ಮಾಸಿಕ ರು.15 ಸಾವಿರ ಗೌರವಧನಕ್ಕೆ ಆಗ್ರಹ

ಮಾಸಿಕ 15 ಸಾವಿರ ರೂ. ಗೌರವಧನ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ಪದಾಧಿಕಾರಿಗಳು ಕಲಬುರಗಿ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಧರಣಿ ನಡೆಸಿದರು. ಜಿಲ್ಲಾ ಗೌರವಾಧ್ಯಕ್ಷ ವಿ.ಜಿ.ದೇಸಾಯಿ, ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ನಂದೂರ, ಜಿಲ್ಲಾ ಕಾರ್ಯದರ್ಶಿ ಗೀತಾ ಬಡಿಗೇರ ಇತರರಿದ್ದರು.
ಮಾಸಿಕ 15 ಸಾವಿರ ರೂ. ಗೌರವಧನ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ಪದಾಧಿಕಾರಿಗಳು ಕಲಬುರಗಿ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಧರಣಿ ನಡೆಸಿದರು. ಜಿಲ್ಲಾ ಗೌರವಾಧ್ಯಕ್ಷ ವಿ.ಜಿ.ದೇಸಾಯಿ, ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ನಂದೂರ, ಜಿಲ್ಲಾ ಕಾರ್ಯದರ್ಶಿ ಗೀತಾ ಬಡಿಗೇರ ಇತರರಿದ್ದರು.
Published on: 

ಕಲಬುರಗಿ: ಮಾಸಿಕ 15 ಸಾವಿರ ರೂ. ಗೌರವಧನ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಕಾರ್ಯನಿರ್ವಹಿಸಲು ಗುಣಮಟ್ಟದ ಟ್ಯಾಬ್ಲೆಟ್​ ಅಥವಾ ಮೊಬೈಲ್​ ಸಾಧನ ಉಚಿತವಾಗಿ ಒದಗಿಸಿಲ್ಲ. ಮೊಬೈಲ್​ ಬದಲು ಆಶಾ ಕಾರ್ಯಕರ್ತೆಯರಿಗೆ ಸ್ವಂತ ಮೊಬೈಲ್​ ಬಳಸಲು ಮಾಸಿಕ 280 ರೂ. ರಿಚಾರ್ಜ್​ ಮಾಡಿಸುವುದನ್ನು ಬಂದ್​ ಮಾಡಲಾಗಿದೆ. ಸಮಸ್ತ ಆ್ಯಪ್​ನಲ್ಲಿ ಡೇಟಾ ತುಂಬಲು ಪ್ರೋತ್ಸಾಹಧನ ನಿಗದಿಯಾಗಬೇಕು ಎಂದು ಆಗ್ರಹಿಸಿದರು.

ಅನೇಕರಿಗೆ ಸ್ಮಾರ್ಟ್​ಫೋನ್​ ಬಳಕೆ ಕುರಿತು ತಾಂತ್ರಿಕ ತರಬೇತಿ ನೀಡದ ಕಾರಣ ಮೊಬೈಲ್​ ಅಪ್ಲಿಕೇಶನ್​ನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಮೊಬೈಲ್​ ಆ್ಯಪ್​ನಲ್ಲಿ ಮಾಡಬೇಕಾದ ಹೆಚ್ಚುವರಿ ದಾಖಲಾತಿ ಕೆಲಸ ಸದ್ಯದ ಕ್ಷೇತ್ರ ಕಾರ್ಯದ ಹೊರೆ ಜತೆ ಅತಿಯಾದ ಒತ್ತಡ ಸೃಷ್ಟಿಸುತ್ತದೆ. ಕಾರ್ಯಕರ್ತೆಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಪ್ರೋತ್ಸಾಹಧನ ಮತ್ತು ಗೌರವಧನ ಸೇರಿಸಿ ಮಾಸಿಕ 15 ಸಾವಿರ ರೂ. ಜತೆ ಗುಣಮಟ್ಟದ ಮೊಬೈಲ್​ ನೀಡಬೇಕು. ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಕ್ಲೇಮ್​ ಮತ್ತು ರಿಲೀಸ್​ ಕಾಪಿ ಒದಗಿಸಬೇಕು. ಆಶಾಗಳಿಗೆ ಪಾವತಿಯಾದ ಪ್ರೋತ್ಸಾಹಧನ ಯಾವ ತಿಂಗಳಿನದು ಎಂಬ ಬಗ್ಗೆ ಪಾಸ್​ಬುಕ್​ನಲ್ಲಿ ನಮೂದಿಸಬೇಕು. ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಕಳೆದೊಂದು ವರ್ಷದಲ್ಲಿ ಪಾವತಿಸಿರುವ ಪ್ರೋತ್ಸಾಹಧನ, ಗೌರವಧನ ಮಾಹಿತಿ ಸಾಫ್ಟ್​ ಕಾಪಿಯಲ್ಲಿ ಸಂಕ್ಕೆ ಒದಗಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ಕೆಲಸ ಬಿಟ್ಟ ಮತ್ತು ನಿವೃತ್ತ ಕಾರ್ಯಕರ್ತೆಯರಿಗೆ ಇಡಗಂಟು ಪಾವತಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಗೌರವಾಧ್ಯಕ್ಷ ವಿ.ಜಿ. ದೇಸಾಯಿ, ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ನಂದೂರ, ಜಿಲ್ಲಾ ಕಾರ್ಯದರ್ಶಿ ಗೀತಾ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net