ಎಸ್​ಟಿ ಮೀಸಲಾತಿ ಪ್ರಯೋಜನೆ ಪಡೆಯಿರಿ

ಮಾಗಣಗೇರಾದಲ್ಲಿ ಹಮ್ಮಿಕೊಂಡಿದ್ದ ತಳವಾರ ಸಮುದಾಯ ಭವನ ಉದ್ಘಾಟನೆ ಹಾಗೂ ತಾಲೂಕು ಮಟ್ಟದ ಬೃಹತ್​ ಜನಜಾಗೃತಿ ಸಭೆಯನ್ನು ಶಿವಲಾಲ್​ಸಿಂಗ್​ ಉದ್ಘಾಟಿಸಿದರು. ಶ್ರೀ ಡಾ.ವಿಶ್ವಾರಾಧ್ಯ ಶಿವಾಚಾರ್ಯ, ಶ್ರೀ ಡಾ.ರುದ್ರಮುನಿ ಶಿವಾಚಾರ್ಯ, ಶ್ರೀ ಏಕಾಕ್ಷರ ಶಿವಾಚಾರ್ಯ, ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ, ಎನ್​.ರವಿಕುಮಾರ, ದೊಡ್ಡಪ್ಪಗೌಡ ಪಾಟೀಲ್​, ಶಿವರಾಜ ಪಾಟೀಲ್​, ಶೋಭಾ ಬಾಣಿ, ದೇವಿಂದ್ರಪ್ಪಗೌಡ ಬಿರಾದಾರ ಇತರರಿದ್ದರು.
ಮಾಗಣಗೇರಾದಲ್ಲಿ ಹಮ್ಮಿಕೊಂಡಿದ್ದ ತಳವಾರ ಸಮುದಾಯ ಭವನ ಉದ್ಘಾಟನೆ ಹಾಗೂ ತಾಲೂಕು ಮಟ್ಟದ ಬೃಹತ್​ ಜನಜಾಗೃತಿ ಸಭೆಯನ್ನು ಶಿವಲಾಲ್​ಸಿಂಗ್​ ಉದ್ಘಾಟಿಸಿದರು. ಶ್ರೀ ಡಾ.ವಿಶ್ವಾರಾಧ್ಯ ಶಿವಾಚಾರ್ಯ, ಶ್ರೀ ಡಾ.ರುದ್ರಮುನಿ ಶಿವಾಚಾರ್ಯ, ಶ್ರೀ ಏಕಾಕ್ಷರ ಶಿವಾಚಾರ್ಯ, ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ, ಎನ್​.ರವಿಕುಮಾರ, ದೊಡ್ಡಪ್ಪಗೌಡ ಪಾಟೀಲ್​, ಶಿವರಾಜ ಪಾಟೀಲ್​, ಶೋಭಾ ಬಾಣಿ, ದೇವಿಂದ್ರಪ್ಪಗೌಡ ಬಿರಾದಾರ ಇತರರಿದ್ದರು.
Published on: 

ಯಡ್ರಾಮಿ: ತಳವಾರ ಸಮಾಜದ ಸಮುದಾಯ ಭವನ ಕೇವಲ ಸಭೆ, ಸಮಾರಂಭಗಳಿಗೆ ಸೀಮಿತವಾಗದೆ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪೂರಕ ಕೇಂದ್ರವಾಗಬೇಕು ಎಂದು ವಿಧಾನ ಪರಿಷತ್​ ಪ್ರತಿಪಕ್ಷದ ಮುಖ್ಯ ಸಚೇತಕ ಎನ್​.ರವಿಕುಮಾರ್​ ಅಭಿಪ್ರಾಯಪಟ್ಟರು.

ಮಾಗಣಗೇರಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಳವಾರ ಸಮಾಜದ ಸಮುದಾಯ ಭವನ ಉದ್ಘಾಟನೆ ಹಾಗೂ ತಾಲೂಕು ಮಟ್ಟದ ಬೃಹತ್​ ಜನಜಾಗೃತಿ ಸಭೆಯಲ್ಲಿ ಮಾತನಾಡಿ, ತಳವಾರ ಸಮಾಜ ಹಿಂದುಳಿದಿದೆ ಎಂದು ಕೂರುವ ಬದಲು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೈಜೋಡಿಸಿ ಇತರೆ ಸಮುದಾಯಗಳಂತೆ ಅಭಿವೃದ್ಧಿ ಹೊಂದುವ ಸಂಕಲ್ಪ ಮಾಡಬೇಕು. ಸಮಾಜಕ್ಕೆ ಎಸ್​ಟಿ ಸ್ಥಾನಮಾನ ದೊರೆತಿರುವುದು ಮಹತ್ವದ ಬೆಳವಣಿಗೆ. ಆದರೆ ಮೀಸಲಾತಿ ಸೌಲಭ್ಯ ದೊರೆತಿದೆ ಎಂದು ತೃಪ್ತಿಪಟ್ಟುಕೊಳ್ಳದೆ, ಅದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಸಮಾಜಕ್ಕೆ ಎಸ್​ಟಿ ಸ್ಥಾನಮಾನ ದೊರೆಯಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾತ್ರ ಮಹತ್ವದ್ದಾಗಿದೆ. ಅಲ್ಲದೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬಂದ ನಿರ್ದೇಶನ ಹಾಗೂ ಅದರ ಆದಾರದ ಮೇಲೆ ತಳವಾರ ಸಮಾಜದವರಿಗೆ ಎಸ್​ಟಿ ಸ್ಥಾನಮಾನ ದೊರೆತು, ಪ್ರಮಾಣಪತ್ರ ಪಡೆಯಲು ಅನುಕೂಲವಾಗಿದೆ ಎಂದರು.

ಮಾಗಣಗೇರಾದ ಶ್ರೀ ಡಾ.ವಿಶ್ವಾರಾಧ್ಯ ಶಿವಾಚಾರ್ಯ, ಕಡಕೋಳದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯ, ಶ್ರೀ ಏಕಾಕ್ಷರ ಶಿವಾಚಾರ್ಯ, ತೊನಸನಹಳ್ಳಿಯ ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಖಂಡ ಶಿವಲಾಲ್​ಸಿಂಗ್​ ಉದ್ಘಾಟಿಸಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್​ ರದ್ದೇವಾಡಗಿ, ಪ್ರಮುಖರಾದ ಶೋಭಾ ಬಾಣಿ, ಮಡಿವಾಳಪ್ಪಗೌಡ ಪಾಟೀಲ್​, ಶಿವಾಜಿ ಮೆಟಗಾರ, ಉಮೇಶ ಮುದ್ನಾಳ, ವಿವೇಕಾನಂದ ಡಬ್ಬಿ, ದೇವಿಂದ್ರಪ್ಪಗೌಡ ಬಿರಾದಾರ, ಬಸವರಾಜ ಪಾಟೀಲ್​ ಅರಳಗುಂಡಗಿ, ರೇವಣಸಿದ್ದಪ್ಪ ಕಮಾನಮನಿ ಇತರರಿದ್ದರು.

ಪ್ರಗತಿಪರ ಚಿಂತಕ ಭಗವಂತ್ರಾಯ ಬೆಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಪ್ರಮಾಣಪತ್ರ ನೀಡುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನಲೆ ಸಭೆ ನಡೆಸಿ ಸಮಸ್ಯೆ ಭಗೆಹರಿಸಲಾಗಿತ್ತು. ಆದರೆ ಜೇವರ್ಗಿ, ಯಡ್ರಾಮಿ ತಾಲೂಕಿನಲ್ಲಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.
> ಎನ್​.ರವಿಕುಮಾರ್​, ವಿಧಾನ ಪರಿಷತ್​ ಸದಸ್ಯ