ಈಡಿಗ ವಿದ್ಯಾರ್ಥಿ ವೇತನಕ್ಕೆ ಅರ್ಜಿ

ಜೆ.ಪಿ.ಎನ್. ಪ್ರತಿಷ್ಠಾನದಿಂದ ಆಹ್ವಾನ
ಈಡಿಗ ವಿದ್ಯಾರ್ಥಿ ವೇತನಕ್ಕೆ ಅರ್ಜಿ
Published on: 

ಕಲಬುರಗಿ: ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದಿಂದ 2026-27ನೇ ಸಾಲಿನಲ್ಲಿ ಈಡಿಗ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ವಿಭಾಗೀಯ ಸಂಚಾಲಕ ಸುರೇಶ ಗುತ್ತೇದಾರ ಬೆಡಸೂರ ತಿಳಿಸಿದ್ದಾರೆ.

2026-27ನೇ ಸಾಲಿನಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಮತ್ತು ಬಿ.ಇಡಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, 2025-26ನೇ ಸಾಲಿನ ವ್ಯಾಸಂಗದಲ್ಲಿ ಶೇ.65ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ವೇತನಕ್ಕೆ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಯು ರಾಜ್ಯದ ನಿವಾಸಿಯಾಗಿದ್ದು, ಬಿ.ಪಿ.ಎಲ್​ ಕಾರ್ಡ್​ ಹೊಂದಿರಬೇಕು, ಆಧಾರ್​ ಕಾರ್ಡ್​ ವಿಳಾಸದಲ್ಲಿರುವ ಜಿಲ್ಲೆಯಿಂದ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಕಾಲೇಜು, ವಿಶ್ವವಿದ್ಯಾಲಯದಿಂದ ಸಂಯೋಜಿತವಾಗಿದ್ದರೆ ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹತೆ ಇರಲಿದೆ. https://jpnp.org.in ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಲು ನ.30 ಕೊನೇ ದಿನವಾಗಿದೆ. ಅರ್ಜಿ ಸಲ್ಲಿಕೆ ಸ್ವೀಕೃತಿ ಪತ್ರ ಇ-ಮೇಲ್​ಗೆ ಬರಲಿದ್ದು, ಅದರ ಝರಾಕ್ಸ್​ ಪ್ರತಿ, ದಾಖಲೆ ತಾಲೂಕು ಸಮಿತಿಗೆ ಡಿ.12ರೊಳಗೆ ಸಲ್ಲಿಸಬೇಕು. ಅರ್ಜಿದಾರ ವಿದ್ಯಾರ್ಥಿಯ ಪೋಷಕರು ತಮ್ಮ ಜಿಲ್ಲೆಯ ಸಮುದಾಯದ ಸಂಘದ ಸದಸ್ಯತ್ವ ಹೊಂದಿರಬೇಕು, ಶೈಕ್ಷಣಿಕ ವರ್ಷದಲ್ಲಿ ತಾನು ಭಾಗವಹಿಸಿದ ಕಾರ್ಯಕ್ರಮಗಳ ಮಾಹಿತಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ವಿಳಾಸದ ಪುರಾವೆ, ವಿದ್ಯಾಸಂಸ್ಥೆಯ ಗುರುತಿನ ಚೀಟಿ, ಬ್ಯಾಂಕ್​ ವಿವರ, ಆಧಾರ್​ ಕಾರ್ಡ್​, ಭಾವಚಿತ್ರ, ಬಿಪಿಎಲ್​ ಕಾರ್ಡ್​, ಶುಲ್ಕ ಪಾವತಿ ರಸೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪ್ರಾಂಶುಪಾಲರ ಸಹಿ, ಮೊಹರು ದೃಢೀಕರಿಸಿದ ಹಿಂದಿನ ಮೂರು ವರ್ಷಗಳ ಅಂಕಪಟ್ಟಿಗಳನ್ನು ಸಲ್ಲಿಸಬೇಕು. ಮಾಹಿತಿಗೆ ವಿಭಾಗೀಯ ಸಂಚಾಲಕ 9663415147ಗೆ ಸಂಪರ್ಕಿಸಬೇಕು ಎಂದು ಕೋರಿದ್ದಾರೆ.