ಚುನಾವಣೆಯಲ್ಲಿ ಗುತ್ತೇದಾರ್​ ಪರಿವಾರಕ್ಕೆ ಪಾಠ

ಶಾಸಕ ಬಿ.ಆರ್​. ಪಾಟೀಲ್​ ಅವರನ್ನು ನಿಂದಿಸಿರುವುದನ್ನು ಖಂಡಿಸಿ ಲಿಂಗಾಯತ ಸಮುದಾಯದಿಂದ ಆಳಂದ ಬಸ್​ ನಿಲ್ದಾಣ ಎದುರು ಪ್ರತಿಭಟನೆ ನಡೆಸಲಾಯಿತು. ಅಶೋಕ ಸಾವಳೇಶ್ವರ, ಶರಣಬಸಪ್ಪ ಭೂಸನೂರ, ಬಸವರಾಜ ಪವಾಡಶೆಟ್ಟಿ, ಗುರುಶರಣ ಪಾಟೀಲ್​, ಗುರುಲಿಂಗಜಂಗಮ ಪಾಟೀಲ್​ ಇತರರಿದ್ದರು.
ಶಾಸಕ ಬಿ.ಆರ್​. ಪಾಟೀಲ್​ ಅವರನ್ನು ನಿಂದಿಸಿರುವುದನ್ನು ಖಂಡಿಸಿ ಲಿಂಗಾಯತ ಸಮುದಾಯದಿಂದ ಆಳಂದ ಬಸ್​ ನಿಲ್ದಾಣ ಎದುರು ಪ್ರತಿಭಟನೆ ನಡೆಸಲಾಯಿತು. ಅಶೋಕ ಸಾವಳೇಶ್ವರ, ಶರಣಬಸಪ್ಪ ಭೂಸನೂರ, ಬಸವರಾಜ ಪವಾಡಶೆಟ್ಟಿ, ಗುರುಶರಣ ಪಾಟೀಲ್​, ಗುರುಲಿಂಗಜಂಗಮ ಪಾಟೀಲ್​ ಇತರರಿದ್ದರು.
Published on: 

ಆಳಂದ: ಮುಂಬರುವ ಚುನಾವಣೆಯಲ್ಲಿ ಗುತ್ತೇದಾರ್​ ಕುಟುಂಬದವರು ಯಾರೇ ಸ್ಪರ್ಧಿಸಿದರೂ ಲಿಂಗಾಯತ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಕೆವೈಡಿಸಿಸಿ ಬ್ಯಾಂಕ್​ ನಿರ್ದೇಶಕ ಅಶೋಕ ಸಾವಳೇಶ್ವರ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಅವರು ಶಾಸಕ ಬಿ.ಆರ್​.ಪಾಟೀಲ್​ ಅವರನ್ನು ಏಕವಚನದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ಬಸ್​ ನಿಲ್ದಾಣ ಎದುರು ಲಿಂಗಾಯತ ಸಮುದಾಯದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿ, ಅದು ಬಿಟ್ಟು ವೈಯಕ್ತಿಕ ಅವಹೇಳನ ಸರಿಯಲ್ಲ. ತಂದೆ-ಮಗನ ರಾಜಕೀಯ ಜೀವನ 2027ರಲ್ಲಿ ಅಂತ್ಯವಾಗಲಿದೆ ಎಂದು ಕಿಡಿಕಾರಿದರು.

ಪ್ರಮುಖರಾದ ಶರಣಬಸಪ್ಪ ಭೂಸನೂರ, ಬಸವರಾಜ ಪವಾಡಶೆಟ್ಟಿ, ಗುರುಶರಣಗೌಡ ಪಾಟೀಲ್​, ಗುರುಲಿಂಗಜಂಗಮ ಪಾಟೀಲ್​, ಗುರುಶಾಂತ ಪಾಟೀಲ್​, ಸಾತಲಿಂಗಪ್ಪ ಪಾಟೀಲ್​, ಲಿಂಗರಾಜ ಪಾಟೀಲ್​, ಶರಣಬಸಪ್ಪ ವಾ, ಸತೀಶ ಪನಶೆಟ್ಟಿ, ಪಂಡಿತ ಶೇರಿಕಾರ, ಗಣೇಶ ಪಾಟೀಲ್​, ಆನಂದ ದೇಶಮುಖ, ಸಂತೋಷ ವಾಲೆ, ಅಪ್ಪಾರಾವ ಜವಳಿ ಇತರರಿದ್ದರು.

ಲಿಂಗಾಯತ ಭವನದಿಂದ ಪ್ರಾರಂಭವಾದ ಪ್ರತಿಭಟನೆ ಮೆರವಣಿಗೆ ರಜ್ವಿ ರಸ್ತೆ, ಸಿದ್ದಾರ್ಥ ಚೌಕ್​, ಹಳೇ ತಹಸಿಲ್​ ಕಚೇರಿ, ಚಕ್ರಕಟ್ಟ, ಗಣೇಶ ಮಂದಿರ, ಶ್ರೀರಾಮ ಮಾರ್ಕೆಟ ಮಾರ್ಗವಾಗಿ ಬಸ್​ ನಿಲ್ದಾಣದ ತಲುಪಿತು. ದಾರಿಯುದ್ದಕ್ಕೂ ಗುತ್ತೇದಾರ್​ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.