿಕೆಗಳು, ಬಲವಾದ ಸದಸ್ಯರ ತೊಡಗಿಸಿಕೊಳ್ಳುವಿಕೆ, ಸಮುದಾಯಕ್ಕೆ ನಾವೀನ್ಯತೆ ಮತ್ತು ಸೇವೆ ಪ್ರದರ್ಶಿಸುವ ಮೂಲಕ ಸಮಾಜದ ಪ್ರಯೋಜನಕ್ಕಾಗಿ ತಂತ್ರಜ್ಞಾನ ಮುಂದುವರಿಸುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಂಸಾ ಪತ್ರದಲ್ಲಿ ತಿಳಿಸಿದೆ ಎಂದು ಡಾ.ಮಾಕಾ ಹೇಳಿದ್ದಾರೆ.
2006ರ ಚೇರ್​ಎಲೆಕ್ಟ್​ ಡಾ.ಚೆಂಗಪ್ಪ ಮುಜುಮದಾರ್​, ಉತ್ತರ ಕರ್ನಾಟಕ ಉಪವಿಭಾಗದ ಚೇರ್​ ಪ್ರೊ.ಅಭಿಷೇಕ ದೇಶಮುಖ, ಐಇಇಇ ಸದಸ್ಯತ್ವ ಅಭಿವೃದ್ಧಿ ಸಮಿತಿಯ ಚೇರ್​ ಡಾ.ಪ್ರಮೇಶ್ವರ ಚಾರಿ, ವಿದ್ಯಾರ್ಥಿ ಚಟುವಟಿಕೆ ಸಮಿತಿಯ ಚೇರ್​ ಡಾ.ದೇವನಾಥ್​ ಸೇರಿ ಅನೇಕರು ಇದ್ದರು. ಶರಣಬಸವ ವಿಶ್ವವಿದ್ಯಾಲಯದ ಸ್ಟೂಡೆಂಟ್​ ಚೇರ್​ ಕೃಷ್ಣವೇಣಿ ಹಾಗೂ ಸದಸ್ಯರಾದ ನಿಹಾರಿಕಾ, ಭುವನೇಶ್ವರಿ, ಪಾಯಲ್​ ಮತ್ತು ವೈಷ್ಣವಿ ಪಾಲ್ಗೊಂಡಿದ್ದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಾಯಿಣಿ.ಎಸ್​.ಅಪ್ಪ, ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿಯ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಎಸ್​.ಜಿ.ಡೊಳ್ಳೇಗೌಡರ್​, ಕುಲಸಚಿವ (ಮೌಲ್ಯಮಾಪನ) ಡಾ.ಎಸ್​.ಎಚ್​.ಹೊನ್ನಳ್ಳಿ ಅವರು ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠಿತ ಪ್ರಶಸ್ತಿ ತಂದಿರುವ ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
"

ಕಳೆದ ಒಂದು ವರ್ಷದ ಅವಧಿಯಲ್ಲಿ ಶರಣಬಸವ ವಿಶ್ವವಿದ್ಯಾಲಯವು ನಡೆಸಿದ ತಾಂತ್ರಿಕ ಕಾರ್ಯಕ್ರಮ ಸೇರಿ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳು ಹಾಗೂ ವಿಶ್ವವಿದ್ಯಾಲಯ ಕೈಗೊಂಡ ಸದಸ್ಯತ್ವ ಅಭಿಯಾನ ಪರಿಗಣಿಸಿ ಶರಣಬಸವ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಲಾಗಿದೆ. ವಿಶ್ವವಿದ್ಯಾಲಯವು 60ಕ್ಕೂ ಹೆಚ್ಚು ವಿದ್ಯಾರ್ಥಿ ಕೇಂದ್ರಿತ ತಾಂತ್ರಿಕ ಹಾಗೂ ತಾಂತ್ರಿಕೇತರ ಚಟುವಟಿಕೆಗಳನ್ನು ನಡೆಸಿದೆ.

ಡಾ.ಲಕ್ಷಿ$್ಮ ಪಾಟೀಲ್​ ಮಾಕಾ,

ಡೀನ್​, ಶರಣಬಸವ ವಿವಿ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net