ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಣೆ ಅಗತ್ಯ

ಕಲಬುರಗಿ ಹೊರವಲಯದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಚಾಲನೆ ನೀಡಿದರು. ವಿಯೆಟ್ನಾಂನ ಗಣಿಗಾರಿಕೆ ಮತ್ತು ಭೂವಿಜ್ಞಾನ ವಿಶ್ವವಿದ್ಯಾಲಯದ ಪ್ರೊ.ಟೋ ಕ್ಸುವಾನ್​ ಬ್ಯಾನ್​, ಪ್ರೊ.ಪುರುಷೋತ್ತಮ ರೆಡ್ಡಿ, ಡಾ.ಜೊನಾಥನ್​ ಮಥುಸ್ವಾಮಿ ಪಿ. ಇತರರಿದ್ದರು.
ಕಲಬುರಗಿ ಹೊರವಲಯದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಚಾಲನೆ ನೀಡಿದರು. ವಿಯೆಟ್ನಾಂನ ಗಣಿಗಾರಿಕೆ ಮತ್ತು ಭೂವಿಜ್ಞಾನ ವಿಶ್ವವಿದ್ಯಾಲಯದ ಪ್ರೊ.ಟೋ ಕ್ಸುವಾನ್​ ಬ್ಯಾನ್​, ಪ್ರೊ.ಪುರುಷೋತ್ತಮ ರೆಡ್ಡಿ, ಡಾ.ಜೊನಾಥನ್​ ಮಥುಸ್ವಾಮಿ ಪಿ. ಇತರರಿದ್ದರು.
Published on: 

ಕಲಬುರಗಿ: ಭವಿಷ್ಯದ ಪೀಳಿಗೆಗಾಗಿ ಪ್ರಕೃತಿ ಮತ್ತು ಪರಿಸರ ಸಂರಕ್ಷಿಸುವ ತುರ್ತು ಅಗತ್ಯವಿದೆ. ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಮಾನವನ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭೂಮಿ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಮಾನವನ ಪ್ರಭಾವ ಕುರಿತು ಸೋಮವಾರ ಆಯೋಜಿಸಿದ್ದ 5 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರು ಪರಿಸರ ಸವಾಲು ಕುರಿತು ಚರ್ಚಿಸಿ, ಪ್ರಾಯೋಗಿಕ ಪರಿಹಾರ ರೂಪಿಸುವುದರ ಜತೆಗೆ ನೀತಿ ನಿರೂಪಕರಿಗೆ ಸೂಕ್ತ ಶಿಫಾರಸು ಸಲ್ಲಿಸಬೇಕು. ಇಂತಹ ಪ್ರಯತ್ನಗಳು ಸುಸ್ಥಿರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಆಶಯ ಸಾಕಾರಗೊಳಿಸಲು ನೆರವಾಗಲಿವೆ ಎಂದರು.

ಮುಖ್ಯ ಭಾಷಣ ಮಾಡಿದ ವಿಯೆಟ್ನಾಂನ ಗಣಿಗಾರಿಕೆ ಮತ್ತು ಭೂವಿಜ್ಞಾನ ವಿಶ್ವವಿದ್ಯಾಲಯದ ಪ್ರೊ.ಟೋ ಕ್ಸುವಾನ್​ ಬ್ಯಾನ್​ ಅವರು ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ, ಪರಿಸರ ಅವನತಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಎದುರಾಗುತ್ತಿರುವ ಸವಾಲು ಕುರಿತು ಸಮಗ್ರ ವಿವರಣೆ ನೀಡಿದರು.

ಹೈದರಾಬಾದ್​ನ ಪರಿಸರ ತ ಪ್ರೊ.ಪುರುಷೋತ್ತಮ್​ ರೆಡ್ಡಿ, ಅಂತಾರಾಷ್ಟ್ರೀಯ ಸಂಯೋಜಕ ಡಾ.ಜೊನಾಥನ್​ ಮಥುಸ್ವಾಮಿ ಪಿ. ಮಾತನಾಡಿದರು.

ಪ್ರಾಧ್ಯಾಪಕರಾದ ಪ್ರೊ.ಮೊಹಮ್ಮದ್​ ಅಸ್ಲಾಂ, ಡಾ.ಲಿಂಗದೇವರು ಎಂ., ಡಾ.ಅರ್ಚನಾ ಕುಜುರ್​, ಡಾ.ಕೆ.ಚನ್ನಬಸಪ್ಪ, ಡಾ. ತೇಜಸ್ವಿ ಲಕ್ಕುಂಡಿ, ಡಾ.ಎಂ.ಅಲೀಮ್​ ಪಾಷಾ, ಡಾ.ಬಿ.ಮಹಾಲಿಂಗಂ, ಡಾ.ಅಶೋಕ ಕುಮಾರ್​, ಡಾ.ವಿಶ್ವನಾಥ ಬಿ.ಸಿ., ಡಾ.ಸಂಜಿತ್​ ಸರ್ಕಾರ್​, ಡಾ.ಸ್ವಾಗತಾ ೂಷ್​, ಪ್ರೊ.ಪಲ್ಲೆಪೋಗು ರಾವಯ್ಯ, ಡಾ.ಪಿ.ಕುಮಾರ ಮಂಗಳಂ, ಡಾ.ಮಲ್ಲಿಕಾರ್ಜುನ ಹೂಗಾರ, ಡಾ.ಪ್ರಕಾಶ್​ ಬಾಳಿಕಾಯಿ ಇತರರಿದ್ದರು.

ಭಾರತೀಯ ಸಮ್ಮೇಳನದ ಸಂಚಾಲಕ, ಡೀನ್​ ಪ್ರೊ.ಎಂ.ಪ್ರಶಾಂತ್​ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಡಾ.ಬಾಬು ನಲ್ಲುಸಾಮಿ ಸಮ್ಮೇಳನದ ಉದ್ದೇಶ ವಿವರಿಸಿದರು. ಡಾ.ರೋಶನಿ ಪಟೇಲ್​ ವಂದಿಸಿದರು.

ಸುಸ್ಥಿರ ಭವಿಷ್ಯ ನಿರ್ಮಾಣಕ್ಕೆ ವೈಜ್ಞಾನಿಕ ನಾವೀನ್ಯತೆ, ಅಂತಾರಾಷ್ಟ್ರೀಯ ಸಹಕಾರ ಅಗತ್ಯ. ಭೂಮಿಯನ್ನು ಸಮಗ್ರ ಅರ್ಥ ಮಾಡಿಕೊಳ್ಳುವುದು, ಪರಿಸರ ಸಂರಕ್ಷಿಸುವುದು ಮತ್ತು ಸುಸ್ಥಿರತೆ ಉತ್ತೇಜಿಸುವುದು ಭೂವಿಜ್ಞಾನಿಗಳ ಸಾಮೂಹಿಕ ಜವಾಬ್ದಾರಿ. ಭಾರತ, ಮೆಕ್ಸಿಕೊ ಮತ್ತು ವಿಯೆಟ್ನಾಂನ ಶಿಕ್ಷಣ ಸಂಸ್ಥೆಗಳ ಮಧ್ಯೆ ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ ಮತ್ತು ಸಹಯೋಗಕ್ಕೆ ವಿಫುಲ ಅವಕಾಶಗಳಿವೆ.
> ಪ್ರೊ.ಟೋ ಕ್ಸುವಾನ್​ ಬ್ಯಾನ್​, ಪ್ರಾಧ್ಯಾಪಕ, ಗಣಿಗಾರಿಕೆ ಮತ್ತು ಭೂವಿಜ್ಞಾನ ವಿಶ್ವವಿದ್ಯಾಲಯ, ವಿಯಟ್ನಾಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net