ವೀರಶೈವ ಮಹಾಸಭಾಕ್ಕೆ ಮೋದಿ ಮತ್ತೇ ಅಧ್ಯಕ್ಷ

0807 KLB 02
Published on

ಜಿಲ್ಲಾ ತಾಲೂಕು ಘಟಕ ಪದಾಧಿಕಾರಿಗಳು ಅವಿರೋಧ ಆಯ್ಕೆ | ಸರಡಗಿ ಶ್ರೀ,ದೇಶಮುಖ ಸಮಾಜ ಹಿರಿಯರ ನೇತೃತ್ವದ ಸಭೆ ಫಲಪ್ರದ



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶರಣಕುಮಾರ ಮೋದಿ ಮತ್ತೊಮ್ಮೆ ಅಧ್ಯಕ್ಷರಾಗಿದ್ದಾರೆ. ಇದರೊಂದಿಗೆ ಮೋದಿ ಸೆಕೆಂಡ್ ಇನ್ಸಿಂಗ್ಸ್ ಶುರುವಾಗಲಿದೆ. ಅಧ್ಯಕ್ಷ ಸೇರಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡAತೆ ಆಗಲಿದೆ.
ಮಹಾಸಭಾ ಚುನಾವಣೆಯ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರದಂದು ಅಧ್ಯಕ್ಷ ಸ್ಥಾನಕ್ಕೆ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ ಹಾಗೂ ದಿವ್ಯಾ ರಾಜೇಶ ಹಾಗರಗಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವ ಮೂಲಕ ಚುನಾವಣೆ ಬದಲಿಗೆ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದರು.
ವೀರಶೈವ ಮಹಾಸಭಾ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಲು ಅವಕಾಶ ನೀಡಬಾರದು ಎಂಬ ಸದುz್ದೆÃಶದಿಂದ ನಗರದ ಶರಣಬಸವೇಶ್ವರ ಸಂಸ್ಥಾನದಲ್ಲಿ ಬಸವರಾಜ ದೇಶಮುಖ ಸಮ್ಮುಖದಲ್ಲಿ ಭಾನುವಾರ ಸಂಜೆ ಜಿಲ್ಲೆಯ ಸಮಾಜದ ಮುಖಂಡರು, ಪ್ರಮುಖರು, ಶಾಸಕರು,ಮಾಜಿ ಶಾಸಕರು, ಸಚಿವರು ಸೇರಿಕೊಂಡು ಸಭೆ ನಡೆಸಿ ಚರ್ಚೆ ನಡೆಸಿ ನಾಮಪತ್ರ ಸಲ್ಲಿಸಿದ್ದ ಎಲ್ಲರ ಮನವೊಲಿಸಿದ್ದರು. ಆಗಲೇ ಎಲ್ಲರು ತಮ್ಮ ನಾಮಪತ್ರ ಹಿಂಪಡೆಯಲು ಪತ್ರ ಬರೆದುಕೊಡಲು ಒಪ್ಪಿಕೊಂಡರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಶಿಕಾಂತ ಪಾಟೀಲ್ ಅವರು ಸಮಾಜ ಹಿರಿಯರ ಒತ್ತಡಕ್ಕೆ ಮಣಿದು ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು. ಈ ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅದರಂತೆ ಶಶಿಕಾಂತ ಅವರು ಸೋಮವಾರ ಬೆಳಗ್ಗೆಯೇ ವೀರಶೈವ ಕಲ್ಯಾಣ ಮಂಟಪದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮನಿಸಿ ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದುಕೊಂಡರು. ಆದರೆ, ದಿವ್ಯಾ ಹಾಗರಗಿ ಹಿಂದಕ್ಕೆ ಪಡೆದುಕೊಂಡಿರಲಿಲ್ಲ. ಕೊನೆಯ ಗಳಿಗೆಯವರೆಗೂ ಶರಣಬವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಾಸಕ ಅಲ್ಲಮಪ್ರಭು ಪಾಟೀಲ್ ಇತರರು ಮನವೊಲಿಸಿದಾಗ ದಿವ್ಯಾ ಅವರು ಒಪ್ಪಿಕೊಂಡು ಉಮೇದುವಾರಿಕೆ ಹಿಂಪಡೆಯುವ ಪತ್ರವನ್ನು ಚುನಾವಣಾಧಿಕಾರಿ ಶರಣಬಸಪ್ಪ ಕಾಡಾದಿ ಅವರಿಗೆ ನೀಡಿದರು. ಇದರಿಂದಾಗಿ ಎಲ್ಲರ ಅವಿರೋಧ ಆಯ್ಕೆ ಪ್ರಕ್ರಿಯೆ ಶುರುಗೊಂಡಿತು.
ಇದಕ್ಕೂ ಮುನ್ನ ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶ್ರೀಗಳು ಹಾಗೂ ಬಸವರಾಜ ದೇಶಮುಖ ಇತರರು ಮಾತನಾಡಿ, ಸಮಾಜವನ್ನು ಎಲ್ಲರು ಸೇರಿಕೊಂಡು ಬಲಿಷ್ಠವಾಗಿ ಕಟ್ಟೋಣ. ಚುನಾವಣೆ ಹೆಸರಿನಲ್ಲಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ., ಒಗ್ಗೂಡಿಕೊಂಡು ಪಕ್ಷಬೇಧ ಮರೆತು ಸಮಾಜದ ಕೆಲಸ ಮಾಡೋಣ ಎಂದು ಹೇಳಿದರು. ಎಲ್ಲರು ಸಹಮತ ವ್ಯಕ್ತಪಡಿಸಿದರು.
ಡಾ.ಶ್ರೀಶೈಲ ಘೂಳಿ ಇನ್ನಿತರರು ಮಾತನಾಡಿ, ಪದಾಧಿಕಾರಿಗಳ ಆಯ್ಕೆಯಲ್ಲಿ ಕೇವಲ ಒಂದೇ ಸಮುದಾಯಕ್ಕೆ ಆಧ್ಯತೆ ಕೊಡದೆ, ಎಲ್ಲ ಒಳಪಂಗಡದವರಿಗೂ ಅವಕಾಶ ನೀಡಬೇಕು ಎಂದು ಹೇಳಿದರು. ಅದಕ್ಕೆ ಎಲ್ಲರು ಸಹಮತ ವ್ಯಕ್ತಪಡಿಸಿದರು.
ಮುಖಂಡರಾದ ಕಲ್ಯಾಣಪ್ಪ ಪಾಟೀಲ್ ಮಳಖೇಡ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಶರಣು ಪಪ್ಪಾ,ಶ್ರೀಶೈಲ ಘೂಳಿ, ಚನ್ನಬಸಪ್ಪ ಗುಡ್ಡಾ, ಸಂಗಮೇಶ ನಾಗನಹಳ್ಳಿ,ಮಹೇಶ ರೆಡ್ಡಿ, ಸೋಮಶೇಖರ ಹಿರೇಮಠ, ಮಂಜುರಡ್ಡಿ, ಎಂ.ಎಸ್.ಪಾಟೀಲ್ ನರಿಬೋಳ, ಆನಂದ ದಂಡೋತಿ, ಸಾವಿತ್ರಿ ಕುಳಗೇರಿ, ಅಪ್ಪು ಕಣಕಿ, ಈರಣ್ಣ ಗುಳೇದ, ಸತೀಶ ಜೇವರ್ಗಿ, ರಾಜು ಜೇವರ್ಗಿ, ಮಾಲಾ ಕಣ್ಣಿ, ಸಕ್ರೆಪ್ಪಗೌಡ ಹರನೂರ, ಶರಣಬಸಪ್ಪ ಭೂಸನೂರ,ಬಿ.ಕೆ.ಬಿರಾದಾರ ಸೊನ್ನ, ರಮೇಶ ಕಡಾಳೆ,ವಿಜಯಕುಮಾರ ಹಂಗರಗಿ, ಶಾಂತು ದುಧನಿ, ಶಿವಾನಂದ ತೊರವಿ, ಶರಣರಾಜ ಪಟ್ಟಣ, ವಿಜಯಕುಮಾರ ಹಳಕಟ್ಟಿ, ಶರಣು ಗುಗ್ಗರಿ, ಶರಣು ಪಾಟೀಲ್ ಸೇರಿದಂತೆ ಅನೇಕರಿದ್ದರು.
=== ಕೋಟ್==
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ಉಳಿದವರು ಹಿಂಪಡೆದುಕೊAಡಿದ್ದರಿAದ ಶರಣಕುಮಾರ ಮೋದಿ ಒಬ್ಬರೆ ಕಣದಲ್ಲಿ ಉಳಿದಂತಾಗಿದೆ. ಅವರು ಸೇರಿದಂತೆ ಜಿಲ್ಲಾ ಮತ್ತು ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಚುನಾವಣೆಯ ಕೇಂದ್ರ ಸಮಿತಿ ಅನುಮೋದನೆ ಪಡೆದುಕೊಂಡು ಜು.೨೧ ರಂದು ಎಲ್ಲ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.
| ಶರಣಬಸಪ್ಪ ಕಾಡಾದಿ
ಜಿಲ್ಲಾ ಚುನಾವಣಾಧಿಕಾರಿಗಳು ಅ.ಭಾ.ವೀ.ಮಹಾಸಭಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net