ಬೈಕ್​ ಕಳ್ಳತನಕ್ಕೆ ಜಾತ್ರೆಗಳೇ ಗುರಿ: ಇಬ್ಬರು ಬೈಕ್​ ಕಳ್ಳರ ಬಂಧನ

ಎಸ್ಪಿ ಅಡ್ಡೂರು ಶ್ರೀನಿವಾಸುಲು ಪತ್ರಿಕಾಗೋಷ್ಠಿ
ಎಸ್ಪಿ ಅಡ್ಡೂರು ಶ್ರೀನಿವಾಸುಲು ಪತ್ರಿಕಾಗೋಷ್ಠಿ
Published on
ಕಲಬುರಗಿ: ಚಿಂಚೋಳಿ, ಕಾಳಗಿ, ಕಮಲಾಪುರ ಭಾಗದಲ್ಲಿ ನಡೆಯುವ ಜಾತ್ರೆಗೆ ಬರುವ ಭಕ್ತರು, ಜನಸಂದಣಿ ಸೇರುವ ಸ್ಥಳಗಳಲ್ಲಿನ ಬೈಕ್​ಗಳನ್ನು ಗುರಿಯಾಗಿಸಿ, ಕಳ್ಳತನ ಮಾಡುತ್ತಿದ್ದ ಇಬ್ಬರು ಬೈಕ್​ ಕಳ್ಳರನ್ನು ಬಂಧಿಸಿದ್ದು, ಬಂಧಿತರಿಂದ 14 ಬೈಕ್​ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಚಿಂಚೋಳಿ ತಾಲೂಕಿನ ಪಸ್ತಾಪುರದ ನಾಗೇಶ ಹಲಗೆನೂರ, ಜೇವರ್ಗಿಯ ರಾಮಪುರದ ಗೌಡಪ್ಪ ಕಕ್ಕಸಗೇರಾ ಬಂಧಿತ ಆರೋಪಿಗಳು. ಇವರಿಂದ 12.5 ಲಕ್ಷ ರೂ. ಮೌಲ್ಯದ 14 ವಿವಿಧ ಕಂಪನಿಯ ಬೈಕ್​ ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೇವಗ್ಗಿ ಜಾತ್ರೆಯಲ್ಲಿ 2, ಕಮಲಾಪುರದಲ್ಲಿ 2, ಕೋಡ್ಲಿಯಲ್ಲಿ 2 ಸೇರಿ ವಿವಿಧ ಪ್ರದೇಶದಿಂದ ಕಳ್ಳತನ ಮಾಡಿದ್ದ ಬೈಕ್​ ಕಳ್ಳರಿಂದ ವಶಕ್ಕೆ ಪಡೆಯಲಾಗಿದೆ. ಮಾಡಬೂಳ, ಕಾಳಗಿ ಠಾಣೆ ವ್ಯಾಪ್ತಿಯಲ್ಲಿ ಮೋಟಾರ್​ ಸೈಕಲ್​ ಕಳ್ಳತನ ಆದ ಪ್ರಕರಣದ ತನಿಖೆಗೆ ಬೆನ್ನತ್ತಿದ್ದಾಗ, ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ತಿಳಿಸಿದರು.
ಡಿವೈಎಸ್​ಪಿ ಶಂಕರಗೌಡ ಪಾಟೀಲ್​ ಮಾರ್ಗದರ್ಶನದಲ್ಲಿ ಸಿಪಿಐ ಜಗದೇವಪ್ಪ ಪಾಳಾ ನೇತೃತ್ವದಲ್ಲಿ ಪಿಎಸ್​ಐಗಳಾದ ಸಿದ್ದಲಿಂಗ, ಗೌತಮ, ತಿಮ್ಮಯ್ಯ, ಸಿಬ್ಬಂದಿ ಬಲರಾಮ, ಹಣಮಂತ, ವೀರಶೆಟ್ಟಿ, ಪ್ರಶಾಂತ, ಮಾಳಗೊಂಡ, ರಮೇಶ, ಅಶೋಕ, ಶಾಂತಮಲ್ಲಪ್ಪ, ಚಂದ್ರಶೇಖರ, ಸಂಗಣ್ಣ, ಅಂಬರೀಶ ಅವರ ತಂಡ ನಿರಂತರ ನಿಗಾ, ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಕ್ಕೆ ಕಾಳಗಿ, ಮಾಡಬೂಳ ಠಾಣೆ ಪೊಲೀಸರಿಗೆ ಶ್ಲಾನೆ ವ್ಯಕ್ತಪಡಿಸಿದರು.
ಹೆಚ್ಚುವರಿ ಪೊಲೀಸ್​ ಅಧಿಕ್ಷಕ ಮಹೇಶ ಮೇಣ್ಣನವರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net