53 ಸಿಎಚ್‌ಸಿ ತಜ್ಞ ವೈದ್ಯರ ಸೇವೆ ಶಿಫ್ಟ್

ಮುಧೋಳ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ.
ಮುಧೋಳ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವತ್ರಿಕ ಆಕ್ರೋಶ, ಕೋರ್ಟ್ ಮೊರೆ ಹಿನ್ನೆಲೆ
  • ಹೊರಡಿಸಿದ ಆದೇಶಕ್ಕೆ ರಾಜ್ಯ ಸರ್ಕಾರ ತಡೆ
ಕಲಬುರಗಿ:ಕಡಿಮೆ ಹೆರಿಗೆ ಪ್ರಮಾಣದ ಹಿನ್ನೆಲೆಯಲ್ಲಿ ರಾಜ್ಯದ ೨೩೩ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಹೆರಿಗೆ ತಜ್ಞರ ಸೇವೆ ಹಿಂತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಸಾರ್ವತ್ರಿಕ ಆಕ್ರೋಶ, ಕೆಲವರು ಕೋರ್ಟ್ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿದ್ದ ಆದೇಶಕ್ಕೆ ತಡೆಯೊಡ್ಡಿದೆ.
ರಾಜ್ಯದ ೨೩೩ರ ಪೈಕಿ ಕಲ್ಯಾಣ ಕರ್ನಾಟಕದಲ್ಲಿ ೫೩, ಅದರಲ್ಲಿ ಕಲಬುರಗಿ ೧೫ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿವೆ. ತಿಂಗಳಲ್ಲಿ ಕನಿಷ್ಟ ೩೦ಕ್ಕಿಂತಲೂ ಕಡಿಮೆ ಹೆರಿಗೆ ಆಗುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ತಜ್ಞರ ಸೇವೆ ವಾಪಸ್ ಪಡೆದು ಸಮೀಪದ ೩೦ಕ್ಕಿಂತ ಹೆಚ್ಚು ಹೆರಿಗೆ ಪ್ರಮಾಣವಿರುವ ಕೇಂದ್ರ ಅಥವಾ ತಾಲೂಕು ಆಸ್ಪತ್ರಗೆ ಇವರ ಸೇವೆ ನಿಯೋಜಿಸಲು ಸರ್ಕಾರ ನಿರ್ದೇಶಿಸಿತ್ತು.
ತಜ್ಞ ವೈದ್ಯರ ಕೊರತೆ ಇರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿಯೋಜನೆಗೊಂಡ ತಜ್ಞ ವೈದ್ಯರನ್ನು ನೇಮಿಸಲಾಗುತ್ತಿದೆ. ತಾಲೂಕು ಆಸ್ಪತ್ರೆ ಮತ್ತು ತಿಂಗಳಿಗೆ ೩೦ಕ್ಕೂ ಹೆಚ್ಚು ಹೆರಿಗೆ ಪ್ರಮಾಣ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರ ಬಲಪಡಿಸಲು ಹೆರಿಗೆ ತಜ್ಞರು, ಅರವಳಿಕೆ ತಜ್ಞರು, ಎಂಸಿಎಚ್ ಟ್ರಿಪಲ್ ಎಕ್ಸ್ಪರ್ಟ್ಗಳ ಸೇವೆ ಬಳಕೆ ಮಾಡಲು ಯೋಜಿಸಲಾಗಿದೆ.
೩೦ಕ್ಕೂ ಹೆಚ್ಚು ಹೆರಿಗೆ ಮಾಡುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಇನ್ಮುಂದೆ ಸಿಇಎಂಓಎನ್‌ಸಿ (ಕಾಂಪ್ರಹೆನ್ಸಿವ್ ಎಮರ್ಜನ್ಸಿ ಆಬ್‌ಸ್ಟೆಟ್ರಿಕ್ ಮತ್ತು ನ್ಯೂಬಾರ್ನ್ ಕೇರ್), ೩೦ಕ್ಕೂ ಕಡಿಮೆ ಹೆರಿಗೆ ಮಾಡುವ ಸಿಎಚ್‌ಸಿಗಳನ್ನು ಬಿಇಎಂಒಎನ್‌ಸಿ (ಬೇಸಿಕ್ ಎಮರ್ಜೆನ್ಸಿ ಒಬ್‌ಸ್ಟೆಟ್ರಿಕ್ ನ್ಯೂಬಾರ್ನ್ ಕೇರ್ ಸೆಂಟರ್) ಎಂದು ಕರೆಯಲು ಯೋಜಿಸಲಾಗಿದೆ.
ಯಾದಗಿರಿ ಜಿಲ್ಲೆಯ ರಾಜನಕೊಳ್ಳುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ತಿಂಗಳಲ್ಲಿ ೧೦೦ ಹೆರಿಗೆ ಆಗಿವೆ ಇತಿಹಾಸ ದಾಖಲಿಸಿದೆ. ಚಿತ್ರದುರ್ಗದ ರಾಂಪೂರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ೩೦ಕ್ಕೂ ಅಧಿಕ ಹೆರಿಗೆ ಪ್ರಮಾಣ ಕಂಡುಬAದಿದೆ.
ಕಲಬುರಗಿ ಜಿಲ್ಲೆಯ ೧೫, ಬೀದರ್ ಜಿಲ್ಲೆಯ ೮, ರಾಯಚೂರು ಜಿಲ್ಲೆಯ ೬ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಜಿಲ್ಲೆಯ ಅಫಜಲಪುರ ತಾಲೂಕು ದೇವಲಗಾಣಗಾಪೂರ್ ಮತ್ತು ಸ್ಟೇಷನ್ ಗಾಣಗಾಪೂರ್, ಚಿಂಚೋಳಿ ತಾಲೂಕಿನ ಗಡಿಕೇಶ್ವರ, ಕುಂಚಾವರA, ಕಾಳಗಿ ತಾಲೂಕು ಗುಂಡಗುರ್ತಿ, ಹೆಬ್ಬಾಳ್, ಚಿತ್ತಾಪುರ ತಾಲೂಕು ವಾಡಿ, ಆಳಂದ ತಾಲೂಕು ಮಾದನಹಿಪ್ಪರಗಾ, ನರೋಣಾ, ನಿಂಬರ್ಗಾ, ಸೇಡಂ ತಾಲೂಕಿನ ಮಳಖೇಡ, ಮುಧೋಳ, ಜೇವರ್ಗಿ ತಾಲೂಕು ನೆಲೋಗಿ ಮತ್ತು ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.
ತಜ್ಞ ವೈದ್ಯರ ಸೇವೆ ವಾಪಸ್ ಪಡೆಯುವ ಸರ್ಕಾರದ ನಿರ್ಧಾರದ ವಿರುದ್ಧ ಗಡಿಕೇಶ್ವರ ಗ್ರಾಮದ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಸೇವೆ ಸ್ಥಳಾಂತರಿಸಬಾರದು. ಈ ಮೊದಲಿನಂತೆ ಪ್ರಸಕ್ತ ಇರುವ ಸಿಎಚ್‌ಸಿನಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಸ್ಪತ್ರೆ ಮೇಲ್ದರ್ಜೆಗೆ

ಕಾಳಗಿ, ಯಡ್ರಾಮಿ, ಇಜೇರಿ, ಫರಹತಾಬಾದ್, ಹಿರೇಸಾವಳಗಿಯ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ಜಿ¯್ಲೆಯ ಕಾಳಗಿ ಹಾಗೂ ಯಡ್ರಾಮಿಯ ೩೦ ಹಾಸಿಗೆಗಳ ಸಮುದಾಯ ಆರೋಗ್ಯಗಳನ್ನು ೫೦ ಹಾಸಿಗೆಗಳ ಸಿಎಚ್‌ಸಿಗಳನ್ನಾಗಿ ಹಾಗೂ ಜಿ¯್ಲÉಯ ಜೇವರ್ಗಿ ತಾಲೂಕಿನ ಇಜೇರಿ, ಕಲಬುರಗಿ ತಾಲೂಕಿನ ಫರಹತಾಬಾದ್ ಮತ್ತು ಹಿರೇಸಾವಳಗಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ೩೦ ಹಾಸಿಗೆಗಳ ಸಿಎಚ್‌ಸಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿz್ದÁರೆ.
ಕಾಳಗಿ ಹಾಗೂ ಯಡ್ರಾಮಿ ತಾಲೂಕು ಕೇಂದ್ರಗಳಾಗಿವೆ. ಪ್ರಸ್ತುತ ಇಲ್ಲಿ ೩೦ ಹಾಸಿಗೆಗಳ ಸಮುದಾಯ ಕೇಂದ್ರಗಳಿದ್ದು ಅವುಗಳನ್ನು ೫೦ ಹಾಸಿಗೆಗಳ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಜತೆಗೆ ಇಜೇರಿ, ಫರಹತಾಬಾದ್ ಹಾಗೂ ಹಿರೇಸಾವಳಗಿ ಗ್ರಾಮಗಳು ಭವಿಷ್ಯದಲ್ಲಿ ಬೆಳವಣಿಗೆ ಹೊಂದುವ ಗ್ರಾಮಗಳಾಗಿದ್ದು ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುವ ಇರುವ ಪಿಎಚ್‌ಸಿಗಳನ್ನು ೩೦ ಹಾಸಿಗೆಗಳ ಸಿಎಚ್‌ಸಿಗಳನ್ನಾಗಿ ಮೇಲ್ದರ್ಜೆಗೇರಿಸುವುದು ಅಗತ್ಯವಿತ್ತು.
ಆರೋಗ್ಯ ಸಚಿವ ದಿನೇಶ ಗುಂಡುರಾವ್‌ಗೆ ಪತ್ರ ಬರೆದು ಕೋರಲಾಗಿತ್ತು. ಸ್ಪಂದಿಸಿದ ಸಚಿವರು ಯಡ್ರಾಮಿ ಹಾಗೂ ಕಾಳಗಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ೫೦ ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಹಾಗೂ ಇಜೇರಿ, ಫರಹತಾಬಾದ್ ಹಾಗೂ ಹಿರೇಸಾವಳಗಿ ಗ್ರಾಮಗಳಲ್ಲಿರುವ ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ೩೦ ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿz್ದÁರೆ ಎಂದು ಖರ್ಗೆ ತಿಳಿಸಿz್ದÁರೆ.
"

ರಾಜ್ಯ ಸರ್ಕಾರ ಕಲಬುರಗಿ ಜಿ¯್ಲÉಯ ಜನರಿಗೆ ನೀಡಿದ ಭರವಸೆಯಂತೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ದಿಗೆ ಕ್ರಮ ಕೈಗೊಂಡಿದ್ದು, ಜನರ ಬೇಡಿಕೆಯಂತೆ ನೂತನ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ ಪ್ರಸ್ತುತ ಇರುವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮಹತ್ತರ ಕಾರ್ಯ ಕೈಗೆತ್ತಿಕೊಂಡಿದೆ.

ಪ್ರಿಯಾಂಕ್ ಖರ್ಗೆ,ಜಿಲ್ಲಾ ಉಸ್ತುವಾರಿ ಸಚಿವ, ಕಲಬುರಗಿ.

"

ಹೆರಿಗೆ ಪ್ರಮಾಣ ಕಡಿಮೆ ಇರುವ ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರ ಸೇವೆ ಸಮೀಪದ, ಅಧಿಕ ಹೆರಿಗೆ ಪ್ರಮಾಣ ಹೊಂದಿರುವ ಕೇಂದ್ರಗಳಿಗೆ ನಿಯೋಜಿಸಲು ಸರ್ಕಾರದ ಆದೇಶವಿತ್ತು. ಆದರೆ ಪ್ರಸಕ್ತ ಈ ಆದೇಶವನ್ನು ಸರ್ಕಾರ ತಡೆಹಿಡಿದಿದೆ.

ಡಾ.ಶರಣಬಸಪ್ಪ ಕ್ಯಾತನಾಳ್,ಜಿಲ್ಲಾ ಆರೋಗ್ಯಾಧಿಕಾರಿ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net