ಅಂಧಕಾರ ಅಳಿದಾಗ ಮಾನವ ಹಕ್ಕು ರಕ್ಷಣೆ ಸಾಧ್ಯ

ಕಲಬುರಗಿ ವಿ.ಜಿ.ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಮ್ಮೇಳನಕ್ಕೆ ಗುಲ್ಬರ್ಗ ವಿವಿ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಚಾಲನೆ ನೀಡಿದರು. ನಾಗಣ್ಣ ಘಂಟಿ, ಅನಿಲಕುಮಾರ ಮರಗೋಳ, ಪ್ರೊ.ಆರ್.ಬಿ.ಕೊಂಡ, ಡಾ.ಸವಿತಾ ತಿವಾರಿ, ಡಾ.ಶಾರದಾ ಜಾಧವ್, ಡಾ.ಪ್ರೇಮಚಂದ ಚವ್ಹಾಣ ಇತರರಿದ್ದರು.
ಕಲಬುರಗಿ ವಿ.ಜಿ.ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಮ್ಮೇಳನಕ್ಕೆ ಗುಲ್ಬರ್ಗ ವಿವಿ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಚಾಲನೆ ನೀಡಿದರು. ನಾಗಣ್ಣ ಘಂಟಿ, ಅನಿಲಕುಮಾರ ಮರಗೋಳ, ಪ್ರೊ.ಆರ್.ಬಿ.ಕೊಂಡ, ಡಾ.ಸವಿತಾ ತಿವಾರಿ, ಡಾ.ಶಾರದಾ ಜಾಧವ್, ಡಾ.ಪ್ರೇಮಚಂದ ಚವ್ಹಾಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುಲ್ಬರ್ಗ ವಿವಿ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಅಭಿಮತ
  • ವಿ.ಜಿ.ಮಹಿಳಾ ಕಾಲೇಜಿನಲ್ಲಿ ಸಮ್ಮೇಳನ
ಕಲಬುರಗಿ: ಮನಸ್ಸಿನ ಅಂಧಕಾರ ಅಳಿದಾಗ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರೂ ಆದ ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್​.ಟಿ.ಪೋತೆ ಅಭಿಪ್ರಾಯಪಟ್ಟರು.
ಹೈದರಾಬಾದ್​ ಕರ್ನಾಟಕ ಶಿಣ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಮಹವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಬಸವಾದಿ ಶರಣರ ಚಿಂತನೆಗಳ ಅವಶ್ಯಕತೆ ಇದೆ. ನಾವು ಸಫಾಯಿ ಕರ್ಮಚಾರಿಗಳ ಬಳಿ ತಾಯಿ ಗುಣ ಕಾಣುತ್ತೇವೆ. ಅಂತಹ ಗುಣವನ್ನು ಸಮಾಜದಲ್ಲಿನ ಉನ್ನತ ಸ್ಥಾನಮಾನ ಹೊಂದಿದವರಲ್ಲಿ ಕಾಣುವುದಿಲ್ಲ. ನಮ್ಮ ದೇಶದಲ್ಲಿ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡಿದ್ದರೂ ಮಾನವ ಹಕ್ಕುಗಳ ಉಲ್ಲಂನೆ ನಡೆಯುತ್ತಿರುವುದು ವಿಪರ್ಯಾಸ. ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಒತ್ತಿ ಹೇಳುವ ಸಂವಿಧಾನವನ್ನು ನಾವು ಎಷ್ಟು ಜನ ಪರಿಪಾಲಿಸಿಕೊಂಡು ಬರುತ್ತಿದ್ದೇವೆ ? ಎಂದು ಪ್ರಶ್ನಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ ಆದ ಪದವಿ, ಪದವಿಪೂರ್ವ ಕಾಲೇಜುಗಳ ಸಂಚಾಲಕ ನಾಗಣ್ಣ ಘಂಟಿ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿ ಸದಸ್ಯ ಅನಿಲಕುಮಾರ ಮರಗೋಳ, ಪ್ರಾಚಾರ್ಯರಾದ ಡಾ.ಆರ್​.ಬಿ.ಕೊಂಡ, ಡಾ.ಸವಿತಾ ತಿವಾರಿ, ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶಾರದಾ ಜಾಧವ್​, ಪ್ರಮುಖರಾದ ಡಾ.ಶಂಕರ, ಕವಿತಾ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ಸಂದೀಪ ರಣಬೀರಕರ್​, ಡಾ.ವಿಜಯಕುಮಾರ ಪರುತೆ, ಪ್ರೊ.ಧನ್ಯಕುಮಾರ ಬಿರಾಜದಾರ ಇತರರಿದ್ದರು.
ಡಾ.ರಾಜೇಂದ್ರ ಕೊಂಡ ಸ್ವಾಗತಿಸಿದರು. ಡಾ.ಪ್ರೇಮಚಂದ ಚವ್ಹಾಣ್​ ಪ್ರಾಸ್ತಾವಿಕ ಮಾತನಾಡಿದರು.

ಸಮಾಜದಲ್ಲಿನ ಕಟ್ಟ ಕಡೆಯ ಜನರಿಗೆ ಅಧಿಕಾರ ದೊರಕುವಂತೆ ಮಾಡುವುದು ಪ್ರಾವಂತರಾದ ಲೇಖಕರು, ವಿದ್ವಾಂಸರು, ಚಿಂತಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲ ಸಾಹಿತ್ಯ ಮಾನವ ಹಕ್ಕುಗಳ ರಕ್ಷಣೆಗೆ ಒತ್ತು ಕೊಡಬೇಕಾದ ಅವಶ್ಯಕತೆ ಇದೆ.

> ಪ್ರೊ.ಎಚ್​.ಟಿ.ಪೋತೆ,

ನಿರ್ದೇಶಕ, ಪ್ರಸಾರಾಂಗ ವಿಭಾಗ, ಗುಲ್ಬರ್ಗ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net