

ಜೇವರ್ಗಿ: ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿಂದ ಶ್ರೀ ಅಯ್ಯಪ್ಪ ಸ್ವಾಮಿ ನೂತನ ಮೂರ್ತಿಯ ಭವ್ಯ ಮೆರವಣೆಗೆ ಬುಧವಾರ ಪಟ್ಟಣದಲ್ಲಿ ನಡೆಯಿತು. ಬೆಳಗ್ಗೆ ಕಟ್ಟಿಸಂಗಾವಿ ಬಳಿಯ ಭೀಮಾ ನದಿಯಲ್ಲಿ ಮೂರ್ತಿಯ ಗಂಗಾಸ್ನಾನ ನೆರವೇರಿಸಲಾಯಿತು. ಬಳಿಕ ರಿಲಾಯನ್ಸ್ ಪೆಟ್ರೋಲ್ ಬಂಕ್ನಿಂದ ನರಿಬೋಳ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿಧಿವರೆಗೆ ಭವ್ಯ ಮೆರವಣಿಗೆ ನಡೆಯಿತು. ಕೃಷ್ಣಮೂರ್ತಿ ಗುರುಸ್ವಾಮಿಗಳ ಸಾನ್ನಿಧ್ಯದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನೆರವೇರಿದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈರಣ್ಣ ಹರವಾಳ, ಈರಣ್ಣ ಮಲ್ಲಾ, ಶ್ರೀನಿವಾಸ ವಕೀಲ, ಬಸವರಾಜ ಲಾಡಿ, ವಿಠಲ್ ಆಂದೋಲಾ, ನಿಂಗಣ್ಣಗೌಡ ಸಾಥಖೇಡ, ರುದ್ರಗೌಡ ಹಿಪ್ಪರಗಿ, ಮಲ್ಲು ಕೋಳಕೂರ, ಸಾಹೇಬಗೌಡ ಹಿರೇಗೌಡ, ಸಾಗರ ಜೇವರ್ಗಿ, ಯಲ್ಲಾಲಿಂಗ ಇಜೇರಿ, ಶಂಕರಗೌಡ ಹಾಲಗಡ್ಲಾ, ಚಂದ್ರಶೇಖರ ತುಂಬಗಿ, ಕಲ್ಲಯ್ಯಸ್ವಾಮಿ, ಶಿವಶರಣಪ್ಪ ಪಡಶೆಟ್ಟಿ, ಕವಿರಾಜ ಜೇವರ್ಗಿ, ಅನೀಲಕುಮಾರ ಹಾಲಕಾಯಿ, ರಾಜು ಶಹಾಬಾದಿ, ರಾಜು ಜೈನಾಪುರ, ರಾವೇಂದ್ರ ಹವಲ್ದಾರ, ಶಿವು ಕಲ್ಲಾ, ರಮೇಶ ಪತ್ತಾರ್ ಇತರರಿದ್ದರು.