ವಿಜಯವಾಣಿ ಪ್ರೆಸ್‌ನಲ್ಲಿ ಚನ್ನಬಸವೇಶ್ವರ ಶಾಲೆ ವಿದ್ಯಾರ್ಥಿಗಳು

ವಿಜಯವಾಣಿ ಕಲಬುರಗಿ ಮುದ್ರಣಾಲಯಕ್ಕೆ ನಗರದ ಚನ್ನಬಸವೇಶ್ವರ ಶಾಲೆಯ ವಿದ್ಯಾರ್ಥಿಗಳು ವಿಜಯವಾಣಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.
ವಿಜಯವಾಣಿ ಕಲಬುರಗಿ ಮುದ್ರಣಾಲಯಕ್ಕೆ ನಗರದ ಚನ್ನಬಸವೇಶ್ವರ ಶಾಲೆಯ ವಿದ್ಯಾರ್ಥಿಗಳು ವಿಜಯವಾಣಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಸುದ್ದಿ ಸಂಗ್ರಹ, ಮುದ್ರಣದ ವಿವರ ಪಡೆದು ಸಂಭ್ರಮ
  • ತಂತ್ರಜ್ಞಾನ ಬಳಕೆ ಮಾಹಿತಿ ಸಂಗ್ರಹ
ಕಲಬುರಗಿ: ದಿನಪತ್ರಿಕೆ ಸುದ್ದಿ ಸಂಗ್ರಹ, ಸಂಪಾದನೆ, ಪುಟ ರಚನೆ ಸೇರಿ ಪತ್ರಿಕೆಯ ಇಡೀ ರೂಪುಗೊಳ್ಳುವ ಪ್ರಕ್ರಿಯೆ ಬಗ್ಗೆ ವಿವರ ಮಾಹಿತಿ ಪಡೆಯುವ ಅವಕಾಶ ನಗರದ ಜಾಗೃತಿ ಕಾಲನಿಯ ಚನ್ನಬಸವೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ಕಲ್ಪಿಸಿಕೊಟ್ಟಿತು.
ಕಾಲೇಜಿನಿಂದ ವಿಆರ್‌ಎಲï ಸಮೂಹ ಸಂಸ್ಥೆಯ ಐಶಾರಾಮಿ ಬಸ್‌ನಲ್ಲಿ ನಗರ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ಮುದ್ರಣಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿನಿಯರು, ಬೆಳ್ಳಂಬೆಳಗ್ಗೆ ದಿನಪತ್ರಿಕೆ ಮನೆ ಬಾಗಿಲು ಅಥವಾ ಓದುಗರ ಕೈಸೇರುವ ಮುನ್ನ ನಡೆಯುವ ಸಿದ್ಧತೆ ತಿಳಿದರು.
ದಿನಪತ್ರಿಕೆಗಳ ಹಿಂದಿನ ಶ್ರಮ, ಕೌಶಲ ಮತ್ತು ಸವಾಲುಗಳನ್ನು ಓದುಗರಿಗೆ, ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಲು ಶಾಲಾ ಆಡಳಿತ ಮಂಡಳಿ ಮನವಿ ಮೇರೆಗೆ ವಿಜಯವಾಣಿ ಮುದ್ರಣಾಲಯ ವೀP್ಷÀಣೆಗೆ ಅವಕಾಶ ಒದಗಿಸಿತು. ೭೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಭೇಟಿ ನೀಡಿದರು.
ಸಂಪಾದಕೀಯ ವಿಭಾಗ ಕಳುಹಿಸಿದ ಪುಟಗಳನ್ನು ಪ್ಲೇಟ್ ಮಾಡುವ ತಂತ್ರಜ್ಞಾನ, ಬಳಿಕ ಪ್ಲೇಟ್‌ಗಳನ್ನು ಅತ್ಯಾಧುನಿಕ ಬಹುಬಣ್ಣದ ಆಪ್ಸೆಟ್ ಪ್ರಿಂಟಿAಗ್ ಸಿಲಿಂಡರ್‌ನಲ್ಲಿ ಅಳವಡಿಸಿ ಪ್ರಿಂಟ್ ಮಾಡುವ ವಿಧಾನ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.
ಪತ್ರಿಕೆ ಮುದ್ರಣ, ತಂತ್ರಜ್ಞಾನ, ಸಿಬ್ಬಂದಿ ಶ್ರಮ, ಯಂತ್ರಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಅವಕಾಶ ದೊರೆತಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು. ಸಂಶಯಗಳನ್ನು ಪ್ರಶ್ನೆಗಳ ಮೂಲಕ ಕೇಳಿ ಪರಿಹರಿಸಿಕೊಂಡರು. ಸುದ್ದಿ ಸಂಪಾದನೆ ಹಾಗೂ ಪುಟ ವಿನ್ಯಾಸದ ಮಾಹಿತಿ ಸಂಪಾದಕೀಯ ವಿಭಾಗದಿಂದ ಪಡೆದರು.

ನೀವೂ ನೋಡಬಹುದು

ವಿಜಯವಾಣಿ ಮುದ್ರಣ ಘಟಕಕ್ಕೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಬಯಸುವ ಶಾಲಾ-ಕಾಲೇಜುಗಳು ಸಂಪರ್ಕಿಸಿ... 8884432424,8884432423
"

ವಿಜಯವಾಣಿ ಪತ್ರಿಕೆಯ ಮುದ್ರಣ ವಿಭಾಗ ಭೇಟಿ ನೀಡಿ ಹೊಸ ಮಾಹಿತಿ ತಿಳಿಯಿತು. ಪತ್ರಿಕೆ ಓದುತ್ತಿz್ದೆÃವು. ಆದರೆ ಹಿಂದೆ ಇಷ್ಟೆಲ್ಲ ಜನರ ಕೆಲಸ ಇರುವುದು ತಿಳಿಯಿತು.

| ಬಸಮ್ಮ, ಚನ್ನಬಸವೇಶ್ವರ ಪ್ರೌಢ ಶಾಲೆ

"

ವಿಆರ್‌ಎಲ್‌ನ ಐಶಾರಾಮಿ ಬಸ್‌ನಲ್ಲಿ ಕರೆದೊಯ್ದು ವಿಜಯವಾಣಿ ಪತ್ರಿಕೆಯ ವರದಿಗಾರಿಕೆ, ಎಡಿಟಿಂಗ್, ಪೇಜ್ ಡಿಸೈನ್, ಮುದ್ರಣ ಸೇರಿ ಎಲ್ಲ ಮಾಹಿತಿ ತಿಳಿಸಿದ್ದರು. ಇದೊಂದು ಹೊಸ ಅನುಭವ ಮತ್ತು ಮಾಹಿತಿ ನಮಗೆ ದೊರಕಿದೆ.

| ಆಕಾಶ, ವಿದ್ಯಾರ್ಥಿ ಚನ್ನಬಸವೇಶ್ವರ ಪ್ರೌಢ ಶಾಲೆ

"

ವಿಜಯವಾಣಿ ಪತ್ರಿಕೆ ಸಮಗ್ರ ಸುದ್ದಿಯೊಂದಿಗೆ ಜನರಿಗೆ ಉಪಯುಕ್ತವಾದ ಮಾಹಿತಿ, ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಿದ್ಯಾರ್ಥಿ ಮಿತ್ರ ನೀಡುತ್ತಿದೆ. ವಿಜಯ ಸಂಕೇಶ್ವರ ಅವರು ಕಟ್ಟಿ ಬೆಳೆಸಿದ ಸಂಸ್ಥೆ ವಿಆರ್‌ಎಲ್, ವಿಜಯವಾಣಿ ಏಕಕಾಲಕ್ಕೆ ನೋಡುವ ಭಾಗ್ಯ ನಮ್ಮ ವಿದ್ಯಾರ್ಥಿಗಳಿಗೆ ದೊರಕಿದೆ.

| ನಾಗರತ್ನ ಪಾಟೀಲ್, ಶಿಕ್ಷಕಿಚನ್ನಬಸವೇಶ್ವರ ಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net