ಕೃತಕ ಬುದ್ಧಿಮತ್ತೆ ಜ್ಞಾನ ಪರಿಷ್ಕರಣೆ ಅಗತ್ಯ

1207klb05
Published on

ಕಲಬುರಗಿ: ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದರ ಜತೆಗೆ ಹೊಸ ತಂತ್ರಜ್ಞಾನದ ಜ್ಞಾನವನ್ನು ಪರಿಷ್ಕರಿಸಿ ಹೊಸದನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಪರಿಸರದಲ್ಲಿರುವ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ಕುರಿತು ಒಂದು ವಾರದ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿದ ಅವರು, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಸಂಪೂರ್ಣ ಕಲಿಕೆಯ ಹೊಸ ಕ್ಷೇತ್ರವಾಗಿದೆ ಎಂದರು.
ಪ್ರಪAಚದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಕೃತಕ ಬುದ್ಧಿಮತ್ತೆ ಕಲಿಕೆ ಅನಿವಾರ್ಯ. ಇದರ ಅಪ್ಲಿಕೇಶನ್‌ಗಳ ಬಗ್ಗೆ ಅನೇಕರು ಜಾಗರೂಕರಾಗಿಲ್ಲ. ಅಪ್ಲಿಕೇಷನ್‌ಗಳ ಪ್ರಾಮುಖ್ಯ ಪರಿಗಣಿಸಿ ಶರಣಬಸವ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಾಗಿ ಮುಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ಕೋರ್ಸ್ ಪರಿಚಯಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ದೇಶದ ವಿವಿಧ ಕಡೆಗಳಿಂದ ತಜ್ಷರನ್ನು ಆಹ್ವಾನಿಸಿ ವಿಶೇಷ ತರಬೇತಿ ಆಯೋಜಿಸಲು ವಿಶ್ವವಿದ್ಯಾಲಯ ತೀರ್ಮಾನಿಸಿದೆ. ವಿದ್ಯಾರ್ಥಿಗಳಿಗೆ ಎಲ್ಲ ಜ್ಞಾನ ಪಡೆಯಲು ಕಾರ್ಯಾಗಾರ ಅನುವು ಆಗಲಿದೆ ಎಂದರು.
ಡಾ.ಸುಜಾತಾ ಮಲ್ಲಾಪುರ, ಡಾ.ಶಿವಲೀಲಾ ಪಾಟೀಲ್, ಪ್ರೊ.ಬನ್ನಮ್ಮ ಪಾಟೀಲ್, ಪ್ರೊ.ಸುಪ್ರಿಯಾ ಬಾಗೇವಾಡಿ ಇದ್ದರು. ಡೇಟಾ ಸೈನ್ಸ್ನ ಕಾರ್ಪೋರೇಟ್ ತರಬೇತುದಾರ ಶಿವಪ್ರಸಾದ ಮುನುಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net