ದೊಡ್ಡ ಕನಸು ಕಾಣಿ ಉನ್ನತ ಗುರಿ ಸಾಧಿಸಿ

ಕಲಬುರಗಿ ಸಿಯುಕೆನಲ್ಲಿ ಬುಧವಾರ ಆಯೋಜಿಸಿದ್ದ ವೃತ್ತಿ ಸಮಾಲೋಚನೆ, ಉದ್ಯೋಗ ನಿಯೋಜನೆ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಪಾಂಡುರAಗ ಪತ್ತಿ, ಸುಹಾಸ್ ರಜಪೂತ್ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಬುಧವಾರ ಆಯೋಜಿಸಿದ್ದ ವೃತ್ತಿ ಸಮಾಲೋಚನೆ, ಉದ್ಯೋಗ ನಿಯೋಜನೆ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಪಾಂಡುರAಗ ಪತ್ತಿ, ಸುಹಾಸ್ ರಜಪೂತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಕುಲಪತಿ ಪ್ರೊ.ಸತ್ಯನಾರಾಯಣ ಹೇಳಿಕೆ
  • ವೃತ್ತಿ ಸಮಾಲೋಚನೆ, ಉದ್ಯೋಗ ನಿಯೋಜನೆ ಕಾರ್ಯಾಗಾರ
ಕಲಬುರಗಿ: ದೊಡ್ಡ ಕನಸು ಕಾಣಿ, ಜೀವನದಲ್ಲಿ ಉನ್ನತ ಗುರಿ ಸಾಧಿಸಿ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗ ಬುಧವಾರ ಆಯೋಜಿಸಿದ್ದ ವೃತ್ತಿ ಸಮಾಲೋಚನೆ ಮತ್ತು ಉದ್ಯೋಗ ನಿಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪ್ರೊ.ಬಟ್ಟು, ನಿಮ್ಮ ಪೀಳಿಗೆಗೆ ನಮ್ಮ ಪೀಳಿಗೆಗಿಂತ ಹೆಚ್ಚಿನ ಅವಕಾಶಗಳಿವೆ. ಹಿಂದಿನ ಜನರು ಸರ್ಕಾರಿ ಉದ್ಯೋಗ ಮಾತ್ರ ನೋಡುತ್ತಿದ್ದರು. ಆದರೆ ಇಂದು ನಿಮಗೆ ಖಾಸಗಿ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ನೀವು ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಬಹುದು, ಉದ್ಯಮಿಯಾಗಬಹುದು. ಉನ್ನತ ಪದವಿ ಹೊಂದಿರುವ ಕೆಲವರು ಕೆಳ ಹಂತದ ಉದ್ಯೋಗ ಹುಡುಕುವುದು ದುರದೃಷ್ಟಕರ ಎಂದರು.
ಬೆಳಗಾವಿಯ ಪ್ರೊಫಿಸಿಯಂಟ್ ಮೈಂಡ್ಸ್ನ ಸಂಸ್ಥಾಪಕ ಮತ್ತು ಸಂಪನ್ಮೂಲ ವ್ಯಕ್ತಿ ಸುಹಾಸ್ ರಜಪೂತ್ ಮಾತನಾಡಿ, ಉದ್ಯಮದಲ್ಲಿ ಉದ್ಯೋಗಾವಕಾಶ ಸದಾ ತೆರೆದುಕೊಂಡಿರುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೌಶಲದಲ್ಲಿ ವಿಶ್ವಾಸ ಹೊಂದಿರಬೇಕು. ಉದ್ಯೋಗ ಪಡೆಯಲು ವಿಶ್ವವಿದ್ಯಾಲಯವೇ ಎಲ್ಲವನ್ನೂ ಮಾಡುತ್ತದೆ ಎಂದು ನಿರೀಕ್ಷಿಸಬೇಡಿ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶದ ಎಲ್ಲಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಕಂಪನಿ ಆಹ್ವಾನಿಸುವುದು, ಕಾರ್ಯಕ್ರಮ ಆಯೋಜಿಸುವುದು, ಉದ್ಯೋಗಾವಕಾಶ ಪ್ರಕ್ರಿಯೆ ನೋಡಿಕೊಳ್ಳುವುದನ್ನು ವಿದ್ಯಾರ್ಥಿಗಳೇ ಮಾಡುತ್ತಾರೆ. ಮಾನವ ಸಂಪನ್ಮೂಲ ವ್ಯವಸ್ಥಾಪಕರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಉದ್ಯೋಗ ಪಡೆಯುವುದು ಹೇಗೆ ಎಂದು ನೀವು ತಿಳಿದಿರಬೇಕು. ಲಿಂಕ್ಡ್ಇನ್ ಅತ್ಯಂತ ಶಕ್ತಿಶಾಲಿ ವೃತ್ತಿಪರ ನೆಟ್‌ವರ್ಕಿಂಗ್ ಮತ್ತು ಉದ್ಯೋಗ ಹುಡುಕಾಟ ವೇದಿಕೆ. ಉದ್ಯೋಗ ಪಡೆಯಲು ಸಾಮಾಜಿಕ ಜಾಲತಾಣ ಹೇಗೆ ಬಳಸುವುದು ಎಂದು ನೀವು ತಿಳಿದಿರಬೇಕು. ಅವುಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ಹೇಳಿದರು.
ಡೀನ್ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಪ್ರೊ.ಪಾಂಡುರAಗ ಪತ್ತಿ ಮಾತನಾಡಿ, ಇಂದು ಅವಕಾಶಗಳು ಹೆಚ್ಚಾಗಿವೆ, ಅದೇ ಸಮಯದಲ್ಲಿ ಉದ್ಯೋಗ ಪಡೆಯುವುದು ತುಂಬಾ ಕಠಿಣವಾಗುತ್ತಿದೆ. ಸರಿಯಾದ ಉದ್ಯೋಗ ಗಿಟ್ಟಿಸಲು ಉತ್ತಮ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಸಂಯೋಜಕ ಡಾ.ಶೈಲಜಾ ಕೊನೆಕ್ ಪ್ರಾಸ್ತಾವಿಕ ಮಾತನಾಡಿ, ಇಂದಿನ ಜಗತ್ತಿನಲ್ಲಿ ಕೇವಲ ಬಲವಾದ ಶೈಕ್ಷಣಿಕ ಹಿನ್ನೆಲೆ ಸಾಕಾಗುವುದಿಲ್ಲ, ವಿದ್ಯಾರ್ಥಿಗಳು ವ್ಯಕ್ತಿತ್ವ ಕೌಶಲ ಮತ್ತು ವೃತ್ತಿಪರ ನೆಟ್‌ವರ್ಕಿಂಗ್ ಹೊಂದಿರಬೇಕು. ಉದ್ಯೋಗ ನಿಯೋಜನೆಗಾಗಿ ವೃತ್ತಿಪರ ನೆಟ್‌ವರ್ಕಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಉದ್ಯೋಗ ನಿಯೋಜನೆಗಾಗಿ ಎಲ್ಲಾ ವೃತ್ತಿಪರ ನೆಟ್‌ವರ್ಕಿಂಗ್ ಕೌಶಲ ಕಲಿಯಲು ಈ ಕಾರ್ಯಾಗಾರ ನಿಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಡಾ.ಎಂ.ಜೋಹೈರ್ ಸ್ವಾಗತಿಸಿದರು, ಸಚಿನ್‌ಸಿಂಗ್ ಶೇಖಾವತ್ ನಿರೂಪಿಸಿದರು, ಡಾ.ಶ್ರೀಲಕ್ಷಿö್ಮÃ ವಂದಿಸಿದರು. ಪ್ರೊ.ವಿಜಯಕುಮಾರ, ಡಾ.ಗಣಪತಿ ಸಿನ್ನೂರ, ಡಾ.ಶುಷ್ಮಾ, ಡಾ.ಸಫಿಯಾ ಪರ್ವೀನ್, ಡಾ.ಮಹೇಂದ್ರ, ಡಾ.ಶಿವಕುಮಾರ ಬೆಳ್ಳಿ, ಡಾ.ನಿರಂಜನ್ ಪೂಜಾರ ಇತರರಿದ್ದರು.
"

ನೀವು ದೊಡ್ಡ ಕನಸು ಕಾಣಬೇಕು ಮತ್ತು ಜೀವನದಲ್ಲಿ ಉನ್ನತ ಗುರಿ ಸಾಧಿಸಬೇಕು. ಜೀವನದಲ್ಲಿ ಒಳ್ಳೆಯ ಉದ್ಯೋಗ ಪಡೆದ ನಂತರ ನಿಮ್ಮ ಕಿರಿಯರಿಗೆ ಉದ್ಯೋಗ ಪಡೆಯಲು ಸಹಾಯ ಮಾಡಿ, ಹಳೆಯ ವಿದ್ಯಾರ್ಥಿಗಳು ಉದ್ಯೋಗ ನಿಯೋಜನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ.

ಪ್ರೊ.ಬಟ್ಟು ಸತ್ಯನಾರಾಯಣ,ಕುಲಪತಿ, ಸಿಯುಕೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net