ಪ್ರೇಮ ಪ್ರಕರಣ: ಕುಡಿಯಲು ನೀರು ಕೇಳಿದ್ರೆ ಹೆಂಡತಿಯ ಮೂತ್ರ ಕುಡಿಯೆಂದ ಇನ್ಸ್​ಪೆಕ್ಟರ್​!

Love Case
Published on

ಕಲಬುರಗಿ: ಯುವಕ-ಯುವತಿ ಪ್ರೀತಿಸಿ ಮನೆ ಬಿಟ್ಟು ತೆರಳಿದ್ದಕ್ಕೆ ಪೊಲೀಸರು ಯುವಕನ ಪಾಲಕರನ್ನು ಠಾಣೆ ಎಳೆತಂದು ಥಳಿಸಿರುವ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಮೂಲದ ಕಸ್ತೂರಿ ಹಾಗೂ ವಿಜಯಪುರ ಮೂಲದ ಅಯ್ಯಪ್ಪ ಸ್ವಾಮಿ ಬೆಳಗಾವಿಯ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಸಹಪಾಠಿಗಳಾಗಿದ್ದರಿಂದ ಇಬ್ಬರ ನಡುವೆ ಪರಿಚಯವಾಗಿ ಪ್ರೇಮಾಂಕರವಾಗಿತ್ತು. ಪ್ರೀತಿಯ ಅಲೆಯಲ್ಲಿ ತೇಲಾಡುತ್ತಿದ್ದ ಪ್ರೇಮಿಗಳು ಕಳೆದ ಮಂಗಳವಾರ ಮನೆ‌ಬಿಟ್ಟು ತೆರಳಿದ್ದರು. ಇದರ ಬೆನ್ನಲ್ಲೇ ಕಸ್ತೂರಿ ಪೋಷಕರು ಕಲಬುರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಅನ್ವಯ ವಿಚಾರಣೆಗೆಂದು ಯುವಕನ ತಂದೆ ತುಕಾರಾಮ್ ಮತ್ತು ತಾಯಿ ಸುಜಾತರನ್ನು ಕರೆತಂದು ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕಲಬುರಗಿಯ ಮಹಿಳಾ ಪೊಲೀಸ್ ಠಾಣೆಯ ವಿರುದ್ಧ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಿಂದ ಪಾಲಕರನ್ನು ಕರೆಯಿಸಿ ಇನ್ಸ್​ಪೆಕ್ಟರ್​ ಸಂಗಮೇಶ್ ಪಾಟೀಲ್​ ಮತ್ತು ಸಿಬ್ಬಂದಿ ನೆಹರು ಸಿಂಗ್ ಹಲ್ಲೆ ಮಾಡಿದ್ದಾರೆನ್ನಲಾಗಿದೆ.

ಇಷ್ಟೇ ಅಲ್ಲದೆ, ಕುಡಿಯಲು ನೀರು ಕೇಳಿದರೆ ನಿನ್ನ ಹೆಂಡತಿಯ ಮೂತ್ರ ಕುಡಿಯುವಂತೆ ನಿಂದಿಸಿದ್ದಾರೆ. ಯುವಕನ ತಾಯಿಗೂ ಅಮಾನವೀಯವಾಗಿ ಥಳಿಸಿರುವ ಆರೋಪವಿದ್ದು, ಗಾಯಗೊಂಡ ಪಾಲಕರನ್ನು ಕಲಬುರಗಿ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net