ಉದ್ಯೋಗಾರ್ಹತೆ ಹೆಚ್ಚಳಕ್ಕೆ ಪೂರಕ

ಕಲಬುರಗಿ ಶರಣಬಸವ ವಿವಿಯು ಡಿಜಿಸ್ನೇರ್​ ಟೆಕ್ನಾಲಜೀಸ್​ ಸಂಸ್ಥೆ ಜತೆಗಿನ ಒಡಂಬಡಿಕೆ ಪತ್ರವನ್ನು ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಮತ್ತು ಆಕಾಶ ತೊನಸನಳ್ಳಿ ಗುರುವಾರ ವಿನಿಮಯ ಮಾಡಿಕೊಂಡರು. ಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಇತರರಿದ್ದರು.
ಕಲಬುರಗಿ ಶರಣಬಸವ ವಿವಿಯು ಡಿಜಿಸ್ನೇರ್​ ಟೆಕ್ನಾಲಜೀಸ್​ ಸಂಸ್ಥೆ ಜತೆಗಿನ ಒಡಂಬಡಿಕೆ ಪತ್ರವನ್ನು ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಮತ್ತು ಆಕಾಶ ತೊನಸನಳ್ಳಿ ಗುರುವಾರ ವಿನಿಮಯ ಮಾಡಿಕೊಂಡರು. ಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಇತರರಿದ್ದರು.
Published on: 

ಕಲಬುರಗಿ: ಕಂಪ್ಯೂಟರ್​ ಅಪ್ಲಿಕೇಷನ್ಸ್​ ಕೋರ್ಸ್​ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯ ಎರಡು ಸಾಫ್ಟ್​ವೇರ್​ ಸೇವಾ ಸಂಸ್ಥೆಗಳೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.

ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಸಮ್ಮುಖ ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್​ ಮಾಕಾ, ಡಿಜಿಸ್ನೇರ್​ ಟೆಕ್ನಾಲಜೀಸ್​ ಪರವಾಗಿ ಆಕಾಶ ತೊನಸನಳ್ಳಿ ಹಾಗೂ ವೈಡ್ಲಿ.ಇನ್​ ಸಂಸ್ಥೆ ಪರವಾಗಿ ಸಿದ್ದಲಿಂಗ ಎಸ್​. ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಇದರಿಂದ ವಿಶೇಷವಾಗಿ ಬಿಸಿಎ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಡಿಜಿಸ್ನೇರ್​ ಟೆಕ್ನಾಲಜೀಸ್​ ಜತೆಗಿನ ಒಪ್ಪಂದದ ಪ್ರಕಾರ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಕಾರ್ಯಾಗಾರ, ಪ್ರಮಾಣಪತ್ರ ಕೋರ್ಸ್​ ಹಾಗೂ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶಗಳಿಗೆ ಅಗತ್ಯ ನೆರವು ಒದಗಿಸಲಿದೆ. ಡಿಜಿಟಲ್​ ಮಾರ್ಕೆಟಿಂಗ್​, ಉದ್ಯಮಶೀಲತೆ ಮತ್ತು ಸ್ಟಾರ್ಟಪ್​ ಅಭಿವೃದ್ಧಿ, ವೆಬ್​ ಡೆವಲಪ್​ಮೆಂಟ್​, ಪೈಥಾನ್​ ಪ್ರೋಗ್ರಾಮಿಂಗ್​, ಪೈಥಾನ್​ ಮೂಲಕ ದತ್ತಾಂಶ ವಿಶ್ಲೇಷಣೆ, ಕ್ಲೌಡ್​ ಕಂಪ್ಯೂಟಿಂಗ್​ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ಸಹಕಾರ ನೀಡಲಿದೆ.

ವೈಡ್ಲಿ.ಇನ್​ ಸಂಸ್ಥೆಯೊಂದಿಗಿನ ಒಪ್ಪಂದ ದೀರ್ಕಾಲೀನ ಸಹಯೋಗಕ್ಕೆ ಭದ್ರ ಬುನಾದಿ ಹಾಕುವ ಗುರಿ ಹೊಂದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಇಂರ್ಟನ್​ಶಿಪ್​, ನೇರ ಉದ್ಯಮ ಹಾಗೂ ನಾವೀನ್ಯತಾ ಚಟುವಟಿಕೆ ಮೂಲಕ ಉದ್ಯಮ ಕ್ಷೇತ್ರದ ಪ್ರಾಯೋಗಿಕ ಅನುಭವ ಪಡೆಯಲು ಅವಕಾಶ ದೊರೆಯಲಿದೆ. ಈ ಒಪ್ಪಂದದಡಿ ವಿದ್ಯಾರ್ಥಿಗಳಿಗೆ ಇಂರ್ಟನ್​ಶಿಪ್​, ಲೈವ್​ ಪ್ರಾಜೆಕ್ಟ್​, ಮಿನಿ ಪ್ರಾಜೆಕ್ಟ್​ ಹಾಗೂ ಕ್ಯಾಪ್​ಸ್ಟೋನ್​ ಪ್ರಾಜೆಕ್ಟ್​ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಜತೆಗೆ ವೈಡ್ಲಿ.ಇನ್​ ಕ್ಯಾಂಪಸ್​ ಸಂದರ್ಶನ ಮೂಲಕ ಉದ್ಯೋಗಾವಕಾಶ ಒದಗಿಸಲು ಸಹಕರಿಸಲಿದೆ. ಜಂಟಿ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿ, ಹ್ಯಾಕಥಾನ್​, ವಿವಿಧ ಸ್ಪರ್ಧೆ ಹಾಗೂ ತಾಂತ್ರಿಕ ಕಾರ್ಯಕ್ರಮ, ಕೈಗಾರಿಕಾ ಭೇಟಿ ವ್ಯವಸ್ಥೆ ಮತ್ತು ವೈಡ್ಲಿ.ಇನ್​ ವೇದಿಕೆಯಲ್ಲಿ ವಿವಿಗೆ ಹೆಚ್ಚಿನ ಪ್ರಚಾರ ಮತ್ತು ಗುರುತಿಸುವಿಕೆ ದೊರಕಿಸುವ ನಿಟ್ಟಿನಲ್ಲಿಯೂ ಸಹಕಾರ ನೀಡಲಿದೆ.