ಪತ್ನಿಯ ಕೊಲೆಗೈದ ಪತಿಗೆ 4 ವರ್ಷ ಜೈಲು ಶಿಕ್ಷೆ

prison for murdering wife
prison for murdering wife
Published on
ಕಲಬುರಗಿ: ಕುಡಿದು ಹಣಕ್ಕಾಗಿ ಪೀಡಿಸಿ, ಪತ್ನಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪಿಗೆ ೪ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಕರಣ ಗುಜ್ಜಾರ್​ ಎಂಟು ರ‍್ಷ ಜೈಲು ಶಿೆ ವಿಧಿಸಿ ತರ‍್ಪು ನೀಡಿದೆ.
ಹುಳಗೇರಾ ಗ್ರಾಮದ ರತ್ನಾಕರ ಶಿಕ್ಷೇಗಿಡಾದ ಅಪರಾಧಿ. ೨೦೧೮ರ ೫ರಂದು ಕುಡಿಯಲು ೨೦೦ ರೂ. ನೀಡಿಲ್ಲ ಎಂದು ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿದ್ದ. ಹುಳಗೇರಾ ಗ್ರಾಮದ ರತ್ನಾಕರಗೆ ಖಾನಾಪುರದ ಅನೀತಾ ಜತೆಗೆ ೨೦೧೪ರಲ್ಲಿ ಮದುವೆಯಾಗಿತ್ತು. ನಂತರ ಕುಡಿದು ಬಂದು ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದನು. ೨೦೧೮ರ ಸೆ.೫ರಂದು ಮಧ್ಯಾಹ್ನ ಪತ್ನಿ ಬಳಿ ೨೦೦ ರೂ. ಬೇಡಿಕೆ ಇಟ್ಟಿದ್ದ. ಆದರೆ. ಪತ್ನಿ ಹಣ ಇಲ್ಲ ಎಂದಿದ್ದಕ್ಕೆ ಸಿಟ್ಟಾಗಿ ಸೀಮೆ ಎಣ್ಣೆ ಅನೀತಾ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅನೀತಾ ಚಿಕಿತ್ಸೆ ಲಕಾರಿಯಾಗದೆ ಸೆ.೧೧ರಂದು ಮೃತಪಟ್ಟಿದ್ದರು. ಕಾಳಗಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಡಿವೈಎಸ್​ಪಿ ಬಸವರಾಜ ಹೀರಾ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ೮ ರ‍್ಷಗಳ ಕಠಿಣ ಕಾರಾಗೃಹ ಶಿೆ ಮತ್ತು ೧೫,೦೦೦ ರೂ. ದಂಡ ವಿ-ಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ೨೦,೦೦೦ ರೂಪಾಯಿಗಳನ್ನು ರ‍್ಕಾರಕ್ಕೆ ಜಮಾ ಮಾಡುವಂತೆ ತಿಳಿಸಿದ್ದಾರೆ. ರ‍್ಕಾರದ ಪರ ಅಭಿಯೋಜಕ ಕೆ.ಆರ್​.ನಾಗರಾಜ್​ ಮಸ್ಕಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net