ಪ್ರೇಮ ವೈಫಲ್ಯಕ್ಕೆ ಮನನೊಂದು ಕೆರೆಗೆ ಹಾರಿ ಅತಿಥಿ ಉಪನ್ಯಾಸಕ ಆತ್ಮಹತ್ಯೆ: ಇಂದು ಬೆಳಗ್ಗೆ ಶವ ಪತ್ತೆ

Teacher (1)
Published on

ಕಲಬುರಗಿ: ಪ್ರೇಮ ವೈಫಲ್ಯಕ್ಕೆ ಮನನೊಂದು ನಿನ್ನೆ ಕೆರೆಗೆ ಹಾರಿದ್ದ ಅತಿಥಿ ಉಪನ್ಯಾಸಕರೊಬ್ಬರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಕಲಬುರಗಿಯ ಅಪ್ಪನ ಕೆರೆಗೆ ಹಾರಿ ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರನ್ನು ಅಂಬರೀಶ್ (35) ಎಂದು ಗುರುತಿಸಲಾಗಿದೆ. ಈತ ನಗರದ ಲಾಲ್​ಗೇರಿ ಕ್ರಾಸ್​ನ ನಿವಾಸಿ.

ನಿನ್ನೆ ಮನೆಗೆ ಫೋನ್​ ಮಾಡಿ ಹೇಳಿ ಕೆರೆಗೆ ಹಾರಿದ್ದರು ಎಂದು ಹೇಳಲಾಗಿದೆ. ತೀವ್ರ ಶೋಧ ಕಾರ್ಯಾಚರಣೆ ಬಳಿಕ ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದುಬಂದಿದೆ.

ಆತ್ಮಹತ್ಯೆ ಸಂಬಂಧ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net