ನಮೋಶಿಗೆ ಅಭಿನಂದನೆ

ನಮೋಶಿಗೆ ಅಭಿನಂದನೆ
Published on: 

ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಐದನೇ ಬಾರಿಗೆ ಭರ್ಜರಿ ಜಯಸಾಧಿಸಿ ವಿಧಾನ ಪರಿಷತ್ ಪ್ರವೇಶಿಸಿದ ಎನ್ ಡಿ ಎ ಅಭ್ಯರ್ಥಿ ಶಶಿಲ್ ಜಿ ನಮೋಶಿ ಅವರನ್ನು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ.ಸದಾನಂದ ಪೆರ್ಲ ಹಾಗೂ ಕಲಬುರ್ಗಿ ಜಿಲ್ಲೆ ಹೋಟೆಲ್ ವಸತಿ ಮತ್ತು ಬೇಕರಿ ಸಂಘಗಳ ಸಮಿತಿಯ ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಸತ್ಕರಿಸಿದರು. ಜಿಲ್ಲಾ ಹೋಟೆಲ್ ಉದ್ಯಮಿಗಳ ಪ್ರೋತ್ಸಾಹಕರು ಹಾಗೂ ದಕ್ಷಿಣ ಕನ್ನಡ ಸಂಘದ ಹಿತೈಷಿಗಳು ಆದ ನಮೋಶಿಯವರು ತಮ್ಮ ಅವಧಿಯಲ್ಲಿ ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net