

ಕಲಬುರಗಿ: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಠಾಣೆಯಿಂದ ಕಳ್ಳ ಎಸ್ಕೇಪ್ ಆದ ಘಟನೆ ಕಲಬುರಗಿ ನಗರ ಪೊಲೀಸ್ ವ್ಯಾಪ್ತಿಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕುರಿ ಕಳ್ಳತನ ಆರೋಪದಲ್ಲಿ ಬಂಧಿತನಾದ ಹಣಮಂತ ಹಂದಿ ಠಾಣೆಯಿಂದ ಎಸ್ಕೇಪ್ ಆಗಿದ್ದಾನೆ.
ಕಲಬುರಗಿ ಜಿಲ್ಲೆಯಜೋಗೂಗರ , ಹಡಗಿಲ್ ಹಾರುತಿ ಗ್ರಾಮದಲ್ಲಿ ನಡೆದಿದ್ದ ಕುರಿ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಕುರಿ ಕಳ್ಳತನ ಸಂಬಂಧ ಹಣಮಂತ ಹಂದಿಯನ್ನು ಪೊಲೀಸರು ಕರೆತಂದಿದ್ದರು.
ಫರಹತಾಬಾದ್ ಪೊಲೀಸ್ ಠಾಣೆಗೆ ಕರೆತಂದ ಬಳಿಕ ಠಾಣೆಯಿಂದ ಎಸ್ಕೇಪ್ ಆಗಿದ್ದಾನೆ.
ಠಾಣೆಯಿಂದ ಕಳ್ಳ ಎಸ್ಕೇಪ್ ಆಗಿ ಹಲವು ದಿನಗಳು ಕಳೆದ್ರು ಪತ್ತೆ ಹಚ್ಚದ ಪೊಲೀಸರು. ಫರಹತಾಬಾದ್ ಠಾಣೆಯಲ್ಲಿ ಘಟನೆ ನಡೆದಿದೆ.