ಗ್ರಾಪಂ ನಿರ್ಲಕ್ಷ್ಯದಿಂದಲೇ ಬಾಲಕ ಬಲಿ

ಮೃತ ಬಾಲಕನ ಸಾವಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಕುಟುಂಬಸ್ಥರು, ಗ್ರಾಮಸ್ಥರು ರೋಡಕಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ್​, ತಾಪಂ ಇಒಗೆ ಮನವಿಪತ್ರ ಸಲ್ಲಿಸಿದರು. ಜಗಜೀವನರೆಡ್ಡಿ, ವೀರಾರೆಡ್ಡಿ ಪಾಟೀಲ್​, ಸುದರ್ಶನರೆಡ್ಡಿ ಪಾಟೀಲ್​, ಮಂಜುನಾಥ ಭೋವಿ ಇತರರಿದ್ದರು.
ಮೃತ ಬಾಲಕನ ಸಾವಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಕುಟುಂಬಸ್ಥರು, ಗ್ರಾಮಸ್ಥರು ರೋಡಕಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ್​, ತಾಪಂ ಇಒಗೆ ಮನವಿಪತ್ರ ಸಲ್ಲಿಸಿದರು. ಜಗಜೀವನರೆಡ್ಡಿ, ವೀರಾರೆಡ್ಡಿ ಪಾಟೀಲ್​, ಸುದರ್ಶನರೆಡ್ಡಿ ಪಾಟೀಲ್​, ಮಂಜುನಾಥ ಭೋವಿ ಇತರರಿದ್ದರು.
Published on: 

ಚಿಂಚೋಳಿ: ರೋಡಕಲ್ಲೂರ್​ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ತೋಡಲಾಗಿದ್ದ ತಗ್ಗು ಗುಂಡಿಯೇ ಬಾಲಕ ಓಂಕಾರ ಸಿರಸಿ (3)ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಕುಟುಂಬಸ್ಥರು, ಗ್ರಾಮಸ್ಥರು ರೋಡಕಲ್ಲೂರನಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಯಿಂದ ತೋಡಿಸಲಾಗಿದ್ದ ಗುಂಡಿಯನ್ನು ಸುರಕ್ಷಿತವಾಗಿ ಮುಚ್ಚದೆ ಅಥವಾ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದರಿಂದ ಅಮಾಯಕ ಬಾಲಕನ ಜೀವ ಬಲಿಯಾಗಿದೆ. ಇಂತಹ ಟನೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ವಹಿಸಿದ ಗ್ರಾಪಂ ಪಿಡಿಒ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ಚವ್ಹಾಣ್​ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಅಲ್ಲದೆ ತಕ್ಷಣವೇ ವರ್ಗಾವಣೆಗೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಹೋರಾಟ ವಾಪಸ್​ ಪಡೆಯಲಾಯಿತು.

ಪ್ರಮುಖರಾದ ವೀರಾರೆಡ್ಡಿ ಪಾಟೀಲ್​, ಜಗಜೀವನರೆಡ್ಡಿ ಮಿರಿಯಾಣ, ಸುದರ್ಶನರೆಡ್ಡಿ ಪಾಟೀಲ್​, ಮಂಜುನಾಥ ಭೋವಿ, ಅನೀಲ ಕಂಟ್ಲಿ, ರಾವೇಂದ್ರ ಗುತ್ತೇದಾರ್​, ಝರಣಪ್ಪ ಪೂಜಾರಿ, ಜಗನ್ನಾಥ ಮ್ಯಾಕಲ್​, ಪ್ರಕಾಶ ಸಿರಸಿ ಇತರರಿದ್ದರು.

ಸಿಪಿಐ ಕಪಿಲದೇವ ಹಾಗೂ ಪಿಎಸ್​ಐ ಶಿವಶಂಕರ ಸುಬೇದಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿತ್ತು.

ಪಿಡಿಒಗೆ ತರಾಟೆ, ಧರ್ಮದೇಟು

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಗಿರಿ ಅವರನ್ನು ಮೃತ ಬಾಲಕನ ಕುಟುಂಬದ ಮಹಿಳೆಯರು ಹಾಗೂ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿ ರ್ನಿಲ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿದರು. ಟನೆಯ ಹೊಣೆ ಹೊತ್ತು ಸಾರ್ವಜನಿಕವಾಗಿ ಮೆಯಾಚಿಸುವಂತೆ ಒತ್ತಾಯಿಸಿದರು. ಆದರೆ ಪಿಡಿಒ ಮೆಯಾಚಿಸಲು ನಿರಾಕರಿಸಿದ ಹಿನ್ನೆಲೆ ಆಕ್ರೋಶಗೊಂಡ ಮಹಿಳೆಯರು, ಧರ್ಮದೇಟು ನೀಡಿದರು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.