ಬರಕ್ಕೆ ಹೆದರಿ ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ

ನಾಲವಾರದ ಕೋರಿಸಿದ್ಧೇಶ್ವರ ಮಠದಲ್ಲಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಕೇಕ್​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದರು. ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀ ಚನ್ನರುದ್ರಮುನಿ ಶಿವಾಚಾರ್ಯ, ಶ್ರೀ ವಿಶ್ವಾರಾಧ್ಯ ಸ್ವಾಮೀಜಿ,  ಚನ್ನಾರೆಡ್ಡಿ ಪಾಟೀಲ್​, ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ, ಮಹೇಶ ಸ್ವಾಮಿ ಇತರರಿದ್ದರು.
ನಾಲವಾರದ ಕೋರಿಸಿದ್ಧೇಶ್ವರ ಮಠದಲ್ಲಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಕೇಕ್​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದರು. ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀ ಚನ್ನರುದ್ರಮುನಿ ಶಿವಾಚಾರ್ಯ, ಶ್ರೀ ವಿಶ್ವಾರಾಧ್ಯ ಸ್ವಾಮೀಜಿ, ಚನ್ನಾರೆಡ್ಡಿ ಪಾಟೀಲ್​, ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ, ಮಹೇಶ ಸ್ವಾಮಿ ಇತರರಿದ್ದರು.
Published on: 

ನಾಲವಾರ: ನಾಡಿನ ರೈತರು ಬರಗಾಲಕ್ಕೆ ಹೆದರಿ ಆತ್ಮಸ್ಥೆರ್ಯ ಕಳೆದುಕೊಳ್ಳಬಾರದು. ಭಗವಂತ ನಮ್ಮೊಂದಿಗಿದ್ದಾನೆ ಎಂಬ ದೃಢ ನಂಬಿಕೆಯಿಂದ ಮುನ್ನಡೆದಾಗ ಯಾವುದೇ ಆತಂಕ ಎದುರಾಗುವುದಿಲ್ಲ ಎಂದು ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು ಹೇಳಿದರು.

ಕೋರಿಸಿದ್ಧೇಶ್ವರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೆ ಹಾಗೂ ತಮ್ಮ ಜನ್ಮೋತ್ಸವ ವರ್ಧಂತಿ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮುಂಗಾರು ಮಳೆ ಕೈಕೊಟ್ಟು ಭೂಮಿ ಬರಡಾಗಿದೆ. ಹಿಂಗಾರು ಮಳೆಯಾದರೂ ಧರೆಗೆ ತಂಪೆರೆಯಲಿ ಎಂದು ಎಲ್ಲರೂ ಸೇರಿ ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.

ಮುದನೂರಿನ ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಸೂಗೂರಿನ ಶ್ರೀ ಚನ್ನರುದ್ರಮುನಿ ಶಿವಾಚಾರ್ಯ, ಚಟ್ನಳ್ಳಿಯ ವಿಶ್ವಾರಾಧ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್​ ತುನ್ನೂರ, ಪ್ರಮುಖರಾದ ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ ಇಂಜಿನಿಯರ್​, ಮಹೇಶ ಸ್ವಾಮಿ ಚಿಂಚೋಳಿ, ಪ್ರದಿಪ ಪುರಾಣಿಕ, ಶಿವಲಿಂಗ ಭೀಮನಹಳ್ಳಿ, ಶ್ರೀಕಾಂತಗೌಡ, ಮಹಾದೇವ ಗಂವ್ಹಾರ ಇತರರಿದ್ದರು.

ಡಾ. ಸಿದ್ದರಾಜರೆಡ್ಡಿ ಯಾದಗಿರಿ ನಿರೂಪಣೆ ಮಾಡಿ ಸ್ವಾಗತಿಸಿದರು. ರಾತ್ರಿ ಕತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ವರ್ಧಂತಿ ಮಹೋತ್ಸವ ಜರುಗಿತು. ಮಂಜುನಾಥ ಶಾಸಿ ಅವರ ನೇತೃತ್ವದ ವೈದಿಕ ತಂಡದಿಂದ ನಡೆದ ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಕಾರ್ಯಕ್ರಮ ಗಮನ ಸೆಳೆಯಿತು. ಮಹಾರಾಷ್ಟ್ರದ ವಾರ್ಕರಿ ಸಂಪ್ರದಾಯದ ಭಜನಾ ಮೇಳ, ಈಶಾ ಪಡಶೆಟ್ಟಿ ತಂಡ, ಪ್ರತಿಕಾ ಚಿತ್ತಾಪುರ ಹಾಗೂ ನಿತ್ಯಶ್ರೀ ಪಾಟೀಲ ಅವರಿಂದ ಭರತನಾಟ್ಯ ಸೇರಿ ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಒಳಾಂಗಣ ಪ್ರಾಕಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net