ಕೆಕೆಆರ್​ಡಿಬಿಗೆ ರು.6 ಸಾವಿರ ಕೋಟಿ ನೀಡಿ

ಡಾ.ಅಜಯಸಿಂಗ್
ಡಾ.ಅಜಯಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಅಜಯಸಿಂಗ್​ ಬೇಡಿಕೆ
  • ಜೇವರ್ಗಿಗೆ 365 ಕೋಟಿ ಬಹುಗ್ರಾಮ ಯೋಜನೆ ಜಾರಿ
ಯಡ್ರಾಮಿ: ಕಾಂಗ್ರೆಸ್​ ಸರ್ಕಾರದ ಶ್ರಮದಿಂದ 371 ಜೆ ಜಾರಿ ಆಗಿದ್ದು, ಪ್ರತಿ ಬಾರಿ ಸಿಎಂ ಸಿದ್ದರಾಮಯ್ಯ ಇದ್ದಾಗಲೇ ಕೆಕೆಆರ್​ಡಿಬಿಗೆ 1 ಸಾವಿರ, 2 ಸಾವಿರ, 3 ಸಾವಿರ, 5 ಸಾವಿರ ಕೋಟಿ ರೂ. ಘೋಷಿಸಿದ್ದರು. ಪ್ರಸ್ತುತ ಬಜೆಟ್​ ಗಾತ್ರ ಹೆಚ್ಚಳವಾಗಿದ್ದು, ಮುಂದಿನ ಬಜೆಟ್​ನಲ್ಲಿ ಆರು ಸಾವಿರ ಕೋಟಿ ರೂ. ನೀಡಬೇಕು ಎಂದು ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್​ ಮನವಿ ಮಾಡಿದರು.
ಸರ್ಕಾರ ನಮ್ಮ ಎಲ್ಲ ಬೇಡಿಕೆಗೆ ಸ್ಪಂದಿಸುತ್ತಿದ್ದು, ಜೇವರ್ಗಿ&-ಯಡ್ರಾಮಿ ತಾಲೂಕಿನ ಕೆಬಿಜೆಎನ್​ಎಲ್​ ನಾಲಾಗಳ ಲ್ಯಾಟರಲ್​ ಹಾಗೂ ಏಫ್​ಐಸಿ ಕಾಲುವೆಗಳನ್ನು ನವೀಕರಣ ಮಾಡಬೇಕು. ಪದವಿ ಕಾಲೇಜು ನಿರ್ಮಿಸಬೇಕು. ಉಪನೋಂದಣಾಧಿಕಾರಿ ಹಾಗೂ ಮುದ್ರಾಂಕ ಕಚೇರಿ ಸ್ಥಾಪಿಸಬೇಕು ಎಂದರು.
ಯಡ್ರಾಮಿ ಪಟ್ಟಣದ ಸರ್ವೆ 442, 237 ಹಾಗೂ 130ರ ಸರ್ಕಾರಿ ಜಮೀನಿನಲ್ಲಿ ಸುಮಾರು 50 ವರ್ಷದಿಂದ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಅವುಗಳನ್ನು ಸಕ್ರಮಗೊಳಿಸಬೇಕು ಎಂದು ಮನವಿ ಮಾಡಿದರು.
ಸುವರ್ಣಸೌಧ ಮಾದರಿ ಯಡ್ರಾಮಿ ಸೌಧ: ಯಡ್ರಾಮಿಯಲ್ಲಿ ಬೆಳಗಾವಿ ಸುವರ್ಣ ಸೌಧದ ಮಾದರಿ ಗುಡ್ಡದ ಮೇಲೆ ಪ್ರಜಾಸೌಧ ನಿರ್ಮಿಸುತ್ತಿದ್ದು, ಪ್ರಭಾವತಿ ಧರ್ಮಸಿಂಗ್​ ಅವರು ಐದು ಎಕರೆ ಜಮೀನು ನೀಡಿದ್ದಾರೆ. ಸುಸ್ಸಜ್ಜಿತ ಸೌಧ ತಲೆ ಎತ್ತಲಿದೆ. ಯಡ್ರಾಮಿಯ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮುಖಂಡರ ಸಹಕಾರ ದೊರಕಿದೆ ಎಂದು ಡಾ.ಅಜಯಸಿಂಗ್​ ಸ್ಮರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net