ಡಾ.ಸ್ವಾಮಿರಾವ್‌ಗೆ ಪುರಂಧರ ಅನುಗ್ರಹ ಪ್ರಶಸ್ತಿ

ಡಾ.ಸ್ವಾಮಿರಾವ್‌ಗೆ ಪುರಂಧರ ಅನುಗ್ರಹ ಪ್ರಶಸ್ತಿ
ಡಾ.ಸ್ವಾಮಿರಾವ್‌ಗೆ ಪುರಂಧರ ಅನುಗ್ರಹ ಪ್ರಶಸ್ತಿ
Published on

ಪ್ರಮುಖ ಮುಖ್ಯಾಂಶಗಳು

  • ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್
ಕಲಬುರಗಿ: ನಿವೃತ್ತ ಪ್ರಾಚಾರ್ಯ, ಹಿರಿಯ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸ ಡಾ.ಸ್ವಾಮಿರಾವ ಕುಲಕರ್ಣಿಯವರು ದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸಾಧನೆಗಾಗಿ ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯದ ಪ್ರಾಜೆಕ್ಟದಿಂದ ಪುರಂದರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟಿ.ಟಿ.ಡಿ. ದಾಸ ಸಾಹಿತ್ಯ ಪ್ರಾಜೆಕ್ಟ್ನ ವಿಶೇಷಾಧಿಕಾರಿ ಪಂಡಿತ ಆನಂದತೀರ್ಥಾಚಾರ್ಯ ಪಗಡಾಲ್ ತಿಳಿಸಿದ್ದಾರೆ.
ಡಾ.ಸ್ವಾಮಿರಾವ ಕುಲಕರ್ಣಿಯವರು ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಕಾರ್ಯಕ್ರಮ ಸಂಘಟನೆಯ ಮೂಲಕ ದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಸ್ಲಾಂ ಧರ್ಮದ ಪಿಂಜಾರ ಬಡೇಸಾಹೇಬರು ಶ್ರೀರಾಮ ಅಂಕಿತದಿAದ ಶ್ರೀರಾಮದಾಸರಾಗಿ ಸಾವಿರ ಕೀರ್ತನೆ ರಚಿಸಿ ದಾಸ ಸಾಹಿತ್ಯಕ್ಕೆ ಧಾರ್ಮಿಕ ಭಾವೈಕ್ಯಕ್ಕೆ ಸಾಕ್ಷಿಯಾಗಿರುವ ಅಪರೂಪದ ವ್ಯಕ್ತಿತ್ವದ ಶ್ರೀರಾಮದಾಸರ ಕುರಿತು ಮಹಾಪ್ರಬಂಧ ಬರೆದು ಪಿಎಚ್‌ಡಿ ಗೌರವಕ್ಕೆ ಪಾತ್ರರಾಗಿದ್ದಾರೆ. ಈವರೆಗೆ ತಾವು ಬರೆದ ಸಂಪಾದಿಸಿದ ೮೦ ಪುಸ್ತಕಗಳಲ್ಲಿ ೨೨ ಪುಸ್ತಕಗಳು ದಾಸ ಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಿಸುವ, ಸಂಶೋಧನೆ ವಿಷಯ ಹೊಂದಿದ ಗ್ರಂಥಗಳಾಗಿವೆ.
ಕಳೆದ ನಾಲ್ಕು ದಶಕಗಳಿಂದ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಾಸ ಸಾಹಿತ್ಯ ವಿಚಾರವಾಹಿನಿ ವೇದಿಕೆ, ದಾಸ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಂಸ್ಥಾಪಕ ಅಧ್ಯಕ್ಷರಾಗಿ, ದಾಸ ಸಾಹಿತ್ಯದ ವಿವಿಧ ಕಾರ್ಯಕ್ರಮ ಗಮನಿಸಿ, ಮಂತ್ರಾಲಯ ಮಠದ ಶ್ರೀ ವಿಜಯೀಂದ್ರ ಪ್ರಶಸ್ತಿ ಹಾಗು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿಯೊಂದಿಗೆ ವಿವಿಧ ಸಂಘ, ಸಂಸ್ಥೆ, ಮಠ, ಮಂದಿರಗಳು ನೀಡುವ ಐವತ್ತು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವುದು ವಿಶೇಷ.
ದಾಸ ಸಾಹಿತ್ಯಕ್ಕೆ ಅವರು ಸಲ್ಲಿಸಿರುವ ಮಹತ್ವದ ಸೇವೆ ಗಮನಿಸಿ ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟವತಿಯಿಂದ ಜನೆÀವರಿ ೧೭ರಂದು ತಿರುಪತಿಯಲ್ಲಿ ನಡೆಯಲಿರುವ ಪುರಂದರದಾಸರ ಆರಾಧನೆಯ ಸಂದರ್ಭದಲ್ಲಿ ಡಾ.ಸ್ವಾಮಿರಾವ ಕುಲಕರ್ಣಿ ಅವರಿಗೆ ಪುರಂದರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅವರ ಸಾಧನೆಗೆ ಸಂದ ಗೌರವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net