ಆರೋಗ್ಯ ಕ್ಚೇತ್ರದಲ್ಲಿ ಸಾಕಷ್ಟು ಅವಕಾಶ

ಕಲಬುರಗಿಯ ಪ್ರೇರಣಾ ಫಿಜಿಸಿಯೋಥೆರಪಿ (ಬಿಪಿಟಿ) ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಡಾ.ಸಂತೋಷ ಮಂಗಶೆಟ್ಟಿ ಉದ್ಘಾಟಿಸಿದರು. ರಾಜೇಂದ್ರ ಬಿರಾದಾರ, ಡಾ.ದೇವಾನಂದ ಬಿರಾದಾರ, ಡಾ.ಶರಣಬಸವ ಹವಾಲ್ದಾರ, ಡಾ.ಹೀರಾಚಂದ ಬಬಲಾದ, ಡಾ.ಅಮರೇಶ ಪತ್ತಾರ, ಕಿರಣಕುಮಾರ ಹಿಬಾರೆ, ನಾಗರಾಜ ಪಾಟೀಲ್​,
ಕಲಬುರಗಿಯ ಪ್ರೇರಣಾ ಫಿಜಿಸಿಯೋಥೆರಪಿ (ಬಿಪಿಟಿ) ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಡಾ.ಸಂತೋಷ ಮಂಗಶೆಟ್ಟಿ ಉದ್ಘಾಟಿಸಿದರು. ರಾಜೇಂದ್ರ ಬಿರಾದಾರ, ಡಾ.ದೇವಾನಂದ ಬಿರಾದಾರ, ಡಾ.ಶರಣಬಸವ ಹವಾಲ್ದಾರ, ಡಾ.ಹೀರಾಚಂದ ಬಬಲಾದ, ಡಾ.ಅಮರೇಶ ಪತ್ತಾರ, ಕಿರಣಕುಮಾರ ಹಿಬಾರೆ, ನಾಗರಾಜ ಪಾಟೀಲ್​,
Published on: 

ಕಲಬುರಗಿ: ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಮಾಡಬಹುದಾಗಿದೆ. ಅದರಲ್ಲೂ ಫಿಜಿಯೋಥೆರಫಿ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಅವಕಾಶಗಳಿವೆ ಎಂದು ಖ್ಯಾತ ನರರೋಗ ತಜ್ಞ ಡಾ.ಸಂತೋಷ ಮಂಗಶೆಟ್ಟಿ ಹೇಳಿದರು.

ನ್ಯೂ ರಾವೇಂದ್ರ ಕಾಲನಿಯಲ್ಲಿರುವ ಮೋಹನರಾಜ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್​ನ ಪ್ರೇರಣಾ ಫಿಜಿಯೋಥೆರಫಿ (ಬಿಪಿಟಿ) ಕಾಲೇಜಿಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ 10 ಸಾವಿರಕ್ಕೆ ಒಬ್ಬ ಫಿಜಿಯೋಥೆರಪಿಸ್ಟ್​ ಅಗತ್ಯವಿದೆ. ಆದರೆ ಸದ್ಯಕ್ಕೆ 0.36 ಫಿಜಿಯಾಥೆರಪಿಸ್ಟ್​ಗಳಿದ್ದು, ಸರಾಸರಿ 27,800 ಜನರಿಗೆ ಒಬ್ಬ ಎನ್ನುವಂತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಪ್ರಮಾಣ ಹೆಚ್ಚಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯಕಿಯ ಕ್ಷೇತ್ರದಲ್ಲಿ ಫಿಜಿಯೋಥೆರಫಿ ಸೇವೆಯ ಅಗತ್ಯ ಹೆಚ್ಚಾಗುತ್ತಿದೆ. ವೃದ್ಧಾಪ್ಯ, ಅಪಘಾತ, ಲಕ್ವಾ, ಮೂಳೆ ಮುರಿತ, ಸಂಧಿವಾತದಂಥ ಸಮಸ್ಯೆಗಳಿಂದ ಬಳಲುತ್ತಿರುವವರು, ಗಾಯಗಳ ಶಸಚಿಕಿತ್ಸೆ ನಂತರದ ಪುನರ್ವಸತಿ ಮುಂತಾದ ಕ್ಷೇತ್ರಗಳಲ್ಲಿ ಫಿಜಿಯೋಥೆರಪಿಸ್ಟ್​ ಪಾತ್ರ ಹಿರಿದಾಗಿದೆ ಎಂದರು.

ಕಾಲೇಜಿನ ಚೇರ್ಮನ್​ ಡಾ.ದೇವಾನಂದ ಬಿರಾದಾರ ಮಾತನಾಡಿ, ಅಂಕ ಗಳಿಸಲು ಓದುವಿಕೆ ಅಲ್ಲ. ಜ್ಞಾನಕ್ಕಾಗಿ ಓದು ಎಂಬುದು ತಮ್ಮ ಧ್ಯೇಯ. ಪ್ರಮುಖವಾಗಿ ವೃತ್ತಿಪರತೆ ಕೌಶಲ ಪರಿಪೂರ್ಣರಾಗಿ ಪದವಿ ಪಡೆಯಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಡಾ.ಶ್ರೀಶೈಲ ಪಾಟೀಲ್​ ಮಾತನಾಡಿ, ಪ್ರೇರಣಾ ಫಿಜಿಯೋಥೆರಫಿ ಕಾಲೇಜು ಆರಂಭದಲ್ಲಿಯೇ ಎಲ್ಲ ಸೀಟು ಭರ್ತಿಯಾಗಿರುವುದು ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಉತ್ತಮ ಬೋಧನಾ ವಾತಾವರಣವಿದ್ದು, ಮೌಲ್ಯದೊಂದಿಗೆ ಕಲಿಕೆ ಕಾಲೇಜಿನ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಮೋಹನರಾಜ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಟ್ಸ್​ ಅಧ್ಯ ರಾಜೇಂದ್ರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣಾ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸವ ಹವಾಲ್ದಾರ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ಡಾ.ಹೀರಾಚಂದ ಬಬಲಾದ, ಡಾ.ಅಮರೇಶ ಪತ್ತಾರ, ಕಿರಣಕುಮಾರ ಹಿಬಾರೆ, ನಾಗರಾಜ ಪಾಟೀಲ್​, ಡಾ.ನಿವೇದಿತಾ ಡಿ.ಬಿರಾದಾರ ಇತರರಿದ್ದರು. ಡಾ.ಸಪ್ನಾ ನಿರೂಪಣೆ ಮಾಡಿದರು. ಡಾ.ಜೈನಾಬ್​ ಬಾನು ಪರಿಚಯಿಸಿದರು.

ಫಿಜಿಯೋಥೆರಫಿಯನ್ನು ಕೇವಲ ಉದ್ಯೋಗ ಎಂದು ನೋಡದೆ ಸೇವೆಯ ಪದವಿಯಾಗಿದೆ. ಆತ್ಮವಿಶ್ವಾಸದೊಂದಿಗೆ ಮುನ್ನಡೆದು ಸಂಸ್ಥೆ ಹಾಗೂ ತಂದೆ ತಾಯಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಸಾಧಕರಾಗಿ.
> ಡಾ.ದೇವಾನಂದ ಬಿರಾದಾರ ಚೇರ್ಮನ್​, ಮೋಹನರಾಜ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net