ಸ್ವದೇಶಿ ಮಾಲ್​ನಲ್ಲಿ 2.70 ಲಕ್ಷ ರೂ. ಕಳ್ಳತನ

2306KLb05
Published on

ಕಲಬುರಗಿ: ನಗರದ ಸೇಡಂ ರಸ್ತೆಯ ಆನಂದ ನಗರದಲ್ಲಿರುವ ಸ್ವದೇಶಿ ಮರ‍್ಟ್​ನ ಟೀನ್​ ತೆಗೆದು, ಒಳಹೊಕ್ಕು ಮಧ್ಯರಾತ್ರಿ ಕಳ್ಳನೊಬ್ಬ ಕನ್ನ ಹಾಕಿ, ೨.೭೦ ಲಕ್ಷ ರೂ. ನಗದು ಕಳ್ಳತನ ಮಾಡಿದ ಟನೆ ನಡೆದಿದೆ.

ಈ ಕುರಿತು ಮರ‍್ಟ್​ನ ಪಾಲುದಾರ ಚೇತನ್​ ಮಠ ದೂರು ನೀಡಿದ್ದು, ೧೮ ತಿಂಗಳ ಹಿಂದೆ ಐವರು ಕೂಡಿ ಆರಂಭಿಸಿದ್ದು, ಮರ‍್ನಾಲ್ಕು ದಿನದ ವ್ಯಾಪಾರದ ಹಣ ಮರ‍್ಟ್​ನ ಆಫೀಸಿನಲ್ಲಿನ ಅಲಮಾರಾದಲ್ಲಿ ಇಡಲಾಗಿತ್ತು. ವ್ಯಕ್ತಿಯೊಬ್ಬ ಮರ‍್ಟ್​ನಲ್ಲಿ ಒಬ್ಬನೇ ನಿಧಾನವಾಗಿ ತಿರುಗಾಡಿ, ಆಫೀಸಿನಲ್ಲಿ ಪರಿಶೀಲಿಸಿ ಆಫೀಸಿನಲ್ಲಿನ ಅಲಮಾರಿಯನ್ನು ಸ್ಕೂ ಡೆವರ್​ನಿಂದ ಮುರಿದು, ಅದರಲ್ಲಿದ್ದ ೨.೭೦ ಲಕ್ಷ ರೂ. ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾನೆ. ಮಧ್ಯರಾತ್ರಿ ೨ಗಂಟೆ ಸುಮಾರಿಗೆ ಕಳ್ಳತನ ಮಾಡಿದ್ದಾನೆ. ಈ ಕುರಿತು ಎಂಬಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆ: ಕಳ್ಳತನ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನ ನಿಧಾನಕ್ಕೆ ಹೆಜ್ಜೆ ಹಾಕುತ್ತ ಮಾಲ್​ನಲ್ಲಿ ಸುತ್ತಾಡುತ್ತಾನೆ. ನಂತರ ಆಫೀಸಿನಲ್ಲಿನ ಟೇಬಲ್​ಗಳಲ್ಲಿನ ಡ್ರಾಗಳನ್ನು ಚೆಕ್​ ಮಾಡುತ್ತಾನೆ. ನಂತರ ಅಲಮಾರವನ್ನು ಒಡೆದು, ಹಣವನ್ನು ಮಾತ್ರ ತೆಗೆದುಕೊಂಡು ಹೋಗಿದ್ದ ಸಂಪರ‍್ಣ ವಿಡಿಯೋ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net