ಅದ್ದೂರಿ ರಾಜ್ಯೋತ್ಸವ ಆಯೋಜನೆಗೆ ನಿರ್ಧಾರ

ಕಮಲಾಪುರ ತಹಸಿಲ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​ ಮಾತನಾಡಿದರು. ರಮೇಶ ಪಾಟೀಲ್​, ಸಂಜಯಕುಮಾರ ಕೊಳಗೇರಿ, ವೆಂಕಟೇಶ ದುಗ್ಗನ್​, ಡಾ.ಸುರೇಶ ರಾಠೋಡ್​ ಇತರರಿದ್ದರು.
ಕಮಲಾಪುರ ತಹಸಿಲ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​ ಮಾತನಾಡಿದರು. ರಮೇಶ ಪಾಟೀಲ್​, ಸಂಜಯಕುಮಾರ ಕೊಳಗೇರಿ, ವೆಂಕಟೇಶ ದುಗ್ಗನ್​, ಡಾ.ಸುರೇಶ ರಾಠೋಡ್​ ಇತರರಿದ್ದರು.
Published on: 

ಕಮಲಾಪುರ: ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಹಾಗೂ ಸಂಭ್ರಮದಿಂದ ಆಚರಿಸಬೇಕು. ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ದೀಪಾಲಂಕಾರ ಮಾಡಲಿದ್ದೇವೆ ಎಂದು ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​ ತಿಳಿಸಿದರು. ತಹಸಿಲ್​ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನ.1ರಂದು ಬೆಳಗ್ಗೆ 8.30ಕ್ಕೆ ಶಾಸಕ ಬಸವರಾಜ ಮತ್ತಿಮಡು ಧ್ವಜಾರೋಹಣ ನೆರವೇರಿಸುವರು. ಕಳೆದ ಶೈಣಿಕ ಸಾಲಿನಲ್ಲಿ ಕನ್ನಡದಲ್ಲಿ 125 ಹಾಗೂ 100 ಅಂಕ ಪಡೆದ ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು. ದೆಹಲಿ ಇನ್​ಸ್ಪೆರ್​ ಅವಾರ್ಡ್​ ಸ್ಪರ್ಧೆಯಲ್ಲಿ ಭಾಗವಹಿಸಿದ ಕುರಿಕೋಟಾ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಶ್ರೀದೇವಿ ಒಡೆಯರ್​ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತಿದೆ ಎಂದು ಹೇಳಿದರು. ತಾಪಂ ಇಒ ರಮೇಶ ಪಾಟೀಲ್​, ಪಪಂ ಮುಖ್ಯಾಧಿಕಾರಿ ಸಂಜಯಕುಮಾರ ಕೊಳಗೇರಿ, ಗ್ರೇಡ್​&2 ತಹಸೀಲ್ದಾರ್​ ವೆಂಕಟೇಶ ದುಗ್ಗನ್​, ಪಶು ವೈದ್ಯಾಧಿಕಾರಿ ಡಾ.ಸುರೇಶ ರಾಠೋಡ್​, ಕಸಾಪ ತಾಲೂಕು ಅಧ್ಯ ಸುರೇಶ ಲೇಂಗಟಿ, ಪ್ರಮುಖರಾದ ಅಶೋಕ ಸುಗೂರ, ವಿದ್ಯಾಧರ ಮಾಳಗೆ, ವಿಶಾಲ ಎಂ.ಬಿ., ಅಶೋಕಕುಮಾರ ಗೌರೆ, ರಮೇಶ ಬೆಳಕೋಟಾ, ಸುನೀಲಕುಮಾರ, ಸೈಯದ್​ ಮಾಜಿದ್​, ಶರಣು ರಟಕಲ್​, ಲ್ಮಕಾಂತ, ಅಂಬಿಕಾ ಉಪ್ಪಿನ್​, ರೇಣುಕಾ ಬಿ., ರತ್ನಮ್ಮ, ರಾಂಪ್ರಕಾಶ, ಸಿದ್ಧಲಿಂಗ, ಅಂದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net