ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಅಣಕು ಪ್ರದರ್ಶನ

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಅಣಕು ಪ್ರದರ್ಶನ
Published on: 

ಕಲಬುರಗಿ: ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ವಾರ್ಷಿಕ ವೇಳಾಪಟ್ಟಿಯಂತೆ ಇತ್ತೀಚೆಗೆ

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಅಣಕು ಪ್ರದರ್ಶನ ನಡೆಯಿತು.

ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಅವರ ಸಮಕ್ಷಮ ಎಲ್ಲಾ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ನೈಜ-ಸಮಯದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸನ್ನದ್ಧತೆಯನ್ನು ಪರಿಶೀಲಿಸಲಾಯಿತು. ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಭ್ಯಾಸ ಮಾಡಲಾಯಿತು.

ಡಿ.ಸಿ.ಪಿ ಶಾಲೂ, ಎ.ಸಿ.ಪಿ ಪ್ರವೀಣ ನಾಯಕ್, ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ ಏರ್ಪೋರ್ಟ್ ನಿರ್ದೇಶಕ ಕಿಶೋರ ಕಿಲ್ಲಂಪಲ್ಲಿ, ಡಿ.ಜಿ.ಎಂ(ಸಿ.ಎನ್.ಎಸ್) ವಿ.ಸಿ.ವೆಂಕಟೇಶ್ವರ ರೆಡ್ಡಿ, ಎ.ಜಿ‌.ಎಂ(ಸಿವಿಲ್ ಇಂಜಿನೀಯರಿಂಗ್) ವೆಂಕಟರಾಮ ಜಿ., ಎ.ಜಿ.ಎಮ್ (ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಶ್ರೀಧರ ಬಾಬು, ಎ.ಟಿ.ಸಿ. ಇನ್ಚಾರ್ಜ್ ರೊಹಿತ್ ಗೋಯಾಲ್, ಮುಖ್ಯ ಭದ್ರತಾ ಅಧಿಕಾರಿ ಎಂ.ತಿಕ್ಷಣ ಮಾದವ, ಅಗ್ನಿಶಾಮಕ ಸೇವೆಯ ವಿಜಯಕಯಮಾರ ಪಿ.ಕೆ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net