963 ಪೌರ ಕಾರ್ಮಿಕರಿಗೆ ನೇರ ಪಾವತಿ ವಿತರಣೆ

pourakarmikarige direct payment order letter distribute photos (14)
Published on

ಕಲಬುರಗಿ: ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಮೆಮೋರಿಯಲ್​ ಹಾಲ್​ (ಅಪ್ಪಾ ಪಬ್ಲಿಕ್​ ಶಾಲೆ) ಯಲ್ಲಿ ಆಯೋಜಿಸಿದ್ದ ಮಹಾನಗರ ಪಾಲಿಕೆಯ ೯೬೩ ಪೌರಕರ‍್ಮಿಕರ ಗುತ್ತಿಗೆ ಪದ್ದತಿ ರದ್ದುಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಆದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ವಿತರಿಸಿದರು. ನೂತನವಾಗಿ ಗ್ರಾಮ ಆಡಳಿತಾಧಿಕಾರಿಯಾಗಿ ನೇಮಕವಾದ ೬೭ ಜನರಿಗೆ ನೇಮಕಾತಿ ಪತ್ರ ಮತ್ತು ಗ್ರಾಮೀಣ ಮಟ್ಟದಲ್ಲಿ ತಂತ್ರಜ್ಞಾನ ಸರ‍್ಪಕ ಬಳಕೆಗೆ ೧೫೪ ಜನ ವಿಎಓಗಳಿಗೆ ಕ್ರೋಮ್​ ಪುಸ್ತಕ ವಿತರಿಸಲಾಯಿತು.

ಸಚಿವ ರ‍್ಖಗೆ ಮಾತನಾಡಿ, ಪೌರಕರ‍್ಮಿಕರು ನಗರದ ಬೆನ್ನೆಲಬು ಇದ್ದಂತೆ. ಬೆಳಗೆದ್ದು ಕರ‍್ಮಿಕರು ಸ್ವಚ್ಛ ಮಾಡದಿದ್ದರೆ ಸುಂದರ ಕಲಬುರಗಿ ಸಾಧ್ಯವಿಲ್ಲ. ನಗರದ ಸ್ವಚ್ಛತೆ ರಾಯಭಾರಿಗಳು ನೀವು ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ,ನಗರದ ಒಳಚರಂಡಿ ವ್ಯವಸ್ಥೆ ೪೦ ರ‍್ಷ ಹಳೆಯದ್ದಾಗಿದ್ದು, ಹೊಸ ಒಳಚರಂಡಿಗೆ ೭೦೦ ಕೋಟಿ ರೂ. ನೀಡಬೇಕು ಎಂದು ರ‍್ಖಗೆಗೆ ಮನವಿ ಮಾಡಿದರು.

ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಪೌರ ಕರ‍್ಮಿಕರ ಮಕ್ಕಳ ಮದುವೆ, ಧರ‍್ಮಿಕ ಕರ‍್ಯಕ್ರಮಕ್ಕೆ ಪೌರ ಕರ‍್ಮಿಕರ ಭವನ ನರ‍್ಮಿಸಬೇಕು ಎಂದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಕನೀಜ್​ ಫಾತಿಮಾ, ಪ್ರಮುಖರಾದ ಬಾಬುರಾವ ಚಿಂಚನಸೂರು, ಮಜಹರ್​ ಆಲಂ ಖಾನ್​, ಚಂದ್ರಿಕಾ ಪರಮೇಶ್ವರಿ, ಡಿಸಿ ಬಿ.ಫೌಜಿಯಾ ತರನ್ನುಮ್​, ಜಿಪಂ ಸಿಇಒ ಭಂವರ್​ ಸಿಂಗ್​ ಮೀನಾ, ಪಾಲಿಕೆ ಆಯುಕ್ತ ಅವಿನಾಶ್​ ಶಿಂಧೆ, ಎಸಿ ಸಾಹಿತ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net