

ಶಹಾಬಾದ್: ಬಡವರು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸರಕಾರ ಉಚಿತವಾಗಿ ವಿತರಿಸಬೇಕಾದ ಮಾತ್ರೆ, ಔಷಧಗಳು ಫಲಾನುಭವಿಗಳ ಕೈ ಸೇರದೆ ನದಿ ಪಾಲಾಗಿರುವುದು ಗುರುವಾರ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಸಿಬ್ಬಂದಿ ರ್ನಿಲ್ಯದಿಂದ ಲಾಂತರ ರೂಪಾಯಿ ಮೌಲ್ಯದ ಔಷಧ ಕಾಗಿಣಾ ನದಿ ಪಾತ್ರದಲ್ಲಿ ಎಸೆಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಹಾಬಾದ್ನಿಂದ ಚಿತ್ತಾಪುರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ&150ರ ಶಂಕರವಾಡಿ ಬಳಿಯ ಕಾಗಿಣಾ ನದಿ ಸೇತುವೆ ಕೆಳಗೆ ಐದಕ್ಕೂ ಹೆಚ್ಚು ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಸರ್ಕಾರಿ ಔಷಧಗಳನ್ನು ಎಸೆಯಲಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಬೇಕಾದ ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್ 500 ಎಂಜಿ. ಮಾತ್ರೆಗಳು (ಬ್ಯಾಚ್ ಸಂಖ್ಯೆ: ಜೆಡಿಟಿ 8702, ಅವಧಿ ಮುಕ್ತಾಯ: ನವೆಂಬರ್ 2026), ಟೆಲ್ಮಿಸಾರ್ಟನ್ 40 ಎಂಜಿ. ಮಾತ್ರೆಗಳು ಹಾಗೂ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ನೀಡುವ ಮಲ್ಟಿವಿಟಮಿನ್, ಮಲ್ಟಿಮಿನರಲ್ ಸಿರಪ್ ಬಾಟಲಿಗಳು ಚೀಲಗಳಲ್ಲಿ ಪತ್ತೆಯಾಗಿವೆ. ಸಿರಪ್ನ ಬ್ಯಾಚ್ ಸಂಖ್ಯೆ ಎಂಎನ್ 655 ಆಗಿದ್ದು, ಅದರ ಅವಧಿ ಏಪ್ರಿಲ್ 2026ಕ್ಕೆ ಮುಕ್ತಾಯಗೊಂಡಿದೆ.
ಮಧುಮೇಹ ಸೇರಿ ಆರೋಗ್ಯ ಸಮಸ್ಯೆಗಳಿಗೆ ಬಳಸುವ ಮೆಟ್ಫಾರ್ಮಿನ್ ಮಾತ್ರೆಗಳು, ರಕ್ತದೊತ್ತಡ ನಿಯಂತ್ರಣಕ್ಕೆ ನೀಡುವ ಟೆಲ್ಮಿಸಾರ್ಟನ್ ಮಾತ್ರೆಗಳು ಹಾಗೂ ಮಕ್ಕಳ ಪೌಷ್ಟಿಕತೆ ಸುಧಾರಣೆಗೆ ವಿತರಿಸುವ ಸಿರಪ್ಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕಿತ್ತು. ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಉಚಿತವಾಗಿ ವಿತರಿಸಬೇಕಾದ ಸಿರಪ್ಗಳು ನದಿ ಪಾತ್ರದಲ್ಲಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಖಾಸಗಿ ಮಾರುಕಟ್ಟೆಯಲ್ಲಿ ಮೆಟ್ಫಾರ್ಮಿನ್ನ 10 ಮಾತ್ರೆಗಳಿಗೆ ಸುಮಾರು 40 ರೂ., ಟೆಲ್ಮಿಸಾರ್ಟನ್ನ 10 ಮಾತ್ರೆಗಳಿಗೆ 40ರಿಂದ 54 ರೂ. ಹಾಗೂ ಸಿರಪ್ನ ಒಂದು ಬಾಟಲಿಗೆ 130ರಿಂದ 140 ರೂ. ಬೆಲೆ ಇದೆ. ಇಷ್ಟೊಂದು ಮೌಲ್ಯದ ಔಷಧಗಳನ್ನು ಅಗತ್ಯವಿರುವ ಬಡಜನರಿಗೆ ವಿತರಿಸದೆ ಎಸೆಯಲಾಗಿರುವುದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಸರ್ಕಾರಿ ನಿಯಮಗಳ ಪ್ರಕಾರ ಅವಧಿ ಮೀರಿದ ಮಾತ್ರೆ, ಸಿರಪ್ಗಳನ್ನು ವೈಾನಿಕವಾಗಿ ವಿಲೇವಾರಿ ಮಾಡುವುದು ಕಡ್ಡಾಯ. ಆದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಔಷಧಗಳ ದಾಸ್ತಾನು, ವಿತರಣೆ ಮತ್ತು ವಿಲೇವಾರಿ ಕುರಿತು ರ್ನಿಲ್ಯ ವಹಿಸಿರುವುದು ಸ್ಪಷ್ಟವಾಗಿದೆ.
ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಅಂಗನವಾಡಿ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ಔಷಧಗಳ ದಾಸ್ತಾನು ದಾಖಲೆ, ಖರೀದಿ, ವಿತರಣೆ ಹಾಗೂ ವಿಲೇವಾರಿ ವಿವರಗಳನ್ನು ಪರಿಶೀಲಿಸಿ, ಸರ್ಕಾರಿ ಔಷಧಗಳನ್ನು ನದಿ ಪಾತ್ರದಲ್ಲಿ ಎಸೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕಾಗಿಣಾ ಸೇತುವೆ ಮೇಲಿನಿಂದ ಔಷಧ ಚೀಲಗಳನ್ನು ನದಿ ಪಾತ್ರಕ್ಕೆ ಎಸೆಯಲಾಗಿದ್ದು, ಸದ್ಯ ನದಿಯಲ್ಲಿ ನೀರಿಲ್ಲದ ಕಾರಣ ಕೃತ್ಯ ಸುಲಭವಾಗಿ ಬೆಳಕಿಗೆ ಬಂದಿದೆ. ಒಂದು ವೇಳೆ ನೀರಿದ್ದರೆ, ಔಷಧಗಳಲ್ಲಿರುವ ರಾಸಾಯನಿಕ ಅಂಶಗಳು ನೀರಿನಲ್ಲಿ ಬೆರೆತು ಜಲಚರಗಳು, ಪ್ರಾಣಿಗಳು ಹಾಗೂ ಮನುಷ್ಯರ ಆರೋಗ್ಯಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿತ್ತು.