ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವಿಸಿ

ಲಾಡ್ಲಾಪುರದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಪ್ರೊಬೇಷನರಿ ಐಎಎಸ್​ ಅಧಿಕಾರಿ ಶಿಖರ್​ ಮೋಘಾ ಉದ್ಘಾಟಿಸಿದರು. ಡಾ.ಮಹ್ಮದ್​ ಇರ್ಫಾನ್​, ಸಂಜೀವಕುಮಾರ ಮಾನಕರ, ವಿಶ್ವನಾಥ ಗಂಧಿ, ನಾಗೇಂದ್ರಪ್ಪ ಮುಕ್ತೇದಾರ ಇತರರಿದ್ದರು.

Published on: 

ವಾಡಿ: ರಕ್ತಹಿನತೆ, ಅಪೌಷ್ಟಿಕತೆ ಮಾನವ ಸಂಕುಲಕ್ಕೆ ದೊಡ್ಡ ಶತ್ರುವಾಗಿದ್ದು, ಇದನ್ನು ಹೊಡೆದೊಡಿಸಲು ಪೋಷಕಾಂಶವುಳ್ಳ ಆಹಾರ ಸೇವನೆ ಮಾಡಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮಹ್ಮದ್​ ಇರ್ಫಾನ್​ ಇನಾಮದಾರ್​ ಹೇಳಿದರು.

ಲಾಡ್ಲಾಪುರದಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಆರೋಗ್ಯ ಕುರಿತಾದ ಕಾಳಜಿ ಎಲ್ಲರೂ ಬೆಳೆಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ. ಅವರಿಗೆ ಪೌಷ್ಟಿಕ ಆಹಾರ ನೀಡುವ ಬಗ್ಗೆ ಗಮನ ವಹಿಸಬೇಕು. ನಿತ್ಯ ಮೊಳಕೆಕಾಳು, ಮೊಟ್ಟೆಯಂತಹ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.

ಪ್ರೊಬೇಷನರಿ ಐಎಎಸ್​ ಅಧಿಕಾರಿ ಶಿಖರ್​ ಮೋಘಾ ಉದ್ಘಾಟಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ, ಗ್ರಾಪಂ ಪಿಡಿಒ ದೇವಿಂದ್ರ ಕೊಂಕಲ್​, ಪಿಕೆಪಿಎಸ್​ ಅಧ್ಯಕ್ಷ ವಿಶ್ವನಾಥ ಗಂಧಿ, ಪ್ರಮುಖರಾದ ನಾಗೇಂದ್ರಪ್ಪ ಮುಕ್ತೇದಾರ್​, ಸಾಬಣ್ಣ ಆನೇಮಿ, ಸಾಬಣ್ಣ ಗೊಡಗ, ಡಾ.ಮಸೀಹಾ, ಡಾ.ಸುಧೀರ್​, ಡಾ.ಅಜಯ್​ ಇತರರಿದ್ದರು.

410 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. 120 ಜನರಿಗೆ ಕನ್ನಡಕ ವಿತರಿಸಲಾಯಿತು. ಶಾಂತಕುಮಾರ ಎಣ್ಣಿ ನಿರೂಪಣೆ ಮಾಡಿ ವಂದಿಸಿದರು.