ಸ್ಟಾರ್ಟಪ್​ ಪರಿಸರದಲ್ಲಿ ತೊಡಗಿಸಿಕೊಳ್ಳಿ

ಕಲಬುರಗಿ ಸಿಯುಕೆನಲ್ಲಿ ಶುಕ್ರವಾರ ಆಯೋಜಿಸಿದ್ದ ತಜ್ಞರ ಅಧಿವೇಶನದಲ್ಲಿ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ, ವೆಂಕಟೇಶ ದೇಶಪಾಂಡೆ, ಸುಜಯ್​ ಮುದಗಲ್​, ಪ್ರೊ.ಆರ್​.ಎಸ್​.ಹೆಗಡಿ, ಪ್ರೊ.ರಾಜೀವ್​ ಜೋಶಿ, ಡಾ.ಶ್ರೀಧರ ಅಳ್ಳಗಿ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಶುಕ್ರವಾರ ಆಯೋಜಿಸಿದ್ದ ತಜ್ಞರ ಅಧಿವೇಶನದಲ್ಲಿ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ, ವೆಂಕಟೇಶ ದೇಶಪಾಂಡೆ, ಸುಜಯ್​ ಮುದಗಲ್​, ಪ್ರೊ.ಆರ್​.ಎಸ್​.ಹೆಗಡಿ, ಪ್ರೊ.ರಾಜೀವ್​ ಜೋಶಿ, ಡಾ.ಶ್ರೀಧರ ಅಳ್ಳಗಿ ಇತರರಿದ್ದರು.
Published on: 

ಕಲಬುರಗಿ: ವಿದ್ಯಾರ್ಥಿಗಳು ನವೀನ ಆಲೋಚನೆ ಬೆಳೆಸಿಕೊಳ್ಳುವುದರ ಜತೆಗೆ ಡಿಜಿಟಲ್​ ಆರ್ಥಿಕತೆಯಲ್ಲಿ ಉದಯೋನ್ಮುಖವಾಗುತ್ತಿರುವ ಅವಕಾಶ ಅನ್ವೇಷಿಸಿ, ಬೆಳೆಯುತ್ತಿರುವ ಸ್ಟಾರ್ಟಪ್​ ಪರಿಸರ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ ಕರೆ ನೀಡಿದರು.

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕದ ಉದಯೋನ್ಮುಖ ಡಿಜಿಟಲ್​ ಆರ್ಥಿಕತೆಯಲ್ಲಿ ವೃತ್ತಿ ಅವಕಾಶ ಮತ್ತು ನಾವೀನ್ಯತೆಯ ಕುರಿತ ತರ ಅಧಿವೇಶನ ಉದ್ಘಾಟಿಸಿ ಮಾತನಾಡಿ, ನಾವಿನ್ಯತೆ ಉತ್ತೇಜಿಸುವುದು, ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದು ಹಾಗೂ ರಾಷ್ಟ್ರೀಯ ಆರ್ಥಿಕತೆ ಬಲಪಡಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸುತ್ತಾರೆ. ನೈಜ ಜಗತ್ತಿನ ಸವಾಲುಗಳಿಗೆ ನವೀನ ಪರಿಹಾರ ಕಂಡುಕೊಳ್ಳುವ ಮೂಲಕ ವಿಕಸಿತ ಭಾರತ&2047ರ ಆಶಯ ಸಾಕಾರಗೊಳಿಸಲು ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ ಹಾಗೂ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸಂಪನ್ಮೂಲ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್​ಕ್ಯುಬೇಷನ್​ ಮತ್ತು ಕೌಶಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಪ್ರೊ.ರಾಜೀವ್​ ಜೋಶಿ ಮಾತನಾಡಿ, ನಾವೀನ್ಯತೆಯು ಪ್ರಕೃತಿಯೊಂದಿಗೆ ಬೆಸೆದುಕೊಂಡಿರಬೇಕು, ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸಬೇಕು. ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತಿರಬೇಕು ಎಂದು ಹೇಳಿದರು.

ಕರ್ನಾಟಕ ಡಿಜಿಟಲ್​ ಎಕಾನಮಿ ಮಿಷನ್​ನ ಕ್ಲಸ್ಟರ್​ ಮುಖ್ಯಸ್ಥ ವೆಂಕಟೇಶ ದೇಶಪಾಂಡೆ ವಿಶೇಷ ಉಪನ್ಯಾಸ ನೀಡಿದರು. ಕಲಬುರಗಿ ಕ್ಲಸ್ಟರ್​ ಮುಖ್ಯಸ್ಥ ಸುಜಯ್​ ಮುದ್ಗಲ್​, ಕಂಪ್ಯೂಟರ್​ ವಿಜ್ಞಾನ ಇಂಜನಿಯರಿಂಗ್​ ನಿಕಾಯದ ಡೀನ್​ ಪ್ರೊ.ಆರ್​.ಎಸ್​.ಹೆಗಡಿ ಮಾತನಾಡಿದರು.

ಪ್ರಮುಖರಾದ ಡಾ.ನಾಗರಾಜ ಧಾರವಾಡಕರ್​, ಡಾ.ಮಿಥುನ್​ ಪಾಟೀಲ್​, ಡಾ.ಕಗಲೆ ಮಾಧುರಿ ರುನಾಥ, ಡಾ.ಪಿ.ಎಂ.ಕಾಂಬಳೆ, ಡಾ.ರಾಕೇಶ ಕುಮಾರ್​ ಗೋದಿ, ಡಾ.ಕಾವ್ಯ ಕನಗರಾಜ, ಡಾ.ರೋಹಿತ್​ ಇತರರಿದ್ದರು.

ಡಾ.ಶ್ರೀಧರ ಅಳ್ಳಗಿ ಸ್ವಾಗತಿಸಿದರು. ಡಾ.ಮನೋರಂಜನ್​ ಗಂಧುಡಿ ವಂದಿಸಿದರು.

ಭಾರತದ ಜನಸಂಖ್ಯೆಯಲ್ಲಿ ಸುಮಾರು ಶೇ.65 ಮಂದಿ 35ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಯುವಜನ ರಾಷ್ಟ್ರದ ಬಹುದೊಡ್ಡ ಶಕ್ತಿ. ತಾಂತ್ರಿಕ ಪ್ರಗತಿ, ಉದ್ಯಮಶೀಲತೆ, ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆ ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು. ಯುವಜನರು ಅಗತ್ಯ ಕೌಶಲ ಮತ್ತು ನವೀನ ಸಾಮರ್ಥ್ಯಗಳೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಅರ್ಥಪೂರ್ಣ ಕೊಡುಗೆ ನೀಡಬೇಕು.
> ಪ್ರೊ.ಆರ್​.ಆರ್​.ಬಿರಾದಾರ, ಕುಲಸಚಿವ, ಸಿಯುಕೆ