ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ರ್ಖಗೆ ಮಾತನಾಡಿ, ದೇಶದಲ್ಲೇ 40 ವರ್ಷದಲ್ಲೇ 371 ಜೆ ಮಾದರಿ ಕಾನೂನು ಆಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾಂಗ್ರೆಸ್ ಪಕ್ಷದ ಸರ್ಕಾರ ಕಾರಣ. ನಮ್ಮ ಭಾಗದಲ್ಲಿ ಶಾಲೆಗಳು, ಕಟ್ಟಡಗಳಿದ್ದು, ಶಿಕ್ಷಕರನ್ನು ನೀಡದೇ ಅಭಿವೃದ್ಧಿ ಅಸಾಧ್ಯ. ವಿಜ್ಞಾನ, ಇಂಗ್ಲಿಷ್, ಗಣಿತ ಶಿಕ್ಷಕರು ಇಲ್ಲ. ಆದ್ದರಿಂದ ಕಟ್ಟಡಕ್ಕಿಂತ ಮೊದಲು ಶಿಕ್ಷಕರನ್ನು ನೇಮಿಸಿ, ಬೇಕಿದ್ರೆ ಗಿಡದ ಕೆಳಗೆ ಕುಳಿತು ಓದಿಸಿ ಎಂದು ಸಲಹೆ ನೀಡಿದರು.