ಕಲಬುರಗಿ ಜಿಲ್ಲಾ ಕೋರ್ಟಗೆ ಬಾಂಬ್ ಬೆದರಿಕೆ

Bomb threat kalaburagi district
Bomb threat kalaburagi district
Published on
ಕಲಬುರಗಿ: ನಗರದ ಜಿಲ್ಲಾ ಕೋರ್ಟ್ ಗೆ ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಇಡೀ ಜಿಲ್ಲಾ ನ್ಯಾಯಾಲಯದಲ್ಲಿ ಆತಂಕ ಮೂಡಿಸಿದೆ.
ಜಿಲ್ಲಾ ನ್ಯಾಯಾಲಯದ ಕಚೇರಿ ಮೇಲ್ ಗೆ ಸಂದೇಶ ಬಂದಿದ್ದು, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
11.45ಕ್ಕೆ ಬಾಂಬ್ ಬ್ಲಾಸ್ಟ್ ಆಗಲಿದೆ ಎಂಬ ಸಂದೇಶ ಬಂದಿದ್ದು, ತಕ್ಷಣ ಕಾರ್ಯಪೃವೃತ್ತರಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ನೌಕರರು, ವಕೀಲರು ತಕ್ಷಣ ಆವರಣದ ಹೊರಗೆ ಬಂದಿದ್ದಾರೆ. ಪರಸ್ಪರ ಮಾಹಿತಿ ತಿಳಿಯುತ್ತಲೇ ಎಲ್ಲರನ್ನು ಹೊರಗೆ ಕಳುಹಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಎಲ್ಲರನ್ನು ಹೊರಗೆ ಕಳುಹಿಸಿ, ಎಲ್ಲೆಡೆ ಪೊಲೀಸರಿಂದ ರಕ್ಷಣೆ ನೀಡಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ತಂಡದೊಂದಿಗೆ ಆಗಮಿಸಿದ್ದು, ಪರಿಶೀಲನೆ ಮುಂದುವರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net