ಸಂಘ ಕಾರ್ಯ ತಿಳಿಯಲು ಶಾಖೆಗೆ ಬನ್ನಿ

 ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಆರ್​ಎಸ್​ಎಸ್​ ವೇದಿಕೆ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ವಿಭಾಗ ಸಂಪರ್ಕ ಪ್ರಮುಖ ಸಾಗರ ಸಾತಿಹಾಳ ಬೌದ್ಧಿಕ ನೀಡಿದರು. ಭೀಮರಾವ ಮೇಟಿ ಇದ್ದರು.
ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಆರ್​ಎಸ್​ಎಸ್​ ವೇದಿಕೆ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ವಿಭಾಗ ಸಂಪರ್ಕ ಪ್ರಮುಖ ಸಾಗರ ಸಾತಿಹಾಳ ಬೌದ್ಧಿಕ ನೀಡಿದರು. ಭೀಮರಾವ ಮೇಟಿ ಇದ್ದರು.
Published on: 

ಶಹಾಬಾದ್​: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತನಾಮ ಪೂರೈಸಿದ್ದು, ಸಂಘದ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಶಾಖೆಗೆ ಬರಬೇಕು ಎಂದು ಆರ್​ಎಸ್​ಎಸ್​ ವಿಭಾಗ ಸಂಪರ್ಕ ಪ್ರಮುಖ ಸಾಗರ ಸಾತಿಹಾಳ ಹೇಳಿದರು.

ಶ್ರೀ ಶರಣಬಸವೇಶ್ವರ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಉತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಬೌದ್ಧಿಕ ನೀಡಿದ ಅವರು, ಕೆಲವರು ಬೇಕಂತಲೆ ಸಂದ ಚಟುವಟಿಕೆಗಳ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಸಂಘ ಯಾರಿಗೂ ಉತ್ತರಿಸುವುದಿಲ್ಲ. ಶ್ರೇಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಲು ವ್ಯಕ್ತಿಗಳನ್ನು ಸಿದ್ಧಪಡಿಸಲು ಶ್ರಮಿಸುತ್ತದೆ ಎಂದು ತಿಳಿಸಿದರು.

ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ವ್ಯವಸ್ಥೆ ಹಾಳಾಗುತ್ತಿದ್ದು, ನಾವು ನಮ್ಮ ಕಾರ್ಯಗಳನ್ನು ಮರೆತ್ತಿದ್ದೇವೆ. ನಮ್ಮ ಕಾರ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಆದ್ದರಿಂದ ಸಂ ತನ್ನ 101ನೇ ವರ್ಷದಲ್ಲಿ ಸ್ವದೇಶ ಭಾವನೆ, ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣೆ, ಸಾಮಾಜಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಉದ್ಯಮಿ ಭೀಮರಾವ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಕನಕಪ್ಪ ದಂಡಗುಲಕರ ನಿರೂಪಣೆ ಮಾಡಿದರು. ಸುಭಾಷ ಜಾಪೂರ ಗೀತೆ ಪ್ರಸ್ತುತಪಡಿಸಿದರು. ಬಸವರಾಜ ಬಿರಾದಾರ ವಂದಿಸಿದರು.

ಶಹಾಬಾದ್​ನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳಿ ಪಥಸಂಚಲನ ನಡೆಸಿದರು.
ಶಹಾಬಾದ್​ನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳಿ ಪಥಸಂಚಲನ ನಡೆಸಿದರು.

ಆಕರ್ಷಕ ಪಥ ಸಂಚಲನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳಿಂದ ಶಹಾಬಾದ್​ನ ಪ್ರಮುಖ ಬೀದಿಗಳಲ್ಲಿ ಗುರುವಾರ ಆಕರ್ಷಕ ಪಥಸಂಚಲನ ನಡೆಯಿತು. ಮಧ್ಯಾಹ್ನ 4ಕ್ಕೆ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಶುರುವಾರ ಪಥಸಂಚಲನ ಮುಖ್ಯ ಬೀದಿಗಳಲ್ಲಿ ಸಾಗಿತು. ಭಾರತ ಮಾತೆ, ಡಾ.ಹೆಡಗೇವಾರ, ಗುರೂಜಿ ಅವರ ಭಾವಚಿತ್ರದೊಂದಿಗೆ ವಿವಿಧ ಘೋಷಣೆಗಳೊಂದಿಗೆ ಕಾರ್ಯಕರ್ತರು ಹೆಜ್ಜೆಹಾಕಿದರು. ಪಥ ಸಂಚಲನದ ದಾರಿಯ ಪ್ರತಿ ವೃತ್ತದಲ್ಲಿ ಸಾರ್ವಜನಿಕರು ರಂಗೋಲಿ ಬಿಡಿಸಿ, ಶ್ರೀರಾಮ, ಭಾರತ ಮಾತಾ ಹಾಗೂ ವಿವಿಧ ಮಹನೀಯರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ಎಲ್ಲಡೆ ಸ್ವಯಂಸೇವಕರಿಗೆ ಆರತಿ ಬೆಳಗಿ, ಹೂವಿನ ಸುರಿಮಳೆಗೈದು ಸ್ವಾಗತಿಸಿದರು.