ಪ್ರವಚನಕ್ಕೆ ಪುಸ್ತಕ ರೂಪ ವಿಶೇಷ ಧಾರ್ಮಿಕ ಕಾರ್ಯ

ಧಾರವಾಡದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದಲ್ಲಿ ಕಲಬುರಗಿಯ ಗುರುರಾಜ ಕುಲಕರ್ಣಿ ಅವರು ರಚಿಸಿರುವ "ಡಿವೈನ್​ ಎಕೋಸ್​ ಫ್ರಮ್​ ಧಾರವಾಡ' ಕೃತಿಯನ್ನು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಲೋಕಾರ್ಪಣೆಗೊಳಿಸಿದರು. ದಿವಾನ್​ ಪಂ.ಶಶಿಧರಾಚಾರ್ಯ, ಪಂ. ಪುಷ್ಕರಾಚಾರ್ಯ ಇತರರಿದ್ದರು.
ಧಾರವಾಡದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದಲ್ಲಿ ಕಲಬುರಗಿಯ ಗುರುರಾಜ ಕುಲಕರ್ಣಿ ಅವರು ರಚಿಸಿರುವ "ಡಿವೈನ್​ ಎಕೋಸ್​ ಫ್ರಮ್​ ಧಾರವಾಡ' ಕೃತಿಯನ್ನು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಲೋಕಾರ್ಪಣೆಗೊಳಿಸಿದರು. ದಿವಾನ್​ ಪಂ.ಶಶಿಧರಾಚಾರ್ಯ, ಪಂ. ಪುಷ್ಕರಾಚಾರ್ಯ ಇತರರಿದ್ದರು.
Published on: 

ಕಲಬುರಗಿ: ಆಧುನಿಕ ಬದುಕಿನ ಒತ್ತಡಗಳನ್ನು ಎದುರಿಸಲು ಆಧ್ಯಾತ್ಮಿಕ ನೆಮ್ಮದಿಯ ದಾರಿದೀಪವಾಗಬಲ್ಲ ಲೇಖಕ ಗುರುರಾಜ ಕುಲಕರ್ಣಿ ಅವರ "ಡಿವೈನ್​ ಎಕೋಸ್​ ಫ್ರಮ್​ ಧಾರವಾಡ' ಎಂಬ ಇಂಗ್ಲಿಷ್​ ಕೃತಿ ಧಾರವಾಡದ ಉತ್ತರಾದಿ ಮಠದ ಶ್ರೀ ಹಯಗ್ರೀವ ದೇವಸ್ಥಾನದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

ಉತ್ತರಾದಿ ಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸತ್ಯಾತ್ಮತಿರ್ಥರ 31ನೇ ಚಾತುರ್ಮಾಸ್ಯದ ದಿವ್ಯ ಪ್ರವಚನಗಳ ಆಧಾರಿತ ಈ ಕೃತಿಯನ್ನು ಸ್ವತ@ ಶ್ರೀಗಳು ಲೋಕಾರ್ಪಣೆ ಮಾಡಿ ಅನುಗ್ರಹ ಸಂದೇಶ ನೀಡಿ, ಪ್ರವಚನಗಳನ್ನು ಸರಳ ಇಂಗ್ಲಿಷ್​ನಲ್ಲಿ ಸಂಗ್ರಹಿಸಿ, ಸ್ವತ@ ಮುದ್ರಣ ಮಾಡಿಸಿ, ಸುಮಾರು 1008 ಜನರಿಗೆ ಉಚಿತವಾಗಿ ವಿತರಿಸಿರುವುದು ವಿಶೇಷ ಧಾರ್ಮಿಕ ಸೇವೆಯಾಗಿದೆ. ಗುರುರಾಜ ಕುಲಕರ್ಣಿ ಹಾಗೂ ಅವರ ಕುಟುಂಬದವರಿಗೆ ವಿಶೇಷ ಅನುಗ್ರಹವಾಗಲಿ ಎಂದು ಆಶೀರ್ವದಿಸಿದರು.

ವಿಶ್ರಾಂತ ನ್ಯಾಯಮೂರ್ತಿ, ನಾಡೋಜ ಶಿವರಾಜ ವಿ. ಪಾಟೀಲ್​ ಅವರ "ಾನವು ಸಮಾಜವನ್ನು ಬೆಳಗಬೇಕು' ಎಂಬ ಉದಾತ್ತ ತತ್ವದಿಂದ ಪ್ರೇರಣೆ ಪಡೆದು ಕೃತಿ ರಚಿಸಲಾಗಿದೆ. ಈ ಪ್ರಯತ್ನಕ್ಕೆ ಪ್ರೇರಣೆ ನೀಡಿದ ಸುಪ್ರೀಂ ಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್​ ಅವರನ್ನು ಶ್ರೀಗಳು ದೂರವಾಣಿ ಮೂಲಕ ಅಭಿನಂದಿಸಿ ಆಶೀರ್ವದಿಸಿದರು.

ಶ್ರೀಮಠದ ದಿವಾನ್​ ಪಂ.ಶಶಿಧರಾಚಾರ್ಯ, ಪಂ.ಪುಷ್ಕರಾಚಾರ್​ ಇತರರಿದ್ದರು.

ದಿನವಾರು ಪ್ರವಚನಗಳ ಸಂಗ್ರಹ

ಕೃತಿಯಲ್ಲಿ 31ನೇ ಚಾತುರ್ಮಾಸ್ಯದ ಪ್ರವಚನಗಳನ್ನು ದಿನವಾರು ಕ್ರಮಬದ್ಧವಾಗಿ ಸಂಗ್ರಹಿಸಲಾಗಿದೆ. ಓದುಗರಿಗೆ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸೂಕ್ತ ಚಿತ್ರಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಸ್ವಾಮೀಜಿ ಅವರ ಪ್ರವಚನಗಳನ್ನು ನೇರವಾಗಿ ವೀಸಲು ದಿನವಾರು ಕ್ಯೂಆರ್​ ಕೋಡ್​ಗಳನ್ನು ನೀಡಲಾಗಿದೆ.

ಶ್ರೀ ಸತ್ಯಾತ್ಮತಿರ್ಥರ ದಿವ್ಯ ವಾಣಿಯ ಸಾರವನ್ನು ಒಳಗೊಂಡಿರುವ ಈ ಕೃತಿ ಯುವಜನತೆ ಹಾಗೂ ಓದುಗರಲ್ಲಿ ನೈತಿಕ ಸ್ಥೆರ್ಯ, ಕರುಣೆ, ಶಿಸ್ತು ಮತ್ತು ಸಮಚಿತ್ತದ ಬದುಕಿನ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ರೂಪಿಸಲಾಗಿದೆ. ದೈನಂದಿನ ಬದುಕಿನ ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸಲು ಸನಾತನ ಧರ್ಮದ ಮೌಲ್ಯಗಳನ್ನು ಸರಳವಾಗಿ ಪರಿಚಯಿಸುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಲಾಗಿದೆ.
> ಗುರುರಾಜ ಕುಲಕರ್ಣಿ, ಲೇಖಕ, ಡಿವೈನ್​ ಏಕೋಸ್​ ಫ್ರಮ್​ ಧಾರವಾಡ ಪುಸ್ತಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net