ಕಲಬುರಗಿ: ಎಲ್ಲಿ ಮಹಿಳೆಯರನ್ನು ಗೌರವಿಸಿ ಪೂಜಿಸಲಾಗುತ್ತದೆ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೆಣ್ಣು ಇರುವ ಮನೆ ಸ್ವರ್ಗಕ್ಕೆ ಸಮಾನ, ಅಂತಹ ಸ್ತಿçÃಯರನ್ನು ಶಕ್ತಿಸ್ವರೂಪಿಣಿಯಾಗಿ ಆರಾಧಿಸುವ ದೇಶ ನಮ್ಮದು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶರಣಮ್ಮ ವಾರದ್ ಹೇಳಿದರು.
ನಗರದ ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಲ್ಲ, ಬದಲಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಗುರುತಿಸುವ, ಅವರ ಹಕ್ಕುಗಳಿಗಾಗಿ ಹೋರಾಟ ಸ್ಮರಿಸುವ ಮತ್ತು ಲಿಂಗಸಮಾನತೆಯತ್ತ ಹೆಜ್ಜೆ ಹಾಕುವ ಸಂಕಲ್ಪದ ದಿನ ಇದಾಗಿದೆ ಎಂದರು.
ಸ್ತಿçÃಯರನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕರ್ತೃತ್ವ, ನೇತೃತ್ವ ಮತ್ತು ತಾಯತ್ವವಾಗಿರುತ್ತಾಳೆ. ಇವೆಲ್ಲವೂ ಒಂದು ಹೆಣ್ಣಿನಲ್ಲಿ ಇದ್ದಾಗ ಸಮಾಜವು ಶಾಂತಿ, ನೆಮ್ಮದಿಯ ನೆಲೆಯಾಗುತ್ತದೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನೊದು ಸುಳ್ಳಲ್ಲ. ಈ ಸೃಷ್ಟಿಯ ಮೂಲವೇ ಸ್ತಿçà ಆಗಿದ್ದಾಳೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತಿçÃಗೆ ಅವಳದೆ ಆದ ಸ್ಥಾನವಿದೆ, ಗೌರವಿದೆ. ಜಾಗತಿಕ ಮಟ್ಟದಲ್ಲಿ ಮಹಿಳೆ ಇಂದು ರತ್ನವಾಗಿ ಕಂಗೊಳಿಸುತ್ತಿದ್ದಾಳೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾAವ್ ಮಾತನಾಡಿ, ಮಹಿಳೆಯರು ಪುರುಷರಷ್ಟೇ ಸರಿಸಮಾನರಾಗಿ ಬೆಳೆಯುತ್ತಿದ್ದಾರೆ. ಒಂದು ಹೆಣ್ಣು ಅಕ್ಷರಸ್ಥೆಯಾದರೆ ಇಡೀ ಕುಟುಂಬ ಅಕ್ಷರಸ್ಥವಾಗುತ್ತದೆ. ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ಲಕ್ಷಿö್ಮÃಪುತ್ರ ಸ್ವಾಗತಿಸಿದರು, ಅನಿತಾ ಗೊಬ್ಬುರ್ ಪ್ರಾಸ್ತಾವಿಕ ಮಾತನಾಡಿದರು. ಚೆನ್ನಬಸವ ಬಮ್ಮಣಿ ನಿರೂಪಿಸಿದರೆ, ಡಾ.ಮಿಲಿಂದಕುಮಾರ ಸುಳ್ಳದ್ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಅರುಣಾ, ಡಾ.ಆರತಿ, ಡಾ.ಪಿಂಕ್ಯಾನಿ, ಡಾ.ವಿಜಯಲಕ್ಷಿö್ಮÃ, ಡಾ.ಸಂಗೀತಾ, ಡಾ.ಪ್ರತಿಭಾ, ಡಾ.ಮಹಾಲಕ್ಷಿö್ಮÃ, ಪ್ರೊ.ಕಲ್ಮೇಶ ಪ್ರೊ.ಹೆಬ್ಜಿಬಾ, ಜ್ಯೋತಿ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
"
ಮಹಿಳೆ ಕುಟುಂಬದ ಬೆನ್ನೆಲುಬು ಮಾತ್ರವಲ್ಲ, ಸಮಾಜದ ಅಭಿವೃದ್ಧಿಯಲ್ಲೂ ಪ್ರಮುಖ ಶಕ್ತಿಯಾಗಿದ್ದಾಳೆ. ಶರಣಬಸವೇಶ್ವರ ಸಂಸ್ಥಾನವನ್ನು ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವ ಅವರು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ಮಹಿಳೆಯರ ಸಾಧನೆಗೆ ಕನ್ನಡಿ ಹಿಡಿದಂತಿದೆ.