ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಅಧಿಕಾರಿಗಳಿಗೆ - ಸಿಇಓ ತಾಕಿತು

ceo-2 (2)
Published on

ಜೇವರ್ಗಿಗೆ ಜಿಪಂ ಸಿಇಓ ಭೇಟಿ | ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಿ

ಕಲಬುರಗಿ : ಜಿಲ್ಲಾ ಪಂಚಾಯತ್‌ ಕಲಬುರಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ ಸಿಂಗ್‌ ಮಿನಾ ರವರು, ಗುರುವಾರ ಜೇವರ್ಗಿ ತಾಲೂಕಿನ ಯನಗುಂಟಾ, ಹರನೂರ, ಮಾವನೂರ, ಹಿಪ್ಪರಗಾ ಎಸ್ ಎನ್‌ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್‌ ಮಿಷನ್‌ ಕಾರ್ಯಕ್ರಮದಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಹಾಗೂ ಗುಣ ಮಟ್ಟ ಪರಿಶೀಲಿಸಿದರು.

ಯೋಜನೆಯ ಮಾರ್ಗಸೂಚಿಯನ್ವಯ ಗುಣ ಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ, ಎಲ್ಲಾ ಮನೆಗಳಿಗೆ ಕಾರ್ಯತ್ಮಕ ನಳ ನೀರು ಸಂಪರ್ಕವನ್ನು ಕಲ್ಪಿಸಿ ಜನರಿಗೆ ತೊಂದರೆ ಆಗದಂತೆ ದಿನದ 24 ಗಂಟೆ ನೀರು ಸಿಗುವಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಜೆಜೆಎಮ್ ಇಲಾಖೆಯ ಅಧಿಕಾರಿಗಳಿಗೆ ಖಡಕ್ಕಾಗಿ ತಾಕಿತು ಮಾಡಿದರು.

ನಂತರ ಮದರಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ, ಶಿಶುಪಾಲನ ಕೇಂದ್ರ, ಜೇವರ್ಗಿ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸೊನ್ನದ ಪುಸ್ತಕ ಗುಡು, ಮಂದೇವಾಲ ಗ್ರಾಮದ ಅಂಗನವಾಡಿ ಕಟ್ಟಡ, ನೆಲೋಗಿಯ ಮೂರಾರ್ಜಿ ವಸತಿ ಶಾಲೆ ಮತ್ತು ಕೆಕೆಆರ್‌ ಡಿಬಿ ಯಡಿ ನಿರ್ಮಾಣಗೊಂಡ ರಸ್ತೆ ಕಾಮಾಗಾರಿ ವೀಕ್ಷಣೆ ಮಾಡಿ ಪರಿಶೀಲನೆ ನಡಿಸಿದರು.

ತಾಲೂಕ ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ರೇವಣಸಿದ್ದಪ್ಪ ಕೆ. ಗೌಡರ್‌, ಆರ್ ಡಬ್ಯು ಎಇಇ ಗುರುಶಾಂತಯ್ಯ ಗದ್ದಗಿಮಠ, ಸಂಗಣ್ಣಗೌಡ, ಮಾಳಿಂಗರಾಯ, ಬಿಲಾಲ್, ಉದಯಕುಮಾರ, ಪಾಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಾದ ಸಂಗೀತಾ ಪಿ. ಭಂಢಾರಿ, ಅರವಿಂದ ಚವ್ಹಾಣ, ಪ್ರಭು ಗಡಗಿ, ರೇವಣಸಿದ್ದಪ್ಪ, ತಾಂತ್ರಿಕ ಸಂಯೋಜಕ ಸಂತೋಷ ತಡಿಬಿಡಿ, ಐಇಸಿ ಸಂಯೋಜಕ ಚಿದಂಬರ್‌ ಪಾಟೀಲ, ಇದ್ದರು.

ಬಾಕ್ಸ್-

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಿಇಓ ರವರು, ವಿದ್ಯಾರ್ಥಿಗಳಿಗೆ ದಿನ ನಿತ್ಯ ಕೊಡುವ ಆಹಾರ ಪರಿಶೀಲಿಸಿ, ಗುಣಮಟ್ಟದ ಆಹಾರ ಕೊಡಬೇಕು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ವಸತಿ ನಿಲಯದ ವಾರ್ಡನ್‌ ರವರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net