

ಕಲಬುರಗಿ: ಲಂಡನ್‌ನ ಬ್ರುನೆಲ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ ನಗರದ ಮಲ್ಲಿಕಾರ್ಜುನ ಮೋದಿ ಭರ್ಜರಿ ಗೆಲುವು ಸಾಧಿಸಿ ಪರಿಸರ ಮತ್ತು ನೈತಿಕತೆ ಪದಾಧಿಕಾರಿ ಸ್ಥಾನ ಪಡೆದಿದ್ದಾರೆ. ಅ.೨೪ರಂದು ನಡೆದ ಚುನಾವಣೆಯಲ್ಲಿ ೬೦೦೦ ಮತದಾರರಿದ್ದು, ೪,೬೦೦ಕ್ಕೂ ಅಧಿಕ ಮತ ಪಡೆದು ೩೭೨ ವೋಟ್‌ನಿಂದ ಗೆಲುವಿನ ನಗೆ ಬೀರಿದ್ದಾರೆ. ಈಗಾಗಲೇ ಎರಡು ಬಾರಿ ಬ್ರುನೆಲ್ ವಿವಿ ವಿದ್ಯಾರ್ಥಿ ಸಂಘಟನೆ ಸದಸ್ಯರಾಗಿದ್ದ ಮಲ್ಲಿಕಾರ್ಜುನ ಇದೀಗ ೩ನೇ ಸಲ ವಿಶ್ವವಿದ್ಯಾಲಯದ ಪರಿಸರ ರಕ್ಷಣೆ ಮತ್ತು ನೈತಿಕ ವಾತಾವರಣ ರೂಪಿಸುವ ಮಹತ್ವದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಪುತ್ರ ಮಲ್ಲಿಕಾರ್ಜುನ(೨೨) ಮೂರು ವರ್ಷದಿಂದ ಬ್ರುನೆಲ್ ವಿವಿಯಲ್ಲಿ ವ್ಯವಹಾರ ನಿರ್ವಹಣೆ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಕರ್ನಾಟಕ ಸೊಸೈಟಿ ಸಂಸ್ಥಾಪಕ: ೨೦೨೧ರಲ್ಲಿ ಬ್ರುನೆಲ್ ವಿವಿಗೆ ಪ್ರವೇಶ ಪಡೆದಿದ್ದ ಮಲ್ಲಿಕಾರ್ಜುನ ಮೋದಿ ಬ್ರುನೆಲ್‌ನಲ್ಲಿರುವ ಕನ್ನಡಿಗರಿಗಾಗಿ ಕರ್ನಾಟಕ ಸೊಸೈಟಿ ಆರಂಭಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಪರಸ್ಪರ ಸಹಕಾರ, ಜ್ಞಾನ, ಜಾಗೃತಿ, ಸೇವಾ ಕಾರ್ಯಗಳಲ್ಲಿ ತೊಡಗಿದ್ದರು. ಸಹಪಾಠಿಗಳು ಇವರ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಲಂಡನ್ ಬ್ರುನೆಲ್ ವಿವಿವಿದ್ಯಾರ್ಥಿ ಸಂಘದ ನಾಯಕ| ಮಲ್ಲಿಕಾರ್ಜುನ ಮೋದಿಬ್ರುನೆಲ್ ವಿವಿ ವಿದ್ಯಾರ್ಥಿ ಸಂಘಟನೆಯಲ್ಲಿ ಮೂರು ವರ್ಷದಿಂದ ಸಕ್ರಿಯವಾಗಿದ್ದರಿಂದ ಗೆಲುವು ಸುಲಭವಾಗಿದೆ. ಪ್ರಸ್ತುತ ಸಂಘಟನೆ ಪರಿಸರ ಮತ್ತು ನೈತಿಕತೆ ಅಧಿಕಾರಿ ಸ್ಥಾನ ದೊರಕಿದೆ. ಈ ಮೂಲಕ ವಿವಿ ಪರಿಸರ ರಕ್ಷಣೆ, ಇಲೆಕ್ಟಿçಕಲ್ ಲೈಟ್ ತೆಗೆದು ಸೋಲಾರ್ ಅಳವಡಿಕೆ, ಪ್ಲಾಸ್ಟಿಕ್‌ಮುಕ್ತ ವಾತಾವರಣ ಮುಖ್ಯ ಕೆಲಸ. ವಿದ್ಯಾರ್ಥಿಗಳಲ್ಲಿ ನೈತಿಕತೆ ಕಾಪಾಡುವ ಜವಾಬ್ದಾರಿ ಹೆಗಲಿಗೆ ಏರಿದೆ. ಶರಣರ ಆಶೀರ್ವಾದ ಶಕ್ತಿ ನೀಡಿದೆ. ಲಂಡನ್ ಬ್ರುನೆಲ್ ವಿವಿಯಲ್ಲಿ ಶರಣರ ನಾಡಿನ ಯುವಕ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದಿದ್ದು ಖುಷಿ ಜತೆಗೆ ಹೆಮ್ಮೆ ಮೂಡಿಸಿದೆ. ಈ ಮೂಲಕ ನಮ್ಮ ನೆಲದ ಶಕ್ತಿ ಎಲ್ಲ ಕಡೆ ಹರಡಲಿ. ಅಧ್ಯಯನ ಮಾಡುವ ಸ್ಥಳದಲ್ಲಿ ಸೇವೆ ಸಲ್ಲಿಸುವ ಉತ್ತಮ ಅವಕಾಶ ಮಗನಿಗೆ ಸಿಕ್ಕಿದ್ದು ಸೌಭಾಗ್ಯ. | ಶರಣಕುಮಾರ ಮೋದಿ ಜಿಲ್ಲಾಧ್ಯಕ್ಷ, ವೀರಶೈವ ಮಹಾಸಭೆ