

ಕಲಬುರಗಿ: ವರ್ಣ ವ್ಯವಸ್ಥೆಯನ್ನು ಸ್ಥಾಪಿಸುವ, ವೈದಿಕ ಪರಂಪರೆ ಮೆರೆಸುವ ಮನುಸ್ಮÊತಿಯನ್ನು ದಹಿಸುವ ಮೂಲಕ ಸಮ ಸಮಾಜದ ಸಂದೇಶವನ್ನು ಪದೇ ಪದೆ ನೀಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
೧೯೨೭ ಡಿ.೨೫ರಂದು ನಾಸಿಕ ಜಿಲ್ಲೆಯ ಮಹಾಡ್‌ದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮÊತಿ ದಹಿಸಿದ ಸ್ಮರಣಾರ್ಥ ನಗರದಲ್ಲಿ ಬುಧವಾರ ಹಮ್ಮಿಕೊಂಡ ಮನುಸ್ಮÊತಿ ದಹನ ಪ್ರತಿಭಟನೆಯಲ್ಲಿ ಮಾತನಾಡಿ, ಮಾನಸಿಕ, ಭೌತಿಕ ಹಿಂಸೆ ಬಿಂಬಿಸುವ ಮನಸುಗಳು ಸಾವಿರಾರು ವರ್ಷದಿಂದ ತಮ್ಮ ಪ್ರಯತ್ನ ಮುಂದುವರಿಸುತ್ತಿರುವುದನ್ನ ಅಂಬೇಡ್ಕರ್ ವಿರೋಧಿಸಿ, ಆ ಕೃತಿಯನ್ನು ದಹಿಸಿ, ಕ್ರಾಂತಿಗೆ ಮುನ್ನುಡಿ ಬರೆದಿದ್ದರು ಎಂದರು.
ಮನುಸ್ಮÊತಿಯು ವರ್ಣವ್ಯವಸ್ಥೆ ಬೋಧಿಸಿ, ಸ್ತಿçÃಯರಿಗೆ, ಶೂದ್ರರಿಗೆ ಭೀಕರ ನಿಯಮ ಹೇರುತ್ತದೆ. ಅಸ್ಪÊಷ್ಯರನ್ನು ಉಗ್ರವಾಗಿ ಶಿಕ್ಷೆ ಬೋಧಿಸುತ್ತದೆ. ಗೌತಮ ಬುದ್ಧ, ಬಸವಣ್ಣ ಸಮಾನತೆಯ ಸಾಮಾಜಿಕ ಚಿಂತನೆಗಳನ್ನು ಪುರೋಹಿತ ಶಾಹಿಗಳು ದೂರ ಮಾಡಿ, ಪುನಃ ಮನುಸ್ಮÊತಿ ಹೇರುವ ಪ್ರಯತ್ನಗಳು ನಡೆದಿವೆ ಎಂದರು.
ಕೃತಿಯ ಅಣಕು ಶವಯಾತ್ರೆ: ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಹಲಗೆಯೊಂದಿಗೆ ಮನುಸ್ಮÊತಿ, ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಣಕು ಶವ ಯಾತ್ರೆ ಮಾಡಲಾಯಿತು. ಮನುಸ್ಮÊತಿ, ಅಮಿತ್ ಷಾ ವಿರುದ್ಧ ಘೋಷಣೆ ಕೂಗುತ್ತ ಬೆಂಕಿ ಹಚ್ಚಲಾಯಿತು.
ಪ್ರಮುಖರಾದ ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಮಹೇಶ ಕೋಕಿಲೆ, ಸಾಯಬಣ್ಣ ಕೋಟನೂರ, ಪರಶುರಾಮ ರಾಜಾಪುರ, ಮಲ್ಲು ತಳ್ಳಳ್ಳಿ, ಬಸವರಾಜ ದೊಡ್ಡಮನಿ, ಬಸವರಾಜ ವಡಗೇರಾ ಇತರರಿದ್ದರು.