ಜಾತ್ರೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ

 ಚಿತ್ತಾಪುರದ ತಾಪಂ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಗಾವಿ ಯಲ್ಲಮ್ಮ ಜಾತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ನಾಗಯ್ಯ ಹಿರೇಮಠ, ಭಾರತಿ ದಂಡೋತಿ, ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ ಇದ್ದರು.
ಚಿತ್ತಾಪುರದ ತಾಪಂ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಗಾವಿ ಯಲ್ಲಮ್ಮ ಜಾತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ನಾಗಯ್ಯ ಹಿರೇಮಠ, ಭಾರತಿ ದಂಡೋತಿ, ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ ಇದ್ದರು.
Published on: 

ಚಿತ್ತಾಪುರ: ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿ ಜಾತ್ರೋತ್ಸವ ಅ.26ರಂದು ನಡೆಯಲಿದ್ದು, ಅದ್ದೂರಿ ಹಾಗೂ ಯಶಸ್ವಿಯಾಗಿ ಉತ್ಸವ ನಡೆಯಲು ಅಧಿಕಾರಿಗಳ ಜತೆಗೆ ಮುಖಂಡರು, ಭಕ್ತರು ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯರಾದ ತಹಸೀಲ್ದಾರ್​ ನಾಗಯ್ಯ ಹಿರೇಮಠ ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಗಾವಿ ಯಲ್ಲಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯತೆ ವಹಿಸಿ ಮಾತನಾಡಿ, ನಾನು ಅಧಿಕಾರಿ ಅಲ್ಲ ದೇವಿಯ ಭಕ್ತನಾಗಿದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಪಲ್ಲಕ್ಕಿ ಉತ್ಸವಕ್ಕೆ ರಾಜ್ಯ ಸೇರಿ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಟ್ರಾಫಿಕ್​ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿ. ಅಲ್ಲದೆ ವಾಹನಗಳ ಪಾರ್ಕಿಂಗ್​ಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ದೇವಸ್ಥಾನಕ್ಕೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛತೆ ಮಾಡಬೇಕು. ಕುಡಿವ ನೀರು, ಮೊಬೈಲ್​ ಟಾಯ್ಲೆಟ್​ ವ್ಯವಸ್ಥೆ ಮಾಡಬೇಕು. ವಿದ್ಯುತ್​ ವ್ಯವಸ್ಥೆ ಕಲ್ಪಿಸಬೇಕು. ಹದಗೆಟ್ಟ ರಸ್ತೆ ದುರಸ್ತಿ ಮಾಡಬೇಕು. ಜಾತ್ರೆ ಸಮಯದಲ್ಲಿ ಬೆಂಕಿ ಅನಾಹುತ ಆಗದಂತೆ ಅಗ್ನಿಶಾಮಕ ಅಧಿಕಾರಿಗಳು ಎಚ್ಚರವಹಿಸಬೇಕು. ಜಾತ್ರಾ ವಿಶೇಷ ಸಾರಿಗೆ ಬಸ್​ ವ್ಯವಸ್ಥೆ ಮಾಡಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸಿಪಿಐ ಎಸ್​.ಸಿ.ಪಾಟೀಲ್​, ಪಿಎಸ್​ಐ ಮಂಜುನಾಥ ರೆಡ್ಡಿ, ಮುಖಂಡರಾದ ಭೀಮಣ್ಣ ಕರದಳ್ಳಿ, ಮಲ್ಲರೆಡ್ಡಿ ಗೋಪಸೇನ್​, ಈರಪ್ಪ ಭೋವಿ, ರತ್ನಾಕರ ನಾಯಕ, ಚಂದ್ರಶೇಖರ ಅವಂಟಿ, ವಿಠಲ್​ ಕಟ್ಟಿಮನಿ, ನರಸಪ್ಪ ಭೋವಿ, ಶರಣಪ್ಪ ಕೋರವಾರ, ಅಂಬಾದಾಸ್​ ತುರೆ, ಭಾಸ್ಕರ ಪುಣೆ, ಶರಣಪ್ಪ ನಾಟೀಕಾರ, ಸುರೇಶ ಬೆನಕನಳ್ಳಿ, ಭೀಮಾಶಂಕರ ಹೋಳಿಕಟ್ಟಿ ಮಾತನಾಡಿದರು.

ಪ್ರಮುಖರಾದ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್​, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸುರೇಶ ಅಳ್ಳೊಳ್ಳಿ, ಲ್ಮಕಾಂತ ತಾಂಡೂರಕರ್​, ಶಿವಾಜಿ ಕಾಶಿ, ರಾಮಲಿಂಗ ಬಾನರ್​, ಶಿವಕಾಂತ್​ ಬೆಣ್ಣೂರಕರ್​, ಸಾಬಣ್ಣ ಹೊಳಿಕಟ್ಟಿ, ಭೀಮರಾಯ ಹೊತಿನಮಡಿ, ಶ್ರೀನಿವಾಸ ಪಾಸ್ಮೆ, ಮಹೇಶ ಕಾಶಿ, ರಾಮು ಹರವಾಳ, ನಾಗೇಂದ್ರ ಬುರ್ಲಿ, ಸಂಜಯ ಬುಳಕರ್​, ಬಸವರಾಜ ಮುಡಬೂಳಕರ್​, ಅಶ್ವತ್ಥ ನಾರಾಯಣ, ಮೈನೋದ್ದಿನ್​, ಮಂಜುನಾಥ, ಮಾರ್ಥಂಡ ಮುಡಬೂಳ, ಶಂಕರ ಇತರರಿದ್ದರು.

ಇದೇ ಸಂದರ್ಭದಲ್ಲಿ ಜಾತ್ರೆ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಸಂಗಮೇಶ ನಿರೂಪಣೆ ಮಾಡಿದರು. ಗ್ರೇಡ್​ 2 ತಹಸೀಲ್ದಾರ್​ ರಾಜಕುಮಾರ ಮರತೂರಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net