

ಅಫಜಲಪುರ: ಮಳೆ ಕೊರತೆಯಿಂದಾಗಿ ಸಂಪೂರ್ಣ ಬರ ಆವರಿಸಿದ್ದು, ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವ ಪರಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರ ಪರಿಶೀಲಿಸಿ ಟನ್ ಕಬ್ಬಿಗೆ 10.25 ಎಫ್ಆರ್ಪಿ ನಿಗದಿ ಮಾಡಬೇಕು ಎಂದು ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಅಧ್ಯ ರಮೇಶ ಶೆಟ್ಟಿ ಆಗ್ರಹಿಸಿದರು.
ಕಬ್ಬಿಗೆ ಎಫ್ಆರ್ಪಿ 4,500 ರೂ. ಹಾಗೂ ಎಸ್ಎಪಿ 1000 ರೂ. ಹೆಚ್ಚಳ ಮಾಡಿ, ರಾಜ್ಯದಲ್ಲಿ ಏಕರೂಪ ದರ ನಿಗದಿಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಅರ್ನಿದಿಷ್ಟಾವಧಿ ಧರಣಿಯಲ್ಲಿ ತಹಸೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ರೈತರು ಬೆಳೆದ ಕಬ್ಬಿನಿಂದ ಅಬಕಾರಿ ಇಲಾಖೆ ಮೂಲಕ ಸಾವಿರಾರು ಕೋಟಿ ರೂ. ಸಂಗ್ರಹವಾಗುತ್ತಿದ್ದು, ಎಸ್ಎಪಿ ಅಡಿಯಲ್ಲಿ 1 ಸಾವಿರ ನೀಡಬೇಕು. ತಾಲೂಕಿನಲ್ಲಿ ಶಾರ್ಟ್ ಸಕ್ಯೂರ್ಟ್ನಿಂದ ಸುಡುತ್ತಿರುವ ಕಬ್ಬಿಗೆ ಯಾವುದೇ ನಿಬಂಧನೆ ಹೇರದೆ ಜೆಸ್ಕಾಂನಿಂದ ಪರಿಹಾರ ಒದಗಿಸಬೇಕು. ತೀವ್ರ ಬಿಸಿಲಿನ ತಾಪದಿಂದ ಕಬ್ಬು ಒಣಗುತ್ತಿದ್ದು ಬೇಗನೆ ಕಾರ್ಖಾನೆ ಪ್ರಾರಂಭಿಸಲು ಕೆಂದ್ರ ಸರ್ಕಾರದ ಮೇಲೆ ಒತ್ತಡ ಹೆರಬೇಕು ಎಂದು ಒತ್ತಾಯಿಸಿದರು.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯ ರಮೇಶ ಪಾಟೀಲ್ ಹವಳಗಾ, ಪ್ರಮುಖರಾದ ಭೀಮರಾವ ಗೌರ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ, ಚಂದ್ರಾಮ ಬಳಗುಂಡಿ, ಅಶೋಕ ಬುತಿ, ಚಂದು ಬನ್ನೆಟ್ಟಿ ಇತರರಿದ್ದರು.