ಕಲಬುರಗಿ ಸಿಯುಕೆಗೆ ಜಾಗತಿಕ ಮನ್ನಣೆ

ಕೇರಳದ ಕೊಚ್ಚಿಯಲ್ಲಿ ಇತ್ತೀಚಿಗೆ ನಡೆದ  ಐಇಇಇ ಮ್ಯಾಪಕಾನ್​ -2025 ಸಮ್ಮೇಳನದಲ್ಲಿ ಅದ್ಭುತ ಸಾಧನೆ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಂಡ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಬುಧವಾರ ಭೇಟಿ ಮಾಡಿ ಸಾಧನೆಯ ಮಾಹಿತಿ ನೀಡಿ ಸಂಭ್ರಮಿಸಿದರು. ಪ್ರೊ.ಪರಮೇಶ, ಡಾ.ನರಸಿಂಗ್​ ಪ್ರಧಾನ್​, ವಿದ್ಯಾರ್ಥಿಗಳು ಇದ್ದರು.
ಕೇರಳದ ಕೊಚ್ಚಿಯಲ್ಲಿ ಇತ್ತೀಚಿಗೆ ನಡೆದ ಐಇಇಇ ಮ್ಯಾಪಕಾನ್​ -2025 ಸಮ್ಮೇಳನದಲ್ಲಿ ಅದ್ಭುತ ಸಾಧನೆ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಂಡ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಬುಧವಾರ ಭೇಟಿ ಮಾಡಿ ಸಾಧನೆಯ ಮಾಹಿತಿ ನೀಡಿ ಸಂಭ್ರಮಿಸಿದರು. ಪ್ರೊ.ಪರಮೇಶ, ಡಾ.ನರಸಿಂಗ್​ ಪ್ರಧಾನ್​, ವಿದ್ಯಾರ್ಥಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಐಇಇಇ ಮ್ಯಾಪಕಾನ್​-2025 ಸಮ್ಮೇಳನ
  • ಕೇರಳದ ಕೊಚ್ಚಿಯ ಗ್ರಾಂಡ್​ ಹಯಾತ್​ನಲ್ಲಿ ಆಯೋಜನೆ
ಕಲಬುರಗಿ: ಕೇರಳದ ಕೊಚ್ಚಿಯ ಗ್ರಾ$್ಯಂಡ್​ ಹಯಾತ್​ನಲ್ಲಿ ನಡೆದ ವಿಶ್ವದ ಅತಿದೊಡ್ಡ ರೇಡಿಯೋ ಫ್ರೀಕ್ವೆನ್ಸಿ ಮತ್ತು ಮೈಕ್ರೋವೇವ್​ ಸಮ್ಮೇಳನಗಳಲ್ಲಿ ಒಂದಾದ ಐಇಇಇ (ಇನ್ಸ್​ಟಿಟ್ಯೂಟ್​ ಆಫ್​ ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​) ಮ್ಯಾಪ್​ಕಾನ್​& 2025 ಸಮ್ಮೇಳನದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಜಾಗತಿಕ ಮನ್ನಣೆ ಗಳಿಸಿದೆ.
ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ 45 ದೇಶಗಳಿಂದ 1800ಕ್ಕೂ ಹೆಚ್ಚು ಪ್ರತಿನಿಧಿಗಳು, ವಿಶ್ವದ ಪ್ರಮುಖ ವಿಶ್ವವಿದ್ಯಾಲಯ, ಸಂಶೋಧನಾ ಪ್ರಯೋಗಾಲಯ ಮತ್ತು ಕೈಗಾರಿಕೆಗಳಿಂದ 250ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತರು ಭಾಗವಹಿಸಿದ್ದರು. ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣನ್​, ಡಿಆರ್​ಡಿಒ ಮಹಾನಿರ್ದೇಶಕ ಡಾ.ಬಿ.ಕೆ.ದಾಸ್​, ನಾಸಾ ಹಿರಿಯ ವಿಜ್ಞಾನಿ ಡಾ.ಗೌತಮ ಚಟ್ಟೋಪಾಧ್ಯಾಯ ಸೇರಿ ಗಣ್ಯರು ಸಮ್ಮೇಳನಕ್ಕೆ ಚಾಲನೆ ನೀಡಿದರು.
ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು ಪ್ರತಿಷ್ಠಿತ ಮತ್ತು ದೊಡ್ಡ ಐಇಇಇ&ಮೈಕ್ರೋವೇವ್​ ಥಿಯರಿ ಮತ್ತು ಟೆಕ್ನಾಲಜಿಕಲ್​ ಸೊಸೈಟಿ ವಿದ್ಯಾರ್ಥಿ ಶಾಖೆ ಪ್ರಶಸ್ತಿ ಪಡೆದುಕೊಂಡಿದೆ. ಇದು ವಿಶ್ವದ ಹನ್ನೆರಡು ದೊಡ್ಡ ಶಾಖೆಗಳಲ್ಲಿ ಒಂದಾಗಿದೆ. ಇದು ತಾಂತ್ರಿಕ ಚಟುವಟಿಕೆ ಮತ್ತು ಅಂತಾರಾಷ್ಟ್ರೀಯ ಸಂಶೋಧನೆಯ ಭಾಗವಹಿಸುವಿಕೆಯಲ್ಲಿ ವಿಶ್ವವಿದ್ಯಾಲಯದ ಶ್ರೇಷ್ಠತೆ ಎತ್ತಿ ತೋರಿಸುತ್ತದೆ.
ಎಲೆಕ್ಟ್ರಾನಿಕ್ಸ್​ ಮತ್ತು ಸಂವಹನ ಇಂಜಿನಿಯರಿಂಗ್​ ನಿಕಾಯದ ಡೀನ್​ ಪ್ರೊ.ಪರಮೇಶ ಮತ್ತು ಡಾ.ನರಸಿಂಗ್​ ಪ್ರಧಾನ್​ ಅವರು ವಿದ್ಯಾರ್ಥಿಗಳೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಡಾ.ಪ್ರಧಾನ್​ ಅವರು ಐಇಇಇ ಮ್ಯಾಪ್​ಕಾನ್​& 2025ರ ಕೋರ್​ ತಂಡದ ಸಂಟಕರಾಗಿದ್ದಾರೆ. ಅವರ ಕೊಡುಗೆ ಗುರುತಿಸಿ ಅವರಿಗೆ 1.52 ಲಕ್ಷ ರೂ. ಪ್ರಯಾಣ ಅನುದಾನ ಅವಾರ್ಡ್​ ನೀಡಿ ಗೌರವಿಸಲಾಯಿತು.
ಸಿಯುಕೆಯಿಂದ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅತ್ಯುತ್ತಮವಾಗಿತ್ತು, ಅತ್ಯಂತ ಸ್ಪರ್ಧಾತ್ಮಕ ರಾಷ್ಟ್ರೀಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ಪ್ರಮುಖ ಸಂಸ್ಥೆಗಳ ಅಭ್ಯರ್ಥಿಗಳನ್ನು ಮೀರಿಸಿ 18 ವಿದ್ಯಾರ್ಥಿಗಳು ಸಮ್ಮೇಳನದ ಸ್ವಯಂಸೇವಕರಾಗಿ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳು ಉಚಿತ ನೋಂದಣಿ, ವಸತಿ, ಅಧಿಕೃತ ಬ್ಲೇಜರ್​, ಟ್ರಾಲಿ ಬ್ಯಾಗ್​, ಪ್ರಯಾಣ ಮರುಪಾವತಿ ಮತ್ತು ಉಡುಗೊರೆ ಕೂಪನ್​ ಪಡೆದರು. ಜತೆಗೆ ಸಿಯುಕೆಯ ವಿದ್ಯಾರ್ಥಿನಿ ಸೌಜನ್ಯ ಅವರು ಸಮ್ಮೇಳನದಲ್ಲಿ ಭಾಗವಹಿಸಲು 80,000 ರೂ.ಗಳ ಸಹಾಯಧನ ಪ್ರಶಸ್ತಿ ಪಡೆದರು.
ಸಮ್ಮೇಳನದ ನಂತರ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಭೇಟಿ ಮಾಡಿ ಪ್ರಶಸ್ತಿ ಮತ್ತು ಫಲಿತಾಂಶ ಕುರಿತು ವಿವರಿಸಿದರು. ಕುಲಪತಿಗಳು ಮೆಚ್ಚುಗೆ ವ್ಯಕ್ತಪಡಿಸಿ, ವಿಕಸಿತ ಭಾರತ&2047 ಸಾಧನೆಗೆ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
"

ವಿದ್ಯಾರ್ಥಿಗಳಿಗೆ ಸುವರ್ಣವಕಾಶ ಒದಗಿಸಿದ ಸಂಟಕರಿಗೆ ಕೃತಜ್ಞತೆಗಳು. ವಿಶ್ವವಿದ್ಯಾಲಯದ ಜಾಗತಿಕ ಸ್ಥಾನಮಾನ ಹೆಚ್ಚಿಸುವಲ್ಲಿ ವಿವಿ ಪ್ರಾಧ್ಯಾಪಕರಾದ ಪ್ರೊ.ಪರಮೇಶ ಮತ್ತು ಡಾ.ಪ್ರಧಾನ್​ ಸೇವೆ ಶ್ಲಾನೀಯ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ವಿವಿ ತಂಡ ಇನ್ನೂ ಹೆಚ್ಚಿನ ಸಾಧನೆ ಮಾಡಲಿ.

ಪ್ರೊ.ಬಟ್ಟು ಸತ್ಯನಾರಾಯಣ,ಕುಲಪತಿ, ಸಿಯುಕೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net