ಗ್ರಾಮೀಣ ಮಕ್ಕಳಿಗೆ ವಿಜ್ಞಾನ ಶಿಕ್ಷಣ ಗುರಿ

2026 ಪಿಯುಸಿ ದ್ವೀತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಬುರಗಿ ದೊಡ್ಡಪ್ಪ ಅಪ್ಪ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ತಿಗಳಾದ ನಂದಿನಿ, ವಿನಿತಕುಮಾರ್​, ರೇವಣಸಿದ್ದಪ್ಪ ಅವರನ್ನು ಸೋಮವಾರ ಸತ್ಕರಿಸಲಾಯಿತು. ಬಸವರಾಜ ದೇಶಮುಖ, ಡಾ.ರಾಜು ತೆಗ್ಗೆಳ್ಳಿ, ಡಾ.ರಾಮಕೃಷ್ಣ ರೆಡ್ಡಿ, ವಿನೋದಕುಮಾರ ಪತಂಗೆ ಇದ್ದರು.
2026 ಪಿಯುಸಿ ದ್ವೀತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಬುರಗಿ ದೊಡ್ಡಪ್ಪ ಅಪ್ಪ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ತಿಗಳಾದ ನಂದಿನಿ, ವಿನಿತಕುಮಾರ್​, ರೇವಣಸಿದ್ದಪ್ಪ ಅವರನ್ನು ಸೋಮವಾರ ಸತ್ಕರಿಸಲಾಯಿತು. ಬಸವರಾಜ ದೇಶಮುಖ, ಡಾ.ರಾಜು ತೆಗ್ಗೆಳ್ಳಿ, ಡಾ.ರಾಮಕೃಷ್ಣ ರೆಡ್ಡಿ, ವಿನೋದಕುಮಾರ ಪತಂಗೆ ಇದ್ದರು.
Published on: 

ಕಲಬುರಗಿ: ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣ ನೀಡುವುದು ಶರಣಬಸವೇಶ್ವರ ಸಂಸ್ಥಾನದ ಉದ್ದೇಶವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ದೊಡ್ಡಪ್ಪ ಅಪ್ಪ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಜ್ಞಾನ ಚಟುವಟಿಕೆ, ಸ್ವಾಗತ ಸಮಾರಂಭ ಉದ್ಘಾಟಿಸಿದ ಅವರು, ಕಠಿಣ ಪರಿಶ್ರಮವೇ ಸಾಧನೆಗೆ ದಾರಿ. ಡಾ.ಅಬ್ದುಲ್​ ಕಲಾಂ ಹೇಳಿದಂತೆ ದೊಡ್ಡ ಕನಸು ಕಾಣಬೇಕು. ಯಾವುದೇ ಕ್ಷೇ‘ತ್ರದ ಅಧ್ಯಯನ ಪರಿಶ್ರಮ ಬಯಸುತ್ತದೆ. 1934ರಲ್ಲಿ ಮಹಾದೇವಿ ಕನ್ಯಾ ಪ್ರೌಢಶಾಲೆಯಿಂದ ಆರಂಭವಾದ ಈ ಸಂಸ್ಥೆ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕೃಷಿ ವಿಾನ ಕೇಂದ್ರದ ನಿರ್ದೇಶಕ ಡಾ.ರಾಜು ತೆಗ್ಗೆಳ್ಳಿ ಮಾತನಾಡಿ, ಒಂದು ಕಾಲೇಜು ಕೇವಲ ಪಠ್ಯಕ್ರಮ ಬೋಧಿಸಿದರೆ ಸಾಲದು. ವಿದ್ಯಾರ್ಥಿಗಳಲ್ಲಿ ವಿಶಾಲವಾದ ಜ್ಞಾನ ತಿಜ ವಿಸ್ತರಿಸುವ, ಚಿಂತನೆಗೆ ಹಚ್ಚುವ ಅವಕಾಶ ಕಲ್ಪಿಸಿಕೊಡಬೇಕು. ಕನ್ನಡ ಅಥವಾ ಹಿಂದಿಯಂತಹ ಪ್ರಾದೇಶಿಕ ಭಾಷೆಗಳಲ್ಲಿ ಓದಿದ್ದೇವೆ ಎಂಬ ಕೀಳರಿಮೆ ಇಟ್ಟುಕೊಳ್ಳದೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರೋತ್ಸಾಹ ಸಿಗುವಂತಹ ವಾತಾವರಣ ಕಾಲೇಜುಗಳಲ್ಲಿ ದೊರೆಯಬೇಕು. ಒಕ್ಕಲುತನ ಮಾಡಲು ವಿಜ್ಞಾನದ ಅಧ್ಯಯನಕ್ಕಿಂತ ಪ್ರಾಯೋಗಿಕ ಅನುಭವ ಮುಖ್ಯ ಎಂದರು.

ಕಾಲೇಜಿನ ಪ್ರಾಚಾರ್ಯ ವಿನೋದಕುಮಾರ ಪತಂಗೆ ಸ್ವಾಗತಿಸಿದರು. ಭಾಗ್ಯವತಿ ಪಾಟೀಲ್​ ಮತ್ತು ಪ್ರಿಯಾಂಕ ಡಿ. ನಿರೂಪಣೆ ಮಾಡಿದರು. ಸಂತೋಷ ಬೋರೊಟಿ ವಂದಿಸಿದರು. 2026ರ ಪಿಯುಸಿ ದ್ವೀತಿಯ ವಾರ್ಷಿಕ ಪರೀೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಂದಿನಿ, ವಿನಿತಕುಮಾರ್​, ರೇವಣಸಿದ್ದಪ್ಪ ಮತ್ತು ಅವರ ಪಾಲಕರನ್ನು ನಗದು ಪುರಸ್ಕಾರದೊಂದಿಗೆ ಸತ್ಕರಿಸಲಾಯಿತು.

ವಿದ್ಯೆಗೆ ವಿನಯವೇ ಭೂಷಣ. ಪಿಯು ಅಧ್ಯಯನದಲ್ಲಿ ವಿಚಲಿತರಾಗದೆ ಕಠಿಣ ಪರಿಶ್ರಮ ವಹಿಸಬೇಕು. ಕೇವಲ ಅಂಕ ಭವಿಷ್ಯ ನಿರ್ಧರಿಸುವುದಿಲ್ಲ, ಪ್ರತಿಭೆ ಅಗತ್ಯ. ವಿದ್ಯಾರ್ಥಿಗಳು ಬದಲಾವಣೆಗಳಿಗೆ ಹೊಂದಿಕೊಂಡು ಬೆಳೆಯಬೇಕು. ಲಭ್ಯವಾಗುವ ಸಂಪನ್ಮೂಲಗಳಿಂದಲೇ ಸಾಧಿಸಿ ತೋರಿಸಬೇಕು.
> ಡಾ.ರಾಜು ತೆಗ್ಗೆಳ್ಳಿ ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net