

ಕಮಲಾಪುರ: ರೈತ ದೇಶದ ಬೆನ್ನೆಲುಬಾಗಿದ್ದು, ಆದರೆ ಯಾರೊಬ್ಬರೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿಲ್ಲ. ಹೀಗಾಗಿ ಅನ್ನದಾತರಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುವುದಕ್ಕಾಗಿ ಕಲಬುರಗಿಯಲ್ಲಿ ಬೃಹತ್ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ಸೊಂತ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ರೈತ ಸಂದಿಂದ ಆಳಂದ ರಸ್ತೆಯ ಭೂಸನೂರ ಕ್ರಾಸ್ ಸಮೀಪದ ಸುಮಾರು 18 ಎಕರೆ ಪ್ರದೇಶದಲ್ಲಿ ಡಿ.12, 13 ಮತ್ತು 14ರಂದು ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬೃಹತ್ ರೈತರ ಸಮಾವೇಶ ಮತ್ತು ಕೃಷಿ ಮೇಳದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಕೊಪ್ಪಳ ಶ್ರೀ, ಸುತ್ತೂರ ಶ್ರೀ ಸೇರಿ ವಿವಿಧ ಪೂಜ್ಯ ಸಾನ್ನಿಧ್ಯ ವಹಿಸುವರು. ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್, ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ವಿವಿಧ ಹೋರಾಟಗಾರರು, ಸಾಧಕ ಪ್ರಗತಿಪರ ರೈತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ನವಕರ್ನಾಟಕ ರೈತ ಸಂಘದ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಪಾಟೀಲ್ ಮಾತನಾಡಿ, ಸಮ್ಮೇಳನದಲ್ಲಿ ನುರಿತ ಹಾಗೂ ತ ವಿಾನಿಗಳಿಂದ ರೈತರಿಗೆ ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ವಿಧಾನ ತಿಳಿಸಲಿದ್ದಾರೆ. ಸಾಧನ/ ಸಲಕರಣೆಗಳ ಕುರಿತು ಮಾಹಿತಿ ದೊರಕಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಸ್ವಾಗತ ಸಮಿತಿ ಉಪಾಧ್ಯ ಶಿವಕಾಂತ ಮಹಾಜನ್, ಪ್ರಮುಖರಾದ ಶಿವರುದ್ರಯ್ಯ ಹಿರೇಮಠ, ಭಗವಂತರಾವ ಪಾಟೀಲ್, ದಿವ್ಯಾ ಹಾಗರಗಿ, ಬಸವರಾಜ ಜವಳಗಿ, ಮೇರಾಜ ಪಾಟೀಲ್, ಶರಣಬಸ್ಸಪ್ಪ ಬಾಳಿ, ಸಂಜಯಕುಮಾರ ನಾಟೀಕಾರ, ಶ್ರೀಕಾಂತ ಪಾಟೀಲ್, ಕಂಠೆಪ್ಪ ಪೂಜಾರಿ, ಉಚ್ಚಣ್ಣ ಪೂಜಾರಿ ಇತರರಿದ್ದರು.
ಶಿವರಾಜ ಪಾಟೀಲ್ ನಿರೂಪಣೆ ಮಾಡಿದರು. ಸಂಜಯ ನಾಟೀಕಾರ ವಂದಿಸಿದರು.