ಕಲಬುರಗಿ ನಿವೃತ್ತಿ ಅಂಚಿನಲ್ಲಿದ್ದ ಇಇ, ಪಿಡಿಒ ಕಚೇರಿ, ಮನೆಗಳ ಮೇಲೆ ಲೋಕಾಯುಕ್ತ ದಾಳಿ

IMG-20250624-WA0012
Published on

ಕಲಬುರಗಿ: ನಿವೃತ್ತಿ ಅಂಚಿನಲ್ಲಿದ್ದ ಆದಾಯ ಮೀರಿ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (ಆರ್‌ಡಿಪಿಆರ್‌) ಇಇ ಹಾಗೂ ಪಿಡಿಒ ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ಮನೆಗಳ ಮೇಲೆ ಮಂಗಳವಾ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

ಇಇ ಮಲ್ಲಿಕಾರ್ಜುನ ಅಲಿಪುರ್ ಅವರ ಕಲಬುರಗಿ ನಗರದಲ್ಲಿನ ಕಚೇರಿ, ಜೇವರ್ಗಿ ಕ್ರಾಸ್ ಸಮೀಪ ಹಾಗೂ ಬೆಂಗಳೂರು ನಗರದಲ್ಲಿನ ಮನೆಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಮಲ್ಲಿಕಾರ್ಜುನ ಅಲಿಪುರ್ ಅವರು ಇನ್ನು ನಾಲ್ಕು ದಿನಗಳಲ್ಲಿ ನಿವೃತ್ತಿ ಆಗಲಿದ್ದರು ಎನ್ನಲಾಗಿದೆ.

ಸಣ್ಣೂರು ಪಿಡಿಒ ರಾಮಚಂದ್ರ ಅವರ ಸೇಡಂ ರಸ್ತೆಯ ಮಾನಸ ರೆಸಿಡೆನ್ಸಿ ಲೇಔಟ್ ಹಾಗೂ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬೊಮ್ಮನಹಳ್ಳಿ ಮನೆಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿ ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್, ಡಿವೈಎಸ್ಪಿಗಳಾದ ಗೀತಾ ಬೇನಾಳ, ಹನುಮಂತ ರಾಯ, ಶೀಲವಂತ, ರಾಜಶೇಖರ, ಇನ್‌ಸ್ಪೆಕ್ಟರ್‌ಗಳಾದ ಅರುಣ್‌ಕುಮಾರ್, ಸಂತೋಷ ನೇತೃತ್ವದ ತಂಡ ದಾಳಿ ನಡೆಸಿದ್ದು, ಶೋಧ ಕಾರ್ಯದಲ್ಲಿ ನಿರತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net