ಬರ ಘೋಷಣೆ: ಕಲಬುರಗಿಗೆ ಅನ್ಯಾಯಕ್ಕೆ ಭುಗಿಲೆದ್ದ ಹೋರಾಟ: ರೈತರು ವಶಕ್ಕೆ
Drought declaration Farmers strike
Published on:
Copied
Follow Us
ಕಲಬುರಗಿ: ಮಳೆ ಇಲ್ಲದೇ ಭೀಕರ ಬರ ಇದ್ದರೂ ಜಿಲ್ಲೆಯನ್ನು ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಜಿಲ್ಲಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಸರ್ಕಾರದ ವಿರುದ್ಧ ನಗರದಲ್ಲಿ ರೈತ ಸಂಘಟನೆಗಳವರು ಬೃಹತ್ ಪ್ರತಿಭಟನೆ ನಡೆಸಿ ಕಿಡಿಕಾರಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ರೈತರು ಸೇರಿ, ಮುಖ್ಯರಸ್ತೆ ವಾಹನ ಸಂಚಾರವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆದು ಪ್ರತಿಭಟನಾನಿರತ ರೈತರನ್ನು ತೆರವುಗೊಳಿಸುವ ವೇಳೆ ಕಿಡಿಕಾರಿದರು. ಈ ವೇಳೆ ರೈತರನ್ನು ಬಂಧಿಸಿ, ಕರೆದೊಯ್ದರು. ರೈತರು ವಾಹನದ ಎದುರು ರಸ್ತೆ ಮೇಲೆ ಮಲಗಿ, ಬಂಧಿತ ರೈತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ, ಜಿಲ್ಲೆಯಲ್ಲಿ ಮೂರು ಸಚಿವರಿದ್ದರೂ ಬರ ಘೋಷಣೆ ಪಟ್ಟಿಯಲ್ಲಿ ಸೇರಿಸಲು ಸರ್ಕಾರಕ್ಕೆ ಮನವರಿಕೆ ಮಾಡಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಳೆ ಇಲ್ಲದೇ ಮುಂಗಾರು ಸೇರಿದಂತೆ ಎಲ್ಲ ರೀತಿಯ ಬೆಳೆಗಳು ಒಣಗಿ ನಿಂತ್ತಿವೆ. ಅಂತರ್ಜಲ ಸಂಪೂರ್ಣ ಕುಸಿದಿದ್ದು, ಕುಡಿಯಲೂ ನೀರು ಸಿಗುತ್ತಿಲ್ಲ. ಇಂತಹ ಹೀನಾಯ ಸ್ಥಿತಿ ಇದ್ದರೂ ಬರ ಪಟ್ಟಿಯಿಂದ ಜಿಲ್ಲೆಯನ್ನು ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮಹೇಶಕುಮಾರ ರಾಠೋಡ, ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ಉಮಾಪತಿ ಮಾಲಿ ಪಾಟೀಲ್, ಸಾಜೀದ್ ಅಹ್ಮದ್, ಸಿದ್ದು ಕರಗೊಂಡ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.