ಕ್ಷಯರೋಗ ಸೋಲಿಸಿ, ದೇಶ ಗೆಲ್ಲಿಸಿ

ಕಲಬುರಗಿ ಹೀರಾಪೂರ್​ ನಗರ ಆರೋಗ್ಯ ಕೇಂದ್ರದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಡಾ.ಶರಣಬಸಪ್ಪ ಕ್ಯಾತನಾಳ ಮಂಗಳವಾರ ಕರಪತ್ರ ಬಿಡುಗಡೆ ಮಾಡಿದರು. ಡಾ.ಮಹಮ್ಮದ್​ ಗಫಾರ್​, ಡಾ.ಅಮೀರ್​ ಪಾಷಾ, ಡಾ.ಸುರೇಶ್​ ನಾಯಕ್​, ಶಶಿಕಾಂತ, ಅಬ್ದುಲ್​ ಜಬ್ಬರ್​, ಶರಣಬಸಪ್ಪ ಸಜ್ಜನ್​, ಮಾಧುರಿ, ಅಂಬಿಕಾ, ಶಿಲ್ಪಾ ರಾಣಿ ಇತರರಿದ್ದರು.
ಕಲಬುರಗಿ ಹೀರಾಪೂರ್​ ನಗರ ಆರೋಗ್ಯ ಕೇಂದ್ರದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಡಾ.ಶರಣಬಸಪ್ಪ ಕ್ಯಾತನಾಳ ಮಂಗಳವಾರ ಕರಪತ್ರ ಬಿಡುಗಡೆ ಮಾಡಿದರು. ಡಾ.ಮಹಮ್ಮದ್​ ಗಫಾರ್​, ಡಾ.ಅಮೀರ್​ ಪಾಷಾ, ಡಾ.ಸುರೇಶ್​ ನಾಯಕ್​, ಶಶಿಕಾಂತ, ಅಬ್ದುಲ್​ ಜಬ್ಬರ್​, ಶರಣಬಸಪ್ಪ ಸಜ್ಜನ್​, ಮಾಧುರಿ, ಅಂಬಿಕಾ, ಶಿಲ್ಪಾ ರಾಣಿ ಇತರರಿದ್ದರು.
Published on: 

ಕಲಬುರಗಿ: ಕ್ಷಯರೋಗಮುಕ್ತ ಭಾರತ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದು, ಜನರ ಸಹಕಾರವೂ ಅಗತ್ಯವಾಗಿದೆ. ರೋಗದ ಲಕ್ಷಣ ಕಂಡುಬಂದವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಅಗತ್ಯ ಚಿಕಿತ್ಸೆ ಕೊಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಹೇಳಿದರು.

ಹೀರಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ ಸೋಲಿಸಿ, ದೇಶ ಗೆಲ್ಲಿಸಿ ೂಷವಾಕ್ಯದಡಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಡಿ.8ರವರೆಗೆ ಸಕ್ರಿಯ ಅಭಿಯಾನ ನಡೆಯಲಿದೆ. ಕೊಳಚೆ ಪ್ರದೇಶ, ಕಾರಾಗೃಹ, ವೃದ್ಧಾಶ್ರಮ, ನಿರಾಶ್ರಿತರ ಶಿಬಿರ, ಅನಾಥಾಶ್ರಮ, ಇಟ್ಟಿಗೆ ಭಟ್ಟಿ ಸೇರಿ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಸಮೀೆ ನಡೆಸಲಿದ್ದಾರೆ. ಕ್ಷಯರೋಗದ ಲಕ್ಷಣಗಳಿರುವ ಶಂಕಿತ ವ್ಯಕ್ತಿಗಳನ್ನು ಗುರುತಿಸಿ, ಕಫದ ಮಾದರಿ ಎನ್​ಎಎಟಿ ಯಂತ್ರದ ಮೂಲಕ ಪರೀಸಿ ರೋಗ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಮೂರ್ಲನಾಧಿಕಾರಿ ಡಾ.ಮಹಮ್ಮದ್​ ಗಫಾರ್​ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುವುದು, ತೂಕ ಕಡಿಮೆಯಾಗುವುದು, ಕಳೆದ ಆರು ತಿಂಗಳಲ್ಲಿ ಯಾವುದೇ ಸಮಯದಲ್ಲಿ ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಎದೆನೋವು, ತೀವ್ರ ಉಸಿರಾಟದ ತೊಂದರೆ, ರಾತ್ರಿ ವೇಳೆ ಬೆವರುವುದು, ಆಯಾಸ, ಹಸಿವಾಗದಿರುವುದು ಹಾಗೂ ಕುತ್ತಿಗೆಯ ದುಗ್ಧಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು ಕ್ಷಯರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳಿರುವವರು ತಕ್ಷಣ ಪರೀೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಡಳಿತ ವೈದ್ಯಾಧಿಕಾರಿ ಡಾ.ಅಮೀರ್​ ಪಾಷಾ, ಹೀರಾಪುರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಶ್​ ನಾಯಕ್​, ಡಿವೈಎಚ್​ಇಒ ಶಶಿಕಾಂತ, ಡಿಪಿಸಿ ಅಬ್ದುಲ್​ ಜಬ್ಬರ್​, ಪ್ರಮುಖರಾದ ಶರಣಬಸಪ್ಪ ಸಜ್ಜನ್​, ಶರಣಪ್ಪ ಸಿಂಗೆ, ಸಂಗಮೇಶ ಪಾಟೀಲ್​, ಸಂತೋಷ, ಧರ್ಮರಕ್ಷಕ, ಮಾಧುರಿ, ಮಹಿಬೂಬ್​, ಅಂಬಿಕಾ, ಶಿಲ್ಪಾ ರಾಣಿ, ಭಾಗ್ಯಶ್ರೀ ಇತರರಿದ್ದರು.

ಉತ್ತಮ ಕಾರ್ಯನಿರ್ವಹಿಸಿದ ಎಲ್​ಟಿಒ ಜಾನ್ಸನ್​, ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ, ಜಯಶ್ರೀ, ಶಾಂತಾಬಾಯಿ, ಸುಮಲತಾ, ವಂದನಾ ಮತ್ತು ಕೌಸರ್​ ಬೇಗಂ ಅವರನ್ನು ಸತ್ಕರಿಸಲಾಯಿತು. ಸಂತೋಷ್​ ಕುಡಳ್ಳಿ ಸ್ವಾಗತಿಸಿದರು. ಸುರೇಶ ದೊಡ್ಡಮನಿ ನಿರೂಪಣೆ ಮಾಡಿದರು. ಶಶಿಧರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net